HomeReviewsದಿನೇಶ್ ಬಾಬು ಅವರ ಕನಸನ್ನು ನನಸಾಗಿಸಿದ ಸಿನಿಮಾ.

ದಿನೇಶ್ ಬಾಬು ಅವರ ಕನಸನ್ನು ನನಸಾಗಿಸಿದ ಸಿನಿಮಾ.

ದಿನೇಶ್ ಬಾಬು ಚಿತ್ರರಂಗದ ಪ್ರತಿಭಾವಂತ ಹಿರಿಯ ನಿರ್ದೇಶಕರಲ್ಲಿ ಒಬ್ಬರು. ಅಮೃತವರ್ಷಿಣಿಯಂತಹ ಮ್ಯೂಸಿಕಲ್ ಹಿಟ್ ಸಿನಿಮಾ ಕೊಟ್ಟಂಥ ನಿರ್ದೇಶಕರು, ಇವಾಗ ಮತ್ತೆ ಚಂದನವನದಲ್ಲಿ ಸದ್ದು ಮಾಡ್ತಿದ್ದು, ಹಗಲು ಕನಸು ಸಿನಿಮಾ ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಪಡೆಯುತ್ತಿದೆ.

ಶ್ರೀಮಂತರ ಮನೆಯಲ್ಲಿ ಯಾರು ಇರೋದಿಲ್ಲ. ಆಗ ಹುಡಗಿಯೊಬ್ಬಳು ಮನೆಯೊಳಗೆ ಬರುತ್ತಾಳೆ. ಆಗ ಎಲ್ಲರ ತಲೆಯಲ್ಲೂ ಬರೋದು ಬೇರೆಯದೇ ಇರುತ್ತೆ. ಬಟ್ ಅಲ್ಲಿ ಏನಾಗುತ್ತೆ ಅನ್ನೋದೆ ಕಥಾ ಹಂದರ. ಈ ಕಥೆಯನ್ನ ಕಾಮಿಡಿ ಮೂಲಕ ಎಲ್ಲೂ ಬೋರ್ ಹೊಡೆಸದೇ, ಸೂಕ್ಷ್ಮವಾಗಿ ಹೇಳಿರೋ ದಿನೇಶ್ ಬಾಬು ಅವರಿಗೆ ಅಭಿನಂದನೆಗಳು.

ನಾಯಕನಾಗಿ ಮಾಸ್ಟರ್ ಆನಂದ್ ಎಂದಿನಂತೆ ತಮ್ಮ ನೈಜ ನಟೆನೆಯ ಮೂಲಕ ರಂಜಿಸಿ, ಜನರ ಮನಸ್ಸಲ್ಲಿ ಉಳಿಯುತ್ತಾರೆ. ಹಾಗೇನೆ ಆನಂದ್ ಜೊತೆಯಾಗಿ ಸನಿಹ ಯಾದವ್ ಸಹ ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದು, ಪ್ರಶಂಸೆಗೆ ಪಾತ್ರರಾಗುತ್ತಾರೆ. ಇನ್ನುಳಿದಂತೆ ವಾಣಿಶ್ರೀ, ನಿನಾಸಂ ಅಶ್ವತ್ಥ್, ಅಶ್ವಿನ್ ಹಾಸನ್ ಪಾತ್ರ ಇಷ್ಟವಾಗುತ್ತೆ.

ಎಪಿಆರ್ ಫಿಲಮ್ಸ್ ಬಂಡವಾಳ ಹೂಡಿರೋ ಈ ಸಿನಿಮಾ ಮೂಲಕ ಮತ್ತೆ ದಿನೇಶ್ ಬಾಬು ಅವರು ಸದ್ದು ಮಾಡ್ತಿದ್ದು, ಕೊಟ್ಟ ಕಾಸಿಗೆ ಮೋಸವಿಲ್ಲದಂತೆ ಪ್ರೇಕ್ಷಕ ಚಿತ್ರ ನೋಡಬಹುದು.

Must Read

spot_img
Share via
Copy link
Powered by Social Snap