ಚಂದನವನದ ಲವಲವಿಕೆ ಹೀರೋ ಅನೀಶ್ ತೇಜ್ವರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನೀಶ್ ಜನುಮದಿನದ ಪ್ರಯುಕ್ತ ಅವರು ನಟಿಸಿ, ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ.
ಅನೀಶ್ ಹತ್ತನೇ ಸಿನಿಮಾ ‘ಬೆಂಕಿ’

ನಮ್ ಏರಿಯಾಲಿ ಒಂದಿನ, ಪೊಲೀಸ್ ಕ್ವಾಟ್ರಸ್, ಅಕಿರ, ವಾಸು ನನ್ ಪಕ್ಕ ಕಮರ್ಷಿಯಲ್, ರಾಮಾರ್ಜುನ ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಗಮನಸೆಳೆದಿರುವ ಅನೀಶ್ ಈಗ, ಬೆಂಕಿ ಸಿನಿಮಾ ಮೂಲಕ ಪ್ರತ್ಯಕ್ಷರಾಗಿದೆ. ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಮಿಂಚಿದ್ದಾರೆ. ಬೆಂಕಿ ಎಂಬ ಕ್ಯಾಚಿ ಟೈಟಲ್ ಇಟ್ಟು.. ಬೆಂಕಿಯಂತಹ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್. ಬಾಬು ಅವರ ಪುತ್ರ, ಶಾನ್ ಎಂಬವರು ಬೆಂಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ಈಗಾಗಲೇ ಸಿನಿಮಾದ ಶೇ. 80ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡು ಮತ್ತು ಒಂದಷ್ಟು ಟಾಕಿ ಭಾಗದ ಶೂಟಿಂಗ್ ಮಾತ್ರ ಬಾಕಿ ಇದೆ.

ಅನೀಶ್ ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದು, ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗ ಸಿನಿಮಾದಲ್ಲಿದ್ದೂ, ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ.
ಅಣ್ಣ ತಂಗಿ ಸೆಂಟಿಮೆಂಟ್ ಕಥೆ ಜೊತೆಗೆ ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದ ಫಸ್ಟ್ ಲುಕ್ ಮಾಸ್ ಲುಕ್ ನಲ್ಲಿ ಮೂಡಿ ಬಂದಿದ್ದು, ಅನೀಶ್ ಸಿನಿಮಾ ಬದುಕಿನ ಹತ್ತನೇ ಸಿನಿಮಾವಾಗಿರುವ ಬೆಂಕಿ ಚಿತ್ರಕ್ಕೆ ಅನೀಶ್ ತಮ್ಮದೇ ವಿಂಕ್ ವಿಷಲ್ ಪ್ರೊಡಕ್ಷನ್ ನಡಿ ಬಂಡವಾಳ ಹೂಡಿದ್ದಾರೆ.

- “ಫಾದರ್ಸ್ ಡೇ” ದಿನದಂದು ಬಿಡುಗಡೆಯಾಯಿತು ತಂದೆ – ಮಗನ ಬಾಂಧವ್ಯದ “ಫಾದರ್ಸ್ ಡೇ” ಚಿತ್ರದ ಟ್ರೇಲರ್ ..
- ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್… ವಿಭಿನ್ನ ಪ್ರೇಮ ಕಥೆಯೊಂದಿಗೆ ಬಂದ ಸಿಂಪಲ್
- ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾ ಮುಹೂರ್ತ
- ಡೆಡ್ಲಿ ಕಿಲ್ಲರ್’ ಟ್ರೈಲರ್ ಗೆ
- ಬರ್ತ್ ಡೇ ಬಾಯ್ ಕಾಡ ನಟರಾಜ್ ಗೆ ಡಬಲ್ ಖುಷಿ!
- ಹೊಂಬಾಳೆ ಮ್ಯೂಸಿಕ್ ನಲ್ಲಿ “ಭಾವಾಂತರ”ದ ಹಾಡುಗಳು .
- ಹೊಸತಂಡದ ಹೊಸಪ್ರಯತ್ನ “ಕೀರ್ತಿ ಐ ಲವ್ ಯು” .
- “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ .
- *ಕನ್ನಡದ ಹೆಮ್ಮೆ ಕರೆನ್ ಕ್ಷಿತಿ ಸುವರ್ಣ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಷಣ ಮತ್ತು *‘ಸೆಪ್ಟೆಂಬರ್ 21’ಚಿತ್ರ ಪ್ರೀಮಿಯರ್
- ಅನಿರುದ್ಧ್ ರವಿಚಂದರ್ ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್
