HomeNewsಜೂ 3ಕ್ಕೆ 'ಮೆಟಡೋರ್' ರಿಲೀಸ್…'ಮೆಟಡೋರ್'ನಲ್ಲಿಯೇ ಊರ್ ಊರ್ ಸುತ್ತಿ ಪ್ರಮೋಷನ್ ಮಾಡಿದ ಚಿತ್ರತಂಡ

ಜೂ 3ಕ್ಕೆ ‘ಮೆಟಡೋರ್’ ರಿಲೀಸ್…’ಮೆಟಡೋರ್’ನಲ್ಲಿಯೇ ಊರ್ ಊರ್ ಸುತ್ತಿ ಪ್ರಮೋಷನ್ ಮಾಡಿದ ಚಿತ್ರತಂಡ

ಜೂನ್ 3ರಿಂದ ಕನ್ನಡ ಬೆಳ್ಳಿತೆರೆ ಮೇಲೆ ಮೆಟಡೋರ್ ಪಯಣ ಶುರುವಾಗಲಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡಲು ಅಣಿಯಾಗಿದೆ.

ಮೆಟಡೋರ್ ಮೂಲಕ ಭರ್ಜರಿ ಪ್ರಮೋಷನ್

ಮೆಟಡೋರ್ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದ್ದು, ಹೀಗಾಗಿ ಚಿತ್ರತಂಡ ಭರ್ಜರಿ ಪ್ರಮೋಷನ್ ಗೆ ಇಳಿದಿದೆ. ಮೆಟಡೋರ್ ವಾಹನಕ್ಕೆ ಸಿನಿಮಾದ ಪೋಸ್ಟರ್ ಅಂಟಿಸಿ, ಈ ಮೆಟಡೋರ್ ಮೂಲಕವೇ ರಾಜ್ಯಾದ್ಯಂತ ಪ್ರಮೋಷನ್ ನಡೆಸ್ತಿದೆ.

ಐದು ಕಥೆಯುಳ್ಳ ಹೈಪರ್ ಲಿಂಕ್ ಸಿನಿಮಾವಾಗಿರುವ ಮೆಟಡೋರ್ ಚಿತ್ರಕ್ಕೆ ಸುದರ್ಶನ್ ಜಿ ಶೇಖರ್ ನಿರ್ದೇಶನ ಮಾಡಿದ್ದು, ಈ ಹಿಂದೆ ಇವರು 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಕಿರಣ್, ರವಿ ಮೈಸೂರು, ಅರ್ಚನಾ ಮಹೇಶ್,‌ ಮೋಹನ್ ಬಾಬು ಸೇರಿದಂತೆ ಹೊಸ ತಾರಾಬಳಗ ಸಿನಿಮಾದಲ್ಲಿದೆ.

ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಕಿರಣ್ ಕುಮಾರ್ ಎಸ್ ಹೆಚ್ ಬಂಡವಾಳ ಹೂಡಿದ್ದು, ತಂಗಾಳಿ ನಾಗರಾಜ್ ಸಂಗೀತ, ಗೋಪಿನಾಥ್ ಕ್ಯಾಮೆರಾ, ಕುಮಾರ್ ಸಿಎಚ್ ಸಂಕಲನ ಚಿತ್ರಕ್ಕಿದೆ.

Must Read

spot_img
Share via
Copy link
Powered by Social Snap