Kannada Beatz
News

ಸಿಂಪಲ್ ಸುನಿ ಸಾರಥ್ಯದ ‘ಮೋಡ ಕವಿದ ವಾತಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್

ನನ್ನೆದೆಯ ಹಾಡೊಂದನು ಎನ್ನುತ್ತಾ ಹೆಜ್ಜೆ ಹಾಕಿದ ಸಿಂಪಲ್ ಸುನಿ‌ ಶಿಷ್ಯ… ಮೋಡ ಕವಿದ ವಾತಾವರಣ ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿರುವ ನಿರ್ದೇಶಕ ಸಿಂಪಲ್ ಸುನಿ‌ ಈಗ ತಮ್ಮದೇ ಗರಡಿಯ ಹುಡ್ಗ ಶೀಲಮ್ ಅವರನ್ನು ಹೀರೋ ಆಗಿ ಲಾಂಚ್ ಮಾಡಿದ್ದಾರೆ. ಅದಕ್ಕಾಗಿ ಅವರು ಮೋಡ ಕವಿದ ವಾತಾವರಣವನ್ನೇ ಸೃಷ್ಟಿಸಿದ್ದಾರೆ. ಅರ್ಥಾತ್‌ ಸಿಂಪಲ್ ಸುನಿ ಹೊಸ ಸಿನಿಮಾ‌ ಮೋಡ ಕವಿದ ವಾತಾವರಣ.

‘ಮೋಡ ಕವಿದ ವಾತಾವರಣ’ ಸಿನಿಮಾದ ಹೀರೋ ಶೀಲಮ್ ನಿರ್ದೇಶಕ ಸಿಂಪಲ್ ಸುನಿಯೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಸಿಂಪಲ್ ಸುನಿ ತನ್ನ ಶಿಷ್ಯನನ್ನೇ ಹೀರೋ ಮಾಡುವುದಕ್ಕೆ ಮುಂದಾಗಿದ್ದಾರೆ. ಹಾಗಂತ ಶೀಲಮ್‌ ಇದೇ ಮೊದಲ ಬಾರಿಗೆ ನಟಿಸುತ್ತಿರೋದೇ ಅಲ್ಲ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಆಗಿ ಚಿತ್ರರಂಗದಲ್ಲಿ ಗೆಲುವಿನ ನಗೆ ಬೀರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮೊದಲ ಹಾಡನ್ನು ಅನಾವರಣ ಮಾಡಿದೆ.

ಬೆಂಗಳೂರಿನ ಎಂಎಂಬಿ‌ ಲೆಗಸಿಯಲ್ಲಿ ನಿನ್ನೆ ಮೋಡ ಕವಿದ ವಾತಾವರಣ ಚಿತ್ರದ ಸುದ್ದಿ ಗೋಷ್ಟಿ ಹಮ್ಮಿಕೊಳ್ಳಲಾಗಿತ್ತು . ಈ ವೇಳೆ ಇಡೀ ತಂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಜನವರಿ 9ರಂದು ತೆರೆಗೆ ಬರಲು ಪ್ಲ್ಯಾನ್ ಮಾಡಿದ್ದೇವೆ. ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇದೆ. ಇದು ಚಿತ್ರದ ಪ್ರಮೋಷನಲ್ ಸಾಂಗ್. ಈ ಸಾಂಗ್ ಇಷ್ಟು ಚೆನ್ನಾಗಿ ಬರಲು ಕಾರಣ ಆರ್ಟಿಸ್ಟ್, ಟೆಕ್ನಿಷಿಯನ್ಸ್ ಹಾಗೂ ಪ್ರೊಡ್ಯೂಸರ್. ಶೀಲಮ್ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ತುಂಬಾ ಡೆಡಿಕೇಷನ್ ಕೆಲಸ‌ ಮಾಡಿದ್ದಾರೆ. ಚಿತ್ರದಲ್ಲಿ ಮೋಕ್ಷಾ ಅವರು ಬೇರೆ ರೀತಿ ಕಾಣಿಸುತ್ತಾರೆ. ಸಾತ್ವಿಕಾ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

ನಟ ಶೀಲಮ್ ಮಾತನಾಡಿ, ಮೋಡ ಕವಿದ ವಾತಾವರಣ ಸಿನಿಮಾದ ಪ್ರತಿ ಮೂಮೆಂಟ್ ನನ್ನ ಕನಸು ನನಸಾದ ಕ್ಷಣ. ಒಂದೊಳ್ಳೆ ಟೆಕ್ನಿಕಲ್ ಟೀಂ ಜೊತೆ ಕೆಲಸ ಮಾಡಿರುವುದಕ್ಕೆ ಪುಣ್ಯ. ಒಂದು ತಿಂಗಳು ಈ ಹಾಡಿಗಾಗಿ ಪ್ರಾಕ್ಟೀಸ್ ಮಾಡಿದ್ದೇವೆ. ನಾನು ಅದ್ಭುತ ಡ್ಯಾನ್ಸರ್ ಅಲ್ಲ. ಇನ್ನೂ ಡ್ಯಾನ್ಸ್ ಕಲಿಯುತ್ತಿದ್ದೇನೆ. ಡ್ಯಾನ್ಸ್, ಪಾರ್ಫಾರ್ಮೆನ್ಸ್ ಮಾಡುವುದು ಕಷ್ಟವಾಗಿತ್ತು ಎಂದರು.

ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ನನ್ನೆದೆಯ ಹಾಡೊಂದನು ಎಂಬ ಮೆಲೋಡಿ ಗೀತೆ ಸರೆಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ನಾಯಕ ಶೀಲಮ್ ಹಾಗೂ ನಾಯಕಿಯರಾದ ಸಾತ್ವಿಕಾ ಹಾಗೂ ಮೋಕ್ಷಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸುನಿ ಸಾಹಿತ್ಯ ಬರೆದ ಈ ಗೀತೆಗೆ ಸಂಚಿತ್ ಹೆಗ್ಡೆ ಹಾಗೂ ಜೂಡಾ ಸ್ಯಾಂಡಿ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಮ್ಯೂಸಿಕ್ ನನ್ನೆದೆಯ ಹಾಡೊಂದನು ಸಾಂಗ್ ತೂಕ ಹೆಚ್ಚಿಸಿದೆ.

‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಅವರೆ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ.

Related posts

ಬೆಂಗಳೂರು, ಸಿದ್ಧರಾಗಿ! ಅನ್ವೇಷಿಸಲು ಇದು ಸಮಯ!

Kannada Beatz

ನಮ್ ಟಾಕೀಸ್ ಅರ್ಪಿಸುವ ‘ಫ್ಯಾನ್ಸ್ ಕ್ರಿಕೆಟ್ ಲೀಗ್ – 8 ಪಂದ್ಯಾವಳಿ ಈ ಬಾರಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿನಲ್ಲಿ ನಡೆಯಲಿದ್ದು

Kannada Beatz

N1ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

Kannada Beatz

Leave a Comment

Share via
Copy link