ಹೊಸಬರ ಚಿತ್ರಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ಚಿತ್ರರಂಗದಲ್ಲಿ ಹೊಸತನದ ಪ್ರಯೋಗಕ್ಕೆ ನಾಂದಿಯಾಗಿದೆ. ಕಿಚ್ಚ ಸುದೀಪ್ ಬೆಂಬಲದೊಂದಿಗೆ ಟ್ರೈಲರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಹೊಸಬರ ಐ1 ಮೂವಿ, ಹೊಸತನದ ಪ್ರಯೋಗಕ್ಕೆ ಕೈಹಾಕಿ ಬೇಶ್ ಎನಿಸಿಕೊಂಡಿದೆ.
ಯುವ ಪ್ರತಿಭೆ ಆರ್ ಎಸ್ ರಾಜ್ ಕುಮಾರ್ ಆಕ್ಷನ್ ಕಟ್ ಹೇಳಿರೋ ಐ1 ಸಿನಿಮಾ, ಒಂದು ಟೆಂಪೊ ಟ್ರಾವೆಲರ್ ನಲ್ಲಿ ಮೂರು ಜನ ಯುವಕರ ನಡುವೆ ನಡೆಯೋ ಘಟನೆ ಇದಾಗಿದೆ. ಸಮಾಜದ ಪ್ರತಿಷ್ಠಿತ ಮೂವರು ವ್ಯಕ್ತಿಗಳ ಮಕ್ಕಳನ್ನ ಕಿಡ್ನಾಪ್ ಮಾಡಿ ಟೆಂಪೋ ಟ್ರಾವೆರ್ ನಲ್ಲಿ ಬಂಧಿಸಿ ಆ ವ್ಯಕ್ತಿಗಳಿಗೆ ಒಬ್ಬ ಕಾಮನ್ ಮ್ಯಾನ್ ಹೇಗೆ ಪಾಠ ಕಲಿಸುತ್ತಾನೆ ಎಂಬುದೇ ಈ ಕಥಾ ಹಂದರ. ಆ ಮೂವರು ಯುವಕರ ಪಾತ್ರಧಾರಿಗಳಾಗಿ ರಂಜನ್, ಧೀರಜ್ ಪ್ರಸಾದ್, ಕಿಶೋರ್ ತಮ್ಮ ಪಾತ್ರಗಳಿಗೆ ತುಂಬಾನೇ ಅಚ್ಚುಕಟ್ಟಾಗಿ ಜೀವ ತುಂಬಿದ್ದು, ಸಿನಿಮಾ ಪೂರ್ತಿ ಈ ವಾಹನದಿಂದ ಹೊರಗೆ ಹೋಗಲ್ಲ.
ಮಾದೇಶ್ವರ ಭಜನಾ ಮಂಡಳಿ ನಿಂಗರಾಜು ರಚಿಸಿರೋ ಭಜನಾ ಪದಗಳು ಸಿನಿಮಾದ ನಡುವೆ ಒಂಥರಾ ಮಜಾ ಕೊಡುತ್ತೆ. ಸಿನಿಮಾದಲ್ಲಿ ಈ ಹಾಡುಗಳನ್ನು ತುಂಬಾನೇ ಸರಿಯಾಗಿ ಬೆನಸಿಕೊಂಡಿದ್ದು, ಇದರಲ್ಲೂ ಹೊಸತನ ಕಾಣುತ್ತೆ. ಈ ಚಿತ್ರಕ್ಕೆ ಶೈಲಜಾ ಪ್ರಕಾಶ್ ಬಂಡವಾಳ ಹೂಡಿದ್ದು, ವಿಭಿನ್ ಅವರ ಸಂಗೀತ ಚಿತ್ರದಲ್ಲಿ ಮತ್ತೊಂದು ಪಾತ್ರವಹಿಸುತ್ತೆ. ಸಿನಿಮಾ ಹೊಸಬರ ಪ್ರಯತ್ನ ಅನ್ಸೋದೆ ಇಲ್ಲ. ಆ ರೀತಿಯ ಪ್ರಯೋಗ ಮಾಡಿದ್ದಾರೆ ಚಿತ್ರತಂಡ.
ನಮ್ ಕಡೆಯಿಂದ ಸಿನಿಮಾಕ್ಕೆ 4/5