ಚಂದನವನದ ಲವಲವಿಕೆ ಹೀರೋ ಅನೀಶ್ ತೇಜ್ವರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನೀಶ್ ಜನುಮದಿನದ ಪ್ರಯುಕ್ತ ಅವರು ನಟಿಸಿ, ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ.
ಅನೀಶ್ ಹತ್ತನೇ ಸಿನಿಮಾ ‘ಬೆಂಕಿ’
ನಮ್ ಏರಿಯಾಲಿ ಒಂದಿನ, ಪೊಲೀಸ್ ಕ್ವಾಟ್ರಸ್, ಅಕಿರ, ವಾಸು ನನ್ ಪಕ್ಕ ಕಮರ್ಷಿಯಲ್, ರಾಮಾರ್ಜುನ ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಗಮನಸೆಳೆದಿರುವ ಅನೀಶ್ ಈಗ, ಬೆಂಕಿ ಸಿನಿಮಾ ಮೂಲಕ ಪ್ರತ್ಯಕ್ಷರಾಗಿದೆ. ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಮಿಂಚಿದ್ದಾರೆ. ಬೆಂಕಿ ಎಂಬ ಕ್ಯಾಚಿ ಟೈಟಲ್ ಇಟ್ಟು.. ಬೆಂಕಿಯಂತಹ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್. ಬಾಬು ಅವರ ಪುತ್ರ, ಶಾನ್ ಎಂಬವರು ಬೆಂಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ಈಗಾಗಲೇ ಸಿನಿಮಾದ ಶೇ. 80ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡು ಮತ್ತು ಒಂದಷ್ಟು ಟಾಕಿ ಭಾಗದ ಶೂಟಿಂಗ್ ಮಾತ್ರ ಬಾಕಿ ಇದೆ.
ಅನೀಶ್ ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದು, ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗ ಸಿನಿಮಾದಲ್ಲಿದ್ದೂ, ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ವರ್ಕ್ ಸಿನಿಮಾದಲ್ಲಿದೆ.
ಅಣ್ಣ ತಂಗಿ ಸೆಂಟಿಮೆಂಟ್ ಕಥೆ ಜೊತೆಗೆ ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದ ಫಸ್ಟ್ ಲುಕ್ ಮಾಸ್ ಲುಕ್ ನಲ್ಲಿ ಮೂಡಿ ಬಂದಿದ್ದು, ಅನೀಶ್ ಸಿನಿಮಾ ಬದುಕಿನ ಹತ್ತನೇ ಸಿನಿಮಾವಾಗಿರುವ ಬೆಂಕಿ ಚಿತ್ರಕ್ಕೆ ಅನೀಶ್ ತಮ್ಮದೇ ವಿಂಕ್ ವಿಷಲ್ ಪ್ರೊಡಕ್ಷನ್ ನಡಿ ಬಂಡವಾಳ ಹೂಡಿದ್ದಾರೆ.
- ‘ಪಾನಿ’ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ
- ಯಶಸ್ವಿಯಾಗಿ 25 ದಿನ ಪೂರೈಸಿದ ‘ಅಮರನ್’….ಶಿವ ಕಾರ್ತಿಕೇಯನ್ ಸಿನಿಮಾಗೆ ಭರಪೂರ ಮೆಚ್ಚುಗೆ
- ‘ಗಜರಾಮ’ ಟೈಟಲ್ ಟ್ರ್ಯಾಕ್ ರಿಲೀಸ್…ಡಿಸೆಂಬರ್ 27ಕ್ಕೆ ಶುರು ರಾಜವರ್ಧನ್ ಅಬ್ಬರ
- ಜೀಬ್ರಾಗೆ ‘ಭೀಮ’ ಬೆಂಬಲ..ಡಾಲಿ ಧನಂಜಯ್-ಸತ್ಯದೇವ್ ಸಿನಿಮಾಗೆ ದುನಿಯಾ ವಿಜಯ್ ಕುಮಾರ್ ಸಾಥ್
- ‘ಆರಾಮ್ ಅರವಿಂದ್ ಸ್ವಾಮಿ’ಗೆ ಬಘೀರ ಸಾಥ್…ನ.22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್
- ‘ಮರ್ಯಾದೆ ಪ್ರಶ್ನೆ’ ಚಿತ್ರದ ಮೂರನೇಯ ಹಾಡು ‘ಫಿರಾಕೋ ಮಾರ್’ ಈಗ ಬಿಡುಗಡೆಯಾಗಿದೆ
- ಟಿವಿ9 ಪ್ರಾಪರ್ಟಿ ಎಕ್ಸ ಪೊ ಆರಂಭ; ಒಳ್ಳೊಳ್ಳೆಯ ರಿಯಲ್ ಎಸ್ಟೇಟ್ ಆಫರ್ಗಳು; ಜನರಿಂದ ಉತ್ತಮ ಸ್ಪಂದನೆ
- “ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು
- TV9 Property Expo:
ದಿನಾಂಕ : 15-17ರಂದು ಬೆಂಗಳೂರಿನಲ್ಲಿ ಟಿವಿ9 ಎಕ್ಸ್ಪೋ - ಸಂಜು ವೆಡ್ಸ್ ಗೀತಾ-2ಉಪೇಂದ್ರ ಮೆಚ್ಚಿದ ಕ್ಲೈಮ್ಯಾಕ್ಸ್