Kannada Beatz
News

ಟಿವಿ9 ಕನ್ನಡ ವಾಹಿನಿಯ ಲೈಫ್ ಸ್ಟೈಲ್ ,ಆಟೋಮೊಬೈಲ್ ಮತ್ತು‌ ಫರ್ನಿಚರ್ ಎಕ್ಸ್ ಪೋ ಗೆ ಭರ್ಜರಿ ರೆಸ್ಪಾನ್ಸ್

ಏಕ್ ಲವ್ ಯಾ ಏಳುಮಳೆ‌ ಹೀರೋ ರಾಣ ರಿಂದ ಟಿವಿ9 ಕನ್ನಡ ವಾಹಿನಿಯ ಲೈಫ್ ಸ್ಟೈಲ್ ,ಆಟೋಮೊಬೈಲ್ ಮತ್ತಿ ಫರ್ನಿಚರ್ ಎಕ್ಸ್ ಪೋ 2025 ಉದ್ಘಾಟನೆಮಾಡಿದರು.

ಟಿವಿ9 ಕನ್ನಡ ವಾಹಿನಿಯಿಂದ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2025 ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್ 2ರಿಂದ 5ರವರೆಗೆ ಬೃಹತ್ ಮೇಳಕ್ಕೆ ಭರ್ಜಿರಿ ರೆಸ್ಪಾನ್ಸ್ ಪಡೆದುಕೊಂಡಿದ್ದೆ. ಇದರಲ್ಲಿ ಫ್ಯಾಶನ್ ಜಗತ್ತಿನ ದೊಡ್ಡ ಬ್ರ್ಯಾಂಡ್ಗಳು, ಹೊಚ್ಚ ಹೊಸ ಕಾರುಗಳು, ಆಕರ್ಷಕ ಪೀಠೋಕರಣಗಳು ಒಂದೇ ವೇದಿಕೆಯಲ್ಲಿ ಕಾಣಸಿದ್ದವು.

ಕರ್ನಾಟಕದ ನಂಬರ್ ಒನ್ ಸುದ್ದಿ ವಾಹಿನಿಯಾಗಿರುವ ಟಿವಿ9 ಕನ್ನಡದಿಂದ ಮತ್ತೊಂದು ಮೆಗಾ ಎಕ್ಸ್ಪೋ ಆಯೋಜನೆ ಮಾಡಿತ್ತು. ಅರಮನೆ ಮೈದಾನದಲ್ಲಿ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ನಡೆಯಲಿದೆ. ಅಕ್ಟೋಬರ್ 2ರಿಂದ 5ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಇದು ಬೆಂಗಳೂರಿನಲ್ಲಿ ಈ ವರ್ಷ ನಡೆಯುವ ಅತಿದೊಡ್ಡ ಮೇಳವೆನಿಸಿದೆ.
ಹೊಸ ವಾಹನಗಳ ಅನ್ವೇಷಣೆಯಲ್ಲಿರುವವರಿಗೆ, ಹೋಮ್ ಡೆಕೋರೇಶನ್ ಆಸಕ್ತರಿಗೆ ಈ ಎಕ್ಸ್ಪೋ ಸರಿಯಾದ ವೇದಿಕೆಯಾಗಿದೆ. ಈ ಹಿಂದಿನ ಆವೃತ್ತಿಯ ಮೇಳಗಳಿಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಸಾಕಷ್ಟು ಜನರು ಎಕ್ಸ್ಪೋದ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.

ಟಿವಿ9 ಕನ್ನಡ ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋದಲ್ಲಿ ಏನೇನು ನಿರೀಕ್ಷಿಸಬಹುದು?
ಎಲೆಕ್ಟ್ರಾನಿಕ್ ಗ್ಯಾಜೆಟ್: ಸ್ಮಾರ್ಟ್ ಹೋಮ್ ಟೆಕ್ನಾಲಜಿಯ ಇತ್ತೀಚಿನ ಉತ್ಪನ್ನಗಳು, ಅಡುಗೆಮನೆ ಪರಿಕರಗಳು, ಪರ್ಸನಲ್ ಗ್ಯಾಜೆಟ್ಗಳು ಮೊದಲಾದವನ್ನು ಈ ಎಕ್ಸ್ಪೋದಲ್ಲಿ ಕಾಣಬಹುದು. ಹಾಗೆಯೇ, ದೇಶದ ಅತ್ಯುತ್ತಮ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ಗಳ ಉತ್ಪನ್ನಗಳನ್ನು ಈ ಮೇಳದಲ್ಲಿ ಕಾಣಬಹುದು.

ಆಟೊಮೊಬೈಲ್ ಪೆವಿಲಿಯನ್: ಹೊಚ್ಚ ಹೊಸ ಬ್ರ್ಯಾಂಡ್​ಗಳ ಎಲೆಕ್ಟ್ರಿಕ್ ವಾಹನಗಳು, ಎಸ್​ಯುವಿ, ಬೈಕ್, ಸ್ಕೂಟರ್, ಕಾನ್ಸೆಪ್ಟ್ ಕಾರ್ ಇತ್ಯಾದಿಯ ಪ್ರದರ್ಶನ ಇರುತ್ತದೆ. ಟೆಸ್ಟ್ ರೈಡ್ ಮಾಡಿ ವಾಹನದ ಪ್ರತ್ಯಕ್ಷ ಅನುಭವ ಪಡೆಯಬಹುದು. ವಿಆರ್ ಮೂಲಕವೂ ವಾಹನದ ಡ್ರೈವಿಂಗ್ ಎಕ್ಸ್​ಪೀರಿಯನ್ಸ್ ಪಡೆಯಬಹುದು.

ಫರ್ನಿಚರ್ ಮತ್ತು ಹೋಮ್ ಡೆಕೋರೇಶನ್: ಆಕರ್ಷಕ ಹಾಗೂ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳು, ಇಂಟೀರಿಯರ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್ಸ್ ಮತ್ತಿತರ ಉತ್ಪನ್ನಗಳು ಈ ಟಿವಿ9 ಎಕ್ಸ್​ಪೋದಲ್ಲಿ ನೋಡಲು ಸಿಗುತ್ತವೆ. ನಿಮ್ಮ ಮನೆ ಮತ್ತು ಮನಸ್ಸಿಗೆ ಹೊಂದಿಕೆಯಾಗುವ ಗೃಹಾಲಂಕಾರಗಳನ್ನು ಇಲ್ಲಿ ಅನ್ವೇಷಿಸಬಹುದು.

ಫ್ಯಾಷನ್ ಮತ್ತು ಜ್ಯುವೆಲರಿ: ಹೊಚ್ಚ ಹೊಸ ಫ್ಯಾಷನ್ ಟ್ರೆಂಡ್​ಗಳು, ಡಿಸೈನರ್ ಕಲೆಕ್ಷನ್ಸ್, ಟ್ರೆಂಡಿ ಡಿಸೈನ್ ಇರುವ ಜ್ಯುವೆಲರಿಗಳನ್ನು ಮೇಳದಲ್ಲಿ ಕಾಣಬಹುದು.

Related posts

ಕೋಮಲ್ ಕುಮಾರ್ ಅಭಿನಯದ “ಯಲಾಕುನ್ನಿ” ಮೇರಾ ನಾಮ್ ವಜ್ರಮುನಿ..! ಚಿತ್ರ ಆರಂಭ.
ವಜ್ರಮುನಿ ಮೊಮ್ಮಗ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ..!

Kannada Beatz

“ನಿಲ್ಲಬೇಡ” ಹಾಡಿನ ಮೂಲಕ ಬಂದರು ಉತ್ತರ ಕರ್ನಾಟಕದ ಪ್ರತಿಭೆ ಸುನಿಧಿ ನೀಲೊಪಂತ್ .

Kannada Beatz

ದರ್ಶನ್ & ಯಶ್ ಪುನೀತ್ ಗಿಂತ ದೊಡ್ಡ ನಟರಲ್ಲ..! ಹೀಗೆ ಹೇಳಿದ್ದು ಯಾರು ಗೊತ್ತಾ? ಈ ಸುದ್ದಿ ಓದಿ

administrator

Leave a Comment

Share via
Copy link
Powered by Social Snap