ಬಹುನಿರೀಕ್ಷಿತ ಬಾಲಿವುಡ್ ಬಿಗ್ ಬಾಸ್ ಮತ್ತು ಸ್ಯಾಂಡಲ್’ವುಡ್ ಬಿಗ್ ಬಾಸ್ ಅಭಿನಯಿಸಿರೋ ದಬಾಂಗ್-3 ಸಿನಿಮಾ ಇಂದು ತೆರೆಕಂಡಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಬಾಂಗ್ 3 ಮೊದಲ ಎರಡು ಅವತರಣಿಕೆಗಿಂತ ವಿಭಿನ್ನವಾಗಿ ಬಂದಿದ್ದು, ಸ್ವಲ್ಪ ಡಬ್ಬಿಂಗ್ ಮಾಡೋದ್ರಲ್ಲಿ ತಂಡ ಎಡವಿದೆಯಾ ಅನ್ಸುತ್ತೆ. ಕಥೆಯಲ್ಲಿ ಅಂಥದೇನ್ ಹೊಸದೇನಿಲ್ಲ. ಸಲ್ಮಾನ್ ಖಾನ್ ಗೆ ಪೂರ್ತಿ ಸಿನಿಮಾ ಖಳನಾಯಕನಾಗಿ ಕಾಡುವ ಕಿಚ್ಚ ಸುದೀಪ್ ಸಿನಿಮಾದುದ್ಧಕ್ಕೂ ಮಿಂಚಿದ್ದು, ಎಲ್ಲೋ ಸುದೀಪ್ ಮುಂದೆ ಸ್ವಲ್ಪ ಸಲ್ಮಾನ್ ಖಾನ್ ಮಂಕಾದಂಗೆ ಕಾಣುತ್ತಾರೆ.
ಸಲ್ಮಾನ್ ಖಾನ್ ಪ್ರೇಯಸಿಯಾಗಿ ಸಾಯಿ ಮಂಜೇಕರ್ ಮುದ್ದಾಗಿ ಅಭಿನಯಿಸಿದ್ದು, ಈ ಇಬ್ಬರ ಪ್ರೀತಿಯಲ್ಲಿರೋವಾಗ ಬಿಲ್ಲಿ ಸಿಂಗ್ ಪಾತ್ರಧಾರಿಯಾದ ಕಿಚ್ಚ ಸುದೀಪ್ ಗೆ ಅವಳ ಮೇಲೆ ಮೋಹವಾಗುತ್ತೆ. ಆ ಟೈಮ್ ನಲ್ಲಿ ಈ ಪ್ರೀತಿ ಸಿಗಲ್ಲ ಅಂತ ಅವಳನ್ನ ಬಿಲ್ಲಿ ಸಿಂಗ್ ಸಾಯಿಸುತ್ತಾನೆ. ಪೋಲೀಸ್ ಆಗಿ ಕೆಲಸಕ್ಕೆ ಸೇರಿದಾಗ ಹೆಣ್ಣಮಕ್ಕಳ ದಂದೆ ವಿಚಾರವಾಗಿ ಮತ್ತೆ ಎದುರಾಗೋ ಚುಲ್ ಬುಲ್ ಪಾಂಡೆ ಮಧ್ಯೆ ಹೇಗೆಲ್ಲಾ ದ್ವೇಷ ಕಾಣುತ್ತೆ ಎಂಬುದೇ ಕಥಾಹಂದರ.
ಸಲ್ಮಾನ್ ಖಾನ್ ಹೆಂಡ್ತಿಯಾಗಿ ಸೋನಾಕ್ಷಿ ಸಿನ್ಹಾ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದು, ಸಾಯಿ ಮಂಜೇಕರ್ ಸಖತ್ತಾಗಿ ಕಾಣ್ತಾರೆ. ಸಿನಿಮಾದಲ್ಲಿ ಹಾಡುಗಳು ಸದ್ದು ಮಾಡಿದ್ದು, ಅನೂಪ್ ಬಂಡಾರ್ಯ ಪ್ರಯತ್ನಕ್ಕೆ ಮೆಚ್ಚಲೇಬೇಕು. ಚಿತ್ರದಲ್ಲಿ ಡೈಲಾಗ್ಸ್ ಗಳು ಚೆನ್ನಾಗಿ ಬಂದಿದ್ದು, ಗುರುದತ್ತ್ ಗಾಣಿಗ ಬರವಣಿಗೆ ಖುಷಿ ಕೊಡುತ್ತೆ.
ಸುದೀಪ್ ಈ ಸಿನಿಮಾ ಮೂಲಕ ಮತ್ತೊಮ್ಮೆ ಬಾಲಿವುಡ್ ಲೆವೆಲ್ ನಲ್ಲಿ ಸದ್ದು ಮಾಡೋದಂತು ಗ್ಯಾರಂಟಿ. ಸೈರಾ ನಂತರ ಮತ್ತೊಮ್ಮೆ ಮಿಂಚಿದ್ದು, ನಟನೆಯಲ್ಲಿ ಕಿಚ್ಚನ ಮುಂದೆ ಸಲ್ಮಾನ್ ಡಲ್ ಹೊಡೆಯುತ್ತಾರೆ. ಸ್ವಲ್ಪ ನಿಧಾನವಾಗಿ ಸಾಗುವ ಕಥೆಗೆ ವೇಗ ಬೇಕಿತ್ತು ಅನ್ಸುತ್ತೆ. ಕನ್ನಡದಲ್ಲಿ ಸಿನಿಮಾ ನೋಡಬಹುದು.