Kannada Beatz
News

ದೀಪಾವಳಿ ಪ್ರಯುಕ್ತ ಹೊಸ ಫೋಟೋಶೂಟ್ – ಬೆಳಕಿನ ನಡುವೆ ಕಂಗೊಳಿಸಿದ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್

ಬದುಕಿನ ಕತ್ತಲೆಯನ್ನು ಕಳೆದು ಬೆಳಕಿನ ಭರವಸೆ ನೀಡುವ ದೀಪಗಳ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಚಂದನವನದಲ್ಲೂ ದೀಪಾವಳಿಯ ಸಂಭ್ರಮ ಜೋರಾಗಿಯೇ ಮನೆ ಮಾಡಿದೆ. ಕೆಜಿಎಫ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಖ್ಯಾತಿ ಗಳಿಸಿರೋ ನಟಿ ಅರ್ಚನಾ ಜೋಯಿಸ್ ದೀಪಾವಳಿ ಸಂಭ್ರಮದಲ್ಲಿದ್ದು, ಹೊಸದೊಂದು ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ದೀಪಾವಳಿ ಪ್ರಯುಕ್ತ ಕಲರ್ ಫುಲ್ ಬೆಳಕಿನ ನಡುವೆ ಅರ್ಚನಾ ಜೋಯಿಸ್ ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಕಲರ್ ಫುಲ್ ಆಗಿ ಮಿಂಚಿರೋ ನಟಿಯನ್ನು ಕಂಡು ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸೆಲೆಬ್ರೆಟಿ ಫೋಟೋಗ್ರಾಫರ್ ನಾಗರಾಜ್ ಸೋಮಯಾಜಿ ರೂಪಿಸಿದ್ದ ಕಾನ್ಸೆಪ್ಟ್ ನಡಿ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ನಾಗರಾಜ್ ಸೋಮಯಾಜಿ ತಮ್ಮ ಫೋಕಸ್ ಫೋಟೋಗ್ರಫಿ ಸರ್ವಿಸ್ ನಡಿ ಈ ಕಲರ್ ಫುಲ್ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅರ್ಚನಾ ಜೋಯಿಸ್ ಚೆಂದದ ಈ ಫೋಟೋಗಳಿಗೆ ಯೋಗಿತ ಕಾಸ್ಟ್ಯೂಮ್ ಡಿಸೈನ್, ರೇಣುಕ ಹೇರ್ ಸ್ಟೈಲ್ ಮತ್ತು ಮೇಕಪ್ ಮಾಡಿದ್ದಾರೆ.

ಫೋಟೋಶೂಟ್ ಬಗ್ಗೆ ಪ್ರತಿಕ್ರಿಯೆಸಿರುವ ನಟಿ ಅರ್ಚನಾ ಜೋಯಿಸ್ ದೀಪಾವಳಿ ಪ್ರಯುಕ್ತ ಫೋಟೋಶೂಟ್ ಮಾಡಲಾಗಿದೆ.
ದೀಪಾವಳಿ ಅಂದ್ರೆ ಬೆಳಕು ಅದನ್ನೇ ಥೀಮ್ ಆಗಿಸಿಕೊಂಡು ನಾಗರಾಜ್ ಸೋಮಯಾಜಿ ಫೋಟೋಶೂಟ್ ಮಾಡಿದ್ದಾರೆ ಎಂದು ತಿಳಿಸಿದ್ರು. ಹಾಗೆ ದೀಪಾವಳಿ ಸಂಭ್ರಮದ ಬಗ್ಗೆಯೂ ಅನಿಸಿಕೆ ಹಂಚಿಕೊಂಡಿದ್ದು, ಪಟಾಕಿ ಹೊಡೆಯೋ ಅಭ್ಯಾಸ ಹೊರಟು ಹೋಗಿದೆ. ದೀಪಗಳ ಮೂಲಕವೇ ದೀಪಾವಳಿ ಸೆಲೆಬ್ರೇಟ್ ಮಾಡುತ್ತಿದ್ದೇವೆ. ನನಗೆ ಈ ಬಾರಿ ದೀಪಾವಳಿ ತುಂಬಾ ಸ್ಪೆಷಲ್. ಯಾಕಂದ್ರೆ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಕೂಡ ಜೋರಾಗಿ ನಡೆಯುತ್ತಿದೆ ಎಂದು ತಿಳಿಸಿದ್ರು.

ಕೆಜಿಎಫ್ ಸಿನಿಮಾ ನಂತರ ಸ್ಯಾಂಡಲ್ ವುಡ್ ಅಂಗಳದಲ್ಲಿ ಅರ್ಚನಾ ಜೋಯಿಸ್ ಸಖತ್ ಬ್ಯುಸಿಯಾಗಿದ್ದಾರೆ. ಇವರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ನವೆಂಬರ್ 18ರಂದು ಬಿಡುಗಡೆಯಾಗುತ್ತಿದ್ದು, ‘ಕ್ಷೇತ್ರಪಾಲ’ ಸಿನಿಮಾ ಕೂಡ ಬಿಡುಗಡೆಯ ಸನಿಹದಲ್ಲಿದೆ.

Related posts

ಹೊಂಬಾಳೆ ಫಿಲಂಸ್‌ ನಿರ್ಮಾಣದ ಬಘೀರ ಚಿತ್ರದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

Kannada Beatz

“ಲವ್ ಬರ್ಡ್ಸ್”
ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಬಿಡುಗಡೆ ಮಾಡಿದರು “ಗಿರ್ಕಿ” ಚಿತ್ರದ ಲವ್ ಸಾಂಗ್

Kannada Beatz

ರಾಗಿಣಿ ಪ್ರಜ್ವಲ್ ಅಭಿನಯದ “ಶಾನುಭೋಗರ ಮಗಳು” ಚಿತ್ರ ಸದ್ಯದಲ್ಲೇ ತೆರೆಗೆ. .

Kannada Beatz

Leave a Comment

Share via
Copy link
Powered by Social Snap