Kannada Beatz
News

ಡೆಡ್ಲಿ ಕಿಲ್ಲರ್’ ಟ್ರೈಲರ್ ಗೆ

ರಾಗಿಣಿ ದ್ವಿವೇದಿ ಚಾಲನೆ

   ಪೊಲೀಸ್ ಸ್ಟೋರಿ ನಂತರ ಸುಮಾರು 15 ವರ್ಷಗಳಾದ ಮೇಲೆ  ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ  ಡೆಡ್ಲಿ ಕಿಲ್ಲರ್.  ಕೀರ್ತಿ ಸಿಲ್ವರ್

ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ

ಸಂಭ್ರಮ ಖ್ಯಾತಿಯ ನಟ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.  ಆಕ್ಚನ್, ಸಸ್ಪೆನ್ಸ್, ಥ್ರಿಲ್ಲರ್ ಜತೆ ಹಾರರ್ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.  ಇತ್ತೀಚೆಗೆ  ಈ ಚಿತ್ರದ ಟ್ರೈಲರನ್ನು ನಟಿ ರಾಗಿಣಿ ದ್ವಿವೇದಿ ಅವರು ಬಿಡುಗಡೆ ಮಾಡಿದರು. ನಟ

ರವಿಚೇತನ್, ವಿಕ್ಟರಿ ವಾಸು, ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

   ಈವೇಳೆ ರಾಗಿಣಿ ಮಾತನಾಡುತ್ತ ನಮ್ಮ ಸಿನಿಮಾದವರಿಗೆ 6  ಲಕ್ಕಿ ನಂಬರ್, ಜೂನ್  6, 2026 ರಂದು ಈ ಚಿತ್ರದ ಟ್ರೈಲರ್ ಲಾಂಚ್

ಮಾಡುವ ಅವಕಾಶ ನನ್ನದಾಗಿದೆ, ನಾನು ಕೂಡ ಹೊಸಬಳಾಗೇ ಚಿತ್ರರಂಗಕ್ಕೆ ಬಂದಿದ್ದೆ. ಥ್ರಿಲ್ಲರ್ ಮಂಜು ಅವರು ನನ್ನ ಮೊದಲ ಸಿನಿಮಾಗೆ ಆಕ್ಷನ್ ಮಾಡಿದವರು. ಅಭಯ್ ನನ್ನ ಕಷ್ಟದ ದಿನಗಳಲ್ಲಿ  ನಮ್ಮ ಫ್ಯಾಮಿಲಿ ಜತೆ ನಿಂತಿದ್ದರು, ಹೊಸಬರ ಚಿತ್ರಗಳನ್ನೂ  ನೋಡಬೇಕು,ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಎಂದು ಹೇಳಿದರು.

    ನಿರ್ಮಾಪಕ ಪ್ರಶಾಂತ್ ಟಿ.ತಂಬ್ರಳ್ಳಿಮಠ  ಮಾತನಾಡುತ್ತ ಅಭಯ್ ನನ್ನ ಗೆಳೆಯ, ಅವರಿಂದಲೇ ಮಾಸ್ಟರ್ ಪರಿಚಯವಾಗಿ ನಂತರ ಪ್ರೊಡಕ್ಷನ್ ಲೈನ್ ಕಲಿತೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

Related posts

ಸೆಂಟ್ರಲ್ ಜೈಲಿನಲ್ಲಿರುವ ಖೈದಿಯೊಬ್ಬರಿಂದ ತತ್ವ ಪದ ಹಾಡಿಸಿದ ಪ್ರೇಮಕವಿ ಕೆ. ಕಲ್ಯಾಣ್

Kannada Beatz

ಶೀಘ್ರದಲ್ಲೇ ಬರಲಿದೆ ರಾಜಕೀಯ ವಿಡಂಬನೆಯ “Politics ಕಲ್ಯಾಣ

Kannada Beatz

ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದರು “ಯಾರಿಗೆ ಬೇಕು ಈ ಲೋಕ” ಚಿತ್ರದ ಫಸ್ಟ್ ಲುಕ್.

administrator

Leave a Comment

Share via
Copy link
Powered by Social Snap