HomeNewsಯುಗಾದಿ ಹಬ್ಬಕ್ಕೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್

ಯುಗಾದಿ ಹಬ್ಬಕ್ಕೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್

ಯಕ್ಷಗಾನ ವೇಷದಲ್ಲಿ ಪ್ರಜ್ವಲ್

ಯಕ್ಷಗಾನ ಕಲಾವಿದನಾದ ಪ್ರಜ್ವಲ್ ದೇವರಾಜ್

ಯುಗಾದಿ ಹಬ್ಬಕ್ಕೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿದ್ರೆ ನಿಜಕ್ಕೂ ಪ್ರಜ್ವಲ್ ಅವರೇನಾ ಎಂದು ಅಚ್ಚರಿ ಪಡುವಂತಿದೆ.  ಮೊಟ್ಟ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದು ಪೋಸ್ಟರ್ ರೋಮಾಂಚನಕಾರಿಯಾಗಿದೆ. ಅಂದಹಾಗೆ ಇದು ಕರಾವಳಿ ಸಿನಿಮಾದ ಹೊಸ ಪೋಸ್ಟರ್. ಪ್ರಜ್ವಲ್ ದೇವರಾಜ್ ಸದ್ಯ ಕರಾವಳಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 

ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಪ್ರಜ್ವಲ್ ದೇವರಾಜ್ ಅವರ ಹೊಸ ಲುಕ್ ರಿವೀಲ್ ಮಾಡುವ ಮೂಲಕ ಸಿನಿಮಾತಂಡ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಈಗಾಗಲೇ ಕರಾವಳಿ ಸಿನಿಮಾ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ನಡುವೆ ಯುಗಾದಿ ಹಬ್ಬದ ಪ್ರಯುಕ್ತ ಬಂದಿರುವ ಪ್ರಜ್ವಲ್ ಅವರ ಯಕ್ಷಗಾನ ಲುಕ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕರಾವಳಿ ಸಿನಿಮಾದಲ್ಲಿ ಪ್ರಜ್ವಲ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಬಳದ ಜೊತೆಗೆ ಯಕ್ಷಗಾನ ಕೂಡ ಕರಾವಳಿ ಸಿನಿಮಾದ ಹೈಲೈಟ್ ಗಳಲ್ಲಿ ಒಂದಾಗಿದೆ ಎನ್ನುವುದು ಈ ಲುಕ್ ನೋಡಿದ್ರೆ ಗೊತ್ತಾಗುತ್ತೆ. ಅಂದಹಾಗೆ ಈ ಲುಕ್ ಅನ್ನು  ಪ್ರೊಫೆಷನಲ್ ಕಲಾವಿದರೇ ಮಾಡಿದ್ದು ವಿಶೇಷ. ಯಕ್ಷಗಾನ ಭಾಗವತರೇ ಆಗಿರುವ ಪಲ್ಲವ ಗಾಣಿಗ ಎನ್ನುವರು ಈ ಲುಕ್ ಡಿಸೈನ್ ಮಾಡಿದ್ದಾರೆ. ಪ್ರಜ್ವಲ್ ಅವರಿಗೆ ಈ ಲುಕ್ ಡಿಸೈನ್ ಮಾಡಲು ಅರ್ಥ ದಿನಾ ತೆಗೆದುಕೊಂಡಿದ್ದಾರೆ. 

ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ 40ರಷ್ಟು ಚಿತ್ರೀಕರಣ ಮುಗಿಸಿದ್ದು 2ನೇ ಶೆಡ್ಯೂಲ್ ಯುಗಾದಿ ಹಬ್ಬದ ಬಳಿಕ ಪ್ರಾರಂಭವಾಗಲಿದೆ ಮಂಗಳೂರಿನ ಸುತ್ತಮುತ್ತ ಕರಾವಳಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಇದು  ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರಲಿದೆ. ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್ ಇದೆ,  ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ  ನಟ ಮಿತ್ರ, ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಸೇರಿದಂತೆ ಹಲವು ಪ್ರಖ್ಯಾತ ಕಲಾವಿದರು ನಟಿಸುತ್ತಿದ್ದಾರೆ.

Must Read

spot_img
Share via
Copy link
Powered by Social Snap