ನಾನು ಬಿಜೆಪಿಯ ಕಟ್ಟಾಳು, ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಧ್ಯೇಯ
ಅಭಿವೃದ್ಧಿಗಾಗಿ, ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕು ಎಂದು ನಾನು ನನ್ನ ರಾಜಕೀಯ ಜೀವನಕ್ಕಿಂತ ಮೊದಲಿನಿಂದಲೂ ಅಂದುಕೊಂಡಿದ್ದೆ.ಅದನ್ನು ಸಾಕಾರ ಮಾಡಲು ಮನಪೂರ್ವಕ ಶ್ರಮ ವಹಿಸಿರುವೆ.
ನಾನು ಎಂದೆಂದಿಗೂ ಬಿಜೆಪಿ ಕಟ್ಟಾಳು ಹಾಗೂ ಬಿಜೆಪಿಯ ವಿಜಯವೇ ನನ್ನ ಧ್ಯೇಯ ಎಂಬುದಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ. ಸಿ ಮೋಹನ್ ಅವರು ಹೇಳಿದ್ದಾರೆ.
ನಾಲ್ಕನೇ ಬಾರಿಗೆ ಅದೇ ಕ್ಷೇತ್ರದಲ್ಲಿ ಆಯ್ಕೆ ಬಯಸಿರುವ ಪಿ. ಸಿ ಮೋಹನ್ ಅವರು, ಜನರು ಸಮರ್ಥ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಪಣತೊಟ್ಟಿರುವ ಜನಪ್ರತಿನಿಧಿ. ದೇಶಾದ್ಯಂತ ಬಿಜೆಪಿ ಗೆಲುವು ಸಾಧಿಸಬೇಕು ಎಂದು ಬಯಸಿದವ. ಅದಕ್ಕಾಗಿ ಕಾರ್ಯಕರ್ತನಾಗಿ ದುಡಿದು ಈಗ ಜನಪ್ರತಿನಿಧಿಯಾಗಿದ್ದೇನೆ. ಜನರು ಭಾರತೀಯ ಜನತಾ ಪಕ್ಷದ ಪತಾಕೆ ಮುಗಿಲೆತ್ತರಕ್ಕೆ ಏರಲಿ ಎಂದು ಬಯಸಿದ್ದಾರೆ. ಹೀಗಾಗಿ ಬಿಜೆಪಿ ಕಟ್ಟಾಳಾಗಿರುವ ನನ್ನನ್ನು ಗೆಲ್ಲಿಸುವುದು ಖಾತರಿ ಎಂದು ಪಿ. ಸಿ. ಮೋಹನ್ ಅವರು ಹೇಳಿದ್ದಾರೆ.
ಕಳೆದ 15 ವರ್ಷಗಳ ಕಾಲ ಸಂಸದನಾಗಿ ಇದ್ದರೂ ಬಿಜೆಪಿಯ ಕಾರ್ಯಕರ್ತ ಎಂಬಂತೆಯೇ ಪಕ್ಷಕ್ಕಾಗಿ ದುಡಿದಿದ್ದೇನೆ. ಬೆಂಗಳೂರಿನ ಪ್ರತಿ ವಾರ್ಡ್ಗಳಲ್ಲಿಯೂ ಬಿಜೆಪಿಗೆ ಬಲ ನೀಡುವ ಕೆಲಸ ಮಾಡಿದ್ದೇನೆ.ಬಿಜೆಪಿಯ ಗೆಲುವಿಗೆ ಹಗಲಿರುಳು ಶ್ರಮಿಸುವ ಕಾರ್ಯಕರ್ತರ ಪಡೆಯನ್ನೇ ನಿರ್ಮಿಸಿದ್ದೇನೆ. ಅವರೆಲ್ಲರೂ ಇಂದು ನನ್ನ ಗೆಲುವು ಬಯಸಿದ್ದಾರೆ. ನನ್ನ ಗೆಲುವಿನೊಂದಿಗೆ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಇನ್ನಷ್ಟು ಬಲವಾಗುತ್ತದೆ ಎಂಬುದು ನಿಸ್ಸಂಶಯ ಎಂದೂ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.