Kannada Beatz
News

‘ಜೈ’ ಚಿತ್ರದ ಪ್ರೇಮಗೀತೆ ಬಿಡುಗಡೆ

ನವೆಂಬರ್ 14ರಂದು ಬಿಡುಗಡೆ ರೂಪೇಶ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಚಿತ್ರ

ರೂಪೇಶ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಜೈ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಈ ಮೊದಲು ಚಿತ್ರದ ಒಂದು ಹಾಡನ್ನು ಕೆಲವು ದಿನಗಳ ಹಿಂದೆ ಶ್ರೀಮುರಳಿ ಬಿಡುಗಡೆ ಮಾಡಿದ್ದರು.

ಇದೀಗ ‘ಲವ್‍’ ಎಂಬ ಪ್ರೇಮಮಯ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ರಜತ್‍ ಹೆಗ್ಡೆ ಹಾಡಿದ್ದಾರೆ. ಈ ಹಾಡನ್ನು ಗುರುಕಿರಣ್‍, ನಿರಂಜನ್ ದೇಶಪಾಂಡೆ, ವಿನಯ್ ಗೌಡ, ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ದಂಪತಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಜೈ’ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದು, ಇದು ಅದ್ವಿತಿ ಅಭಿನಯದ ಮೊದಲ ತುಳು ಚಿತ್ರ. ಈ ಚಿತ್ರದಲ್ಲಿ ಅದ್ವಿತಿ, ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೂಪೇಶ್‍ ಮತ್ತು ಅದ್ವಿತಿ ಜೊತೆಗೆ ಸುನೀಲ್‍ ಶೆಟ್ಟಿ, ನವೀನ್ ‍ಪಡೀಲ್‍ ಮುಂತಾದವರು ನಟಿಸಿದ್ದಾರೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

KannadaScreens #Sandalwood #Jai #RoopeshShetty #SunielShetty #RajathHegde #RajDeepakShetty #AravindBolar #DevadasKapikad

Related posts

ಫಸ್ಟ್ ಲುಕ್ ನಲ್ಲೇ ಕುತೂಹಲ ಮೂಡಿಸಿದ “ವಿಐಪಿ” .

Kannada Beatz

“ನಮ್ ನಾಣಿ ಮದ್ವೆ ಪ್ರಸಂಗ” ದಲ್ಲಿ ನಗುನೇ ಜಾಸ್ತಿ ಅಂತಾರೆ ಹೇಮಂತ್ ಹೆಗ್ಡೆ

Kannada Beatz

ವೃತ್ತಿ ಜೀವನದ ಯಶಸ್ಸಿನ ನಂತರ ಕನಸಿನ ಬೆನ್ನತ್ತಿದ ತೇಜಸ್ವಿನಿ ಕೊಡವೂರ್

Kannada Beatz

Leave a Comment

Share via
Copy link
Powered by Social Snap