Kannada Beatz
News

ಬಹಳ ದಿನಗಳ ನಂತರದಲ್ಲಿ ಕನ್ನಡದಲ್ಲಿ ಫೋಟೋಗ್ರಾಫರ್ ಜೀವನದ ಕುರಿತಾದ ಕತೆಯೊಂದು ಸಿನೆಮಾವಾಗಿ ತೆರೆಗೆ ಬರಲು ಸಿದ್ದವಾಗಿದೆ

. ಲಿಖಿತ ಶೆಟ್ಟಿ, ಖುಷೀ ರವಿ, ತೇಜಸ್ವಿನಿ ಶರ್ಮ ಮುಖ್ಯ ಭೂಮಿಕೆಯಲ್ಲಿರುವ ‘ಫುಲ್ ಮೀಲ್ಸ್’ ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನೆಮಾ.. ಚಿತ್ರದುರ್ಗದ ಪ್ರತಿಭೆ ಎನ್ ವಿನಾಯಕ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಫುಲ್ ಮೀಲ್ಸ್’ ಸಿನೆಮಾ ಇದೇ ತಿಂಗಳು, ನವೆಂಬರ್ 21ಕ್ಕೆ ಬಿಡುಗಡೆಯಾಗಲಿದ್ದು, ಸಿನೆಮಾದ ಟ್ರೈಲರ್ 3ರಂದು, ಡಿ.ಜಿ.ಕೆ. ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡಯಾಗಿದೆ…

ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬ ಪ್ರೀ ವೆಡ್ಡಿಂಗ್ ಶೂಟ್ ಗೆಂದು ಹೋದಾಗ, ಆ ಮದುವೆಯ ಹೆಣ್ಣಿಗೆ ಫೋಟೋಗ್ರಾಫರ್ ಮೇಲೆ ಪ್ರೀತಿ ಮೂಡುತ್ತದೆ. ಈ ಹಿನ್ನಲೆಯಲ್ಲಿ ಸೃಷ್ಟಿಯಾಗುವ ಪರಿಸ್ಥಿತಿಗಳೇ ಚಿತ್ರದ ಪ್ರಮುಖ ಕಥಾವಸ್ತು.. ಕಾಮಿಡಿ ಮತ್ತು ಎಮೋಶನ್ ನ ಹದವಾದ ಮಿಶ್ರಣದಂತೆ ಗೋಚರಿಸುತ್ತಿರುವ ‘ಫುಲ್ ಮೀಲ್ಸ್’ ಪ್ರೇಕ್ಷಕರಿಗೆ ನಿಜವಾದ ‘ಫುಲ್ ಮೀಲ್ಸ್’ ಆಗಲಿದೆ ಎಂಬ ಭರವಸೆಯನ್ನು ಟ್ರೈಲರ್ ಮೂಡಿಸಿದೆ..
ಈ ಹಿಂದೆ ಸಂಕಷ್ಟಕರ ಗಣಪತಿ, ಪುನೀತ್ ರಾಜ್ ಕುಮಾರ್ ಅವರ ಪಿ. ಆರ್. ಕೆ ಪ್ರೊಡಕ್ಷನ್ ನಲ್ಲಿ ಮೂಡಿಬಂದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ನಾಯಕ ನಟರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಾಯಕ ನಟ ‘ಲಿಖಿತ್ ಶೆಟ್ಟಿ’ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ದಿಯಾ ಖ್ಯಾತಿಯ ಖುಷೀ ರವಿ ಮದುವೆ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಹಿಂದಿನ ಸಿನೆಮಾಗಳಿಗಿಂತ ವಿಭಿನ್ನ ಮತ್ತು ವಿಶೇಷ ಪಾತ್ರ ಅವರದ್ದಾಗಿದೆ.. ಮೇಕಪ್ ಹುಡುಗಿಯ ಪಾತ್ರದಲ್ಲಿ ತೇಜಸ್ವಿನಿ ಶರ್ಮ‌ ಕಾಣಿಸಿಕೊಂಡಿದ್ದು, ತ್ರಿಕೋನ ಪ್ರೇಮಕತೆಯ ಸ್ಪರ್ಶ ಕೂಡ ಸಿನೆಮಾದಲ್ಲಿದೆ..


ಇತ್ತೀಚಿನ ದಿನಗಳಲ್ಲಿ ಮನೋರಂಜನೆಯ ಜೊತೆಗೆ ನವಿರಾದ ಪ್ರೇಮಕ್ತೆಯನ್ನು ಹೇಳುವ ಸಿನೆಮಾಗಳ ಕಡಿಮೆಯಾಗಿರುವ ಸಂದರ್ಭದಲ್ಲಿ, ಆ ಕೊರೆತೆಯನ್ನು ನೀಗುವ ಸುಳಿವನ್ನು ‘ಫುಲ್ ಮೀಲ್ಸ್’ ನ ಟ್ರೈಲರ್ ನೀಡಿದೆ. ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಅನ್ನು ಸವಿಯಲು ಧೈರ್ಯವಾಗಿಯೇ ಫುಲ್ ಮೀಲ್ಸ್ ಬರಲು ಬಲವಾದ ಆಮಂತ್ರಣ ಟ್ರೈಲರ್ ಮೂಲಕ ಸಿಕ್ಕಿದೆ,
ಈ ಚಿತ್ರದ ಮೂಲಕ ಲಿಖಿತ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿದ್ದಾರೆ

ಗುರು ಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, , ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ತಕ್ಕಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.

Related posts

ಅಬ್ಬರ ಟ್ರೈಲರ್ ಇನ್ನೂ ಅಬ್ಬರ..!

Kannada Beatz

ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ಮಾಣ ಸಂಸ್ಥೆ ಎಂಟ್ರಿ..AVR ಎಂಟರ್ ಟೈನರ್ ಬ್ಯಾನರ್ ನಡಿ ಸಿಂಪಲ್ ಸುನಿ-ಕಾರ್ತಿಕ್ ಮಹೇಶ್ ಸಿನಿಮಾ ಘೋಷಣೆ

Kannada Beatz

ಭಾವಚಿತ್ರ”ದ ಹಾಡುಗಳ ಬಿಡುಗಡೆ*

administrator

Leave a Comment

Share via
Copy link
Powered by Social Snap