HomeNews'ಮಾಫಿಯಾ’ ನಿರ್ದೇಶಕರೊಂದಿಗೆ ಮತ್ತೊಮ್ಮೆ ಕೈ ಜೋಡಿಸಿದ ಪ್ರಜ್ವಲ್ ದೇವರಾಜ್- ಮೊದಲ ಬಾರಿ ಟೈಂ ಲೂಪ್ ಚಿತ್ರದಲ್ಲಿ...

‘ಮಾಫಿಯಾ’ ನಿರ್ದೇಶಕರೊಂದಿಗೆ ಮತ್ತೊಮ್ಮೆ ಕೈ ಜೋಡಿಸಿದ ಪ್ರಜ್ವಲ್ ದೇವರಾಜ್- ಮೊದಲ ಬಾರಿ ಟೈಂ ಲೂಪ್ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್

‘ಮಮ್ಮಿ’, ‘ದೇವಕಿ’ ಖ್ಯಾತಿಯ ನಿರ್ದೇಶಕ ಲೋಹಿತ್.ಹೆಚ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆಗೆ ಹೊಸದೊಂದು ಚಿತ್ರವನ್ನು ಶುಭಾರಂಭ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ‘ಮಾಫಿಯಾ’ ಸಿನಿಮಾಗೆ ಲೋಹಿತ್ ಆಕ್ಷನ್ ಕಟ್ ಹೇಳಿದ್ದು ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ನಡುವೆಯೇ ಮತ್ತೊಂದು ಹೊಸ ಸಿನಿಮಾವನ್ನು ಈ ಜೋಡಿ ಘೋಷಿಸಿದೆ.

ಪ್ರಜ್ವಲ್ ದೇವರಾಜ್ ನಿರ್ದೇಶಕ ಲೋಹಿತ್.ಹೆಚ್ ಕಾಂಬಿನೇಶನ್ ಮೊದಲ ಸಿನಿಮಾ ‘ಮಾಫಿಯಾ. ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ನಡುವೆಯೇ ಲೋಹಿತ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಡೈನಾಮಿಕ್ ಪ್ರಿನ್ಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೋಹಿತ್ ಹೇಳಿದ ಕಥೆಯ ಎಳೆ ತುಂಬಾ ಇಷ್ಟ ಆಯ್ತು. ಅವರ ಕೆಲಸದ ಶೈಲಿ ಹಾಗೂ ಸಾಮರ್ಥ್ಯವನ್ನು ಹತ್ತಿರದಿಂದ ಅರಿತಿರುವುದರಿಂದ ಮತ್ತೊಂದು ಸಿನಿಮಾವನ್ನು ಅವರೊಂದಿಗೆ ಮಾಡಲು ಕೈ ಜೋಡಿಸಿದ್ದೇನೆ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.

ಸದ್ಯ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಡಿಸೆಂಬರ್ ನಲ್ಲಿ ಚಿತ್ರದ ಕೆಲಸಗಳು ಆರಂಭವಾಗಲಿವೆ. ಇದೊಂದು ಹಾರಾರ್ ಥ್ರಿಲ್ಲರ್ ಒಳಗೊಂಡ ಟೈಂ ಲೂಪ್ ಸಿನಿಮಾವಾಗಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ದೇಶಕರು ತಿಳಿಸಿದ್ದಾರೆ.

‘ಮಾಫಿಯಾ’ ಸಿನಿಮಾ ನಡೆಯುತ್ತಿರುವಾಗಲೇ ಈ ಸಿನಿಮಾ ಬಗ್ಗೆ ಪ್ರಜ್ವಲ್ ಸರ್ ಜೊತೆ ಮಾತನಾಡಿದ್ದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆಗಿ ನಾವೇ ಈ ಪ್ರಾಜೆಕ್ಟ್ ಮಾಡೋಣ ಎಂದು ಹೇಳಿದ್ರು. ‘ಮಾಫಿಯಾ’ದಲ್ಲಿ ಪ್ರಜ್ವಲ್ ಸರ್ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿದೆ. ತುಂಬಾ ಸಪೋರ್ಟಿವ್ ಆಗಿರುತ್ತಾರೆ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡ್ತಿರೋದ್ರಿಂದ ಅಂದುಕೊಂಡಂತೆ ಸಿನಿಮಾ ಔಟ್ ಪುಟ್ ತೆಗೆಯಬಹುದು ಎಂದು ನಿರ್ದೇಶಕ ಲೋಹಿತ್ ತಿಳಿಸಿದ್ದಾರೆ.

ಶಾನ್ವಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಶಾನ್ವಿ. ಎನ್ ಮತ್ತು ಅಚಿಂತ್ಯ ಆರ್. ಆರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನೊಬಿನ್ ಪೌಲ್ ಸಂಗೀತ ನಿರ್ದೇಶನ, ಜೆಬಿನ್ ಪಿ ಜೇಕಬ್ ಕ್ಯಾಮೆರಾ ನಿರ್ದೇಶನ, ಸಿ.ರವಿಚಂದ್ರನ್ ಸಂಕಲನ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನೀಡಲಿದೆ.

Must Read

spot_img
Share via
Copy link
Powered by Social Snap