ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಬಹಳ ವರ್ಷಗಳ ನಂತರ ಚಂದನವನದಲ್ಲಿ ಕಾಣಿಸಿಕೊಳ್ಳುತ್ತಿರೋ ಬಬ್ರೂ ಸಿನಿಮಾ ಹಲವಾರು ವಿಶೇಷತೆಗಳಿಂದ ಕೂಡಿದ್ದು, ಹೊಸತನಕ್ಕೆ ಸಾಕ್ಷಿಯಾಗಿದೆ. ಬಬ್ರೂ ಮೂಲಕ ಹೊಸ ಪ್ರತಿಭೆಗಳನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುವುದರ ಮೂಲಕ ಹೊಸ ಅಲೆ ಸೃಷ್ಟಿಸಿದ್ದಾರೆ.
ಯು ಎಸ್ ಎ ನಲ್ಲಿಯೇ ಚಿತ್ರೀಕರಿಸಿರೋ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಈ ಸಿನಿಮಾ ಒಂದೊಳ್ಳೆ ಜರ್ನಿ. ಬಬ್ರೂ ಎಂಬುದು ಒಂದು ಕಾರಿನ ಹೆಸರು. ಇಬ್ಬರು ಅಪರಿಚಿತ ವ್ಯಕ್ತಿಗಳ ಜರ್ನಿಯಲ್ಲಿ ನಡೆಯುವ ಸಾಕಷ್ಟು ತಿರುವುಗಳು, ಬಬ್ರೂವಿನ ಮಹತ್ವ ಹೀಗೆ ಸಾಕಷ್ಟು ವಿಚಾರಗಳೊಂದಿಗೆ ಸಾಗುವ ಕಥೆಯಲ್ಲಿ ಹೊಸ ಯು ಎಸ್ ಎ ತೋರಿಸೋ ಪ್ರಯತ್ನ ಮಾಡಿದ್ದಾರೆ. ಜನಜಂಗುಳಿ ಇಲ್ಲದ, ಕಟ್ಟಡಗಳಿಂದ, ಸುಂದರ ಸಮೃದ್ಧ ಯುಎಸ್ಎ ತೋರಿಸಿರೋ ಚಿತ್ರತಂಡ, ಸಿನಿಮಾ ಜನರನ್ನ ವಿದೇಶಕ್ಕೇನೆ ಕರ್ಕೊಂಡು ಹೋಗುತ್ತೆ.
ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಸಿನಿಮಾದ ಹಾಡುಗಳು ಮತ್ತು ಹಿನ್ನಲೆ ಸಂಗೀತ. ತುಂಬಾನೇ ಮನಮುಟ್ಟುವ ಸಾಹಿತ್ಯವಿದೆ. ಇನ್ನುಳಿದಂತೆ ಪಾತ್ರಧಾರಿಗಳಾದ ಸುಮನ್ ಎಂದಿನಂತೆ ಅದೇ ಚಾರ್ಮಿಂಗ್ ನಲ್ಲಿ ಅಭಿನಯಿಸಿದ್ದು ಮಹಿನ್ ಮತ್ತು ಗಾನ ಭಟ್ ಅವರ ಪಾತ್ರ ಚೆನ್ನಾಗಿ ನಿಭಾಯಿಸಿದ್ದಾರೆ. ವಿಲನ್ ಪಾತ್ರಧಾರಿಯಾದ ಕಾಶ್ಮೀರದವರಾದ ಸನ್ನಿ ಅವರಿಗೆ ಸಿನಿಮಾ ಪೂರ್ತಿ ಸಂಭಾಷಣೆ ಇರಲ್ಲ. ಕೆಲವೊಂದು ಕಡೆ ಅವರು ಕನ್ನಡಕ ಬಳಸಿದಾಗ ಥೇಟ್ ವಿರಾಟ್ ಕೊಹ್ಲಿ ನೋಡಿದಾಗ್ಲೆ ಅನ್ನುಸ್ತು. ಲೊಕೇಷನ್ ಗಳ ಆಯ್ಕೆ ಚೆನ್ನಾಗಿದ್ದು, ಕ್ಯಾಮೆರಾ ವರ್ಕ್ ಕಣ್ಣಿಗೆ ಹಬ್ಬ.
ಸುಜಯ್ ರಾಮಯ್ಯ ಅವರ ಕೆಲಸ ಸಿನಿಮಾದಲ್ಲಿ ಕಾಣುತ್ತೆ. ಅವರು ಸಹ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಕೊಡೊ ಕಾಸಿಗೆ ಮೋಸವಿಲ್ಲ.