Kannada Beatz
News

ಈ ವರ್ಷದ ಎಕ್ಸ್ ಪೆಕ್ಟೆಡ್ ತುಳು ನಾಡಿನಲ್ಲಿ ಚಿತ್ರಿಸಿದ ‘ರಾಜನಿವಾಸ’ ಚಿತ್ರ ಬಿಡುಗಡೆಗೆ ಸಿದ್ದ

ರಾಜ‌‌ನಿವಾಸ ಟ್ರೇಲರ್ ನೋಡಿದರೆ ತಕ್ಷಣ ಕಾಂತಾರದ ಝಲಕ್ ಕಾಣಿಸೀತು. ಆದರೆ ಇದು ಕಾಂತಾರಕ್ಕಿಂತಲೂ‌ ಮೊದಲೇ ತಯಾರಾದಂಥ ಸಬ್ಜೆಕ್ಟ್. ಆದರೆ ಕೃತಿ ರೂಪಕ್ಕೆ ಇಳಿದು ಪರದೆಗೆ ಸಿದ್ಧಗೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದೆ. ನಿಜ ಹೇಳಬೇಕೆಂದರೆ ಕಾಂತಾರ ಬಂದ ಬಳಿಕ‌ ಹೋಲಿಕೆಯ ಆರೋಪ ಎದುರಾದೀತು ಎಂದು ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಗಿದೆ. ಆದರೆ ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಚಿತ್ರದಲ್ಲಿ ಬೇರೆಯೇ ಕಥೆ ಇದೆ ಎನ್ನುತ್ತಾರೆ ನಿರ್ದೇಶಕ ಮಿಥುನ್ ಸುವರ್ಣ.

ರಾಜ‌ನಿವಾಸದಲ್ಲಿ ನಾಯಕ ಪಾತ್ರ ನಿರ್ವಹಿಸಿ ರಾಜನಂತೆ ಮೆರೆದಾಡಿರುವವರು ರಾಘವ್. ಹಾಡು ಮತ್ತು ಹೊಡೆದಾಟದ ಗ್ಲಿಂಪ್ಸ್ ಕಂಡವರಿಗೆ ಇದೊಂದು ಮಾಸ್ ಮೂವಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ.‌ ನಾಯಕಿಯಾಗಿ ಕೃತ್ತಿಕಾ ಕಂಗೊಳಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸಿದೆ. ಈ ಎಲ್ಲ ಕಾರಣಗಳಿಂದಲೇ ರಾಜ‌ನಿವಾಸ ಕುತೂಹಲ ಮೂಡಿಸಿದೆ.

ಟ್ರೇಲರ್ ಮತ್ತು ಮೂರು ಹಾಡುಗಳು ಈಗಾಗಲೇ ಸಿನಿಮಾ ಪ್ರಿಯರ ಮನಗೆದ್ದಿದೆ. ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಪ್ಯಾನ್ ಇಂಡಿಯಾದಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಸಿನಿಮಾರಂಗದ ಅನೇಕರು ರಾಜನಿವಾಸ ಈ ವರ್ಷದ ಅತ್ಯುತ್ತಮ ಚಿತ್ರವಾಗಲಿದೆ ಎಂದಿದ್ದಾರೆ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್
ಕೆಲಸ ಮುಕ್ತಾಯ ಹಂತದಲ್ಲಿದೆ. ಇದೇ ತಿಂಗಳಾಂತ್ಯಕ್ಕೆ‌ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ.

ಕನ್ನಡದ‌ ದೊಡ್ಡ ವಿತರಕ ಸಂಸ್ಥೆಗಳು ಸಿನಿಮಾ ಬಿಡುಗಡೆ ಗೆ ಕೇಳುತ್ತಿದ್ದಾರೆ ಮತ್ತು ತಮಿಳು , ತೆಲುಗು ಭಾಷೆಯಲ್ಲೂ ಬೇಡಿಕೆ ಇದೆ ಎನ್ನುತ್ತಿದ್ದಾರೆ ನಿರ್ಮಾಪಕರು.

ರಾಜ‌ನಿವಾಸ ಚಿತ್ರವನ್ನು ಡಿಎಎಂ36ಸ್ಟುಡೀಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ‌ ಮಾಡಲಾಗಿದೆ. ದಾ. ಪಿ ಆಂಜನಪ್ಪ ನಿರ್ಮಾಪಕರು. ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಬಂಡವಾಳ ಹೂಡಿದ್ದಾರೆ.‌ ಬಲ ರಾಜ್ವಾಡಿ , ಯಮುನಾ ಶ್ರೀನಿಧಿ , ನೀನಾಸಂ ಅಶ್ವಥ್ , ಸಹನ , ಪ್ರಶಾಂತ್‌ ಮೊದಲಾದ ಕಲಾವಿದರು ಪ್ರಮುಖ‌ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ ಇರುವ ರಾಜ‌ನಿವಾಸದ ಛಾಯಾಗ್ರಹಣ ರಮೇಶ್ ರಾಜ್ ಅವರದ್ದಾಗಿದೆ.

Related posts

ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಫಿಕ್ಸ್….ಆಗಸ್ಟ್ 3 2023ಕ್ಕೆ JGM ರಿಲೀಸ್

Kannada Beatz

ಬ್ಯಾಂಕ್ ಲೂಟಿಗೆ ಹೊರಟ ದೀಕ್ಷಿತ್ ಶೆಟ್ಟಿ ಹಾಗೂ ತಂಡ
ಹೆಚ್ ಕೆ ಪ್ರಕಾಶ್ ನಿರ್ಮಾಣದ ೫ ನೇ ಚಿತ್ರ “ಬ್ಯಾಂಕ್ of ಭಾಗ್ಯಲಕ್ಷ್ಮಿ”

Kannada Beatz

ಆರ್ಯನ್ ರೋಷನ್ ನೃತ್ಯ ನಿರ್ದೇಶಕ ಶ್ರೀ ಪಲ್ಲವಿ ನಿರ್ದೇಶನದ ಕ್ರ್ಯಾನ್‌ಬೆರಿ ಬೇಬೀಸ್ ಮುಂದಿನ ಯೋಜನೆಯಾಗಿದೆ

Kannada Beatz

Leave a Comment

Share via
Copy link
Powered by Social Snap