Kannada Beatz
News

‘ಪಬ್ಬಾರ್’ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ರಿಲೀಸ್..ಖಾಕಿ ಖದರ್‌ನಲ್ಲಿ ಧೀರೆನ್ ರಾಮ್ ಕುಮಾರ್

ಖಾಕಿಯಲ್ಲಿ ಧೀರೆನ್ ರಾಮ್ ಕುಮಾರ್ ಖದರ್..ಹೇಗಿದೆ ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಝಲಕ್?

ಸಂಕ್ರಾಂತಿಗೆ ಧೀರೆನ್-ಸಂದೀಪ್ ಕಾಂಬಿನೇಷನ್‌ನ ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ಅನಾವರಣ

‘ಶಾಖಾಹಾರಿ’ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಹಾಗೂ‌ ದೊಡ್ಮನೆ ಕುಡಿ ಧೀರೆನ್ ರಾಮ್ ಕುಮಾರ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಸಿನಿಮಾ ಪಬ್ಬಾರ್. ಟೈಟಲ್ ಮೂಲಕ ಕುತೂಹಲ ಹೆಚ್ಚಿಸಿರುವ ಪಬ್ಬಾರ್ ಚಿತ್ರದ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ನ್ನು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ‌ ಸಂದೀಪ್ ಅವರು ಹೀರೋ ಕ್ಯಾರೆಕ್ಟರ್ ಇಂಟ್ರೂವನ್ನು ಪರಿಚಯಿಸಿದ್ದಾರೆ.

4 ನಿಮಿಷ 19 ಸೆಕೆಂಡ್ ಇರುವ ಝಲಕ್ ಬಹಳ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಟೀಸರ್ ಕೊನೆಯಲ್ಲಿ ಧೀರೆನ್ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಬ್ಬಾರ್ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ನಟಿಸಿದ್ದಾರೆ.

ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಈ ಚಿತ್ರದ ಕಥೆಯ ಕೇಂದ್ರಬಿಂದು. ಹಾಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆ.

ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ ‘ಪಬ್ಬಾರ್’ ಚಿತ್ರಕ್ಕಿದೆ. ಧೀರೇನ್ ಹಾಗೂ ಅಮೃತಾ ಪ್ರೇಮ್ ಪಾತ್ರಗಳ ಸುತ್ತಾ ಇಡೀ ಸಿನಿಮಾ ಕಥೆ ಸಾಗಲಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಾಮಕೃಷ್ಣ, ಸಕುಟುಂಬ ಖ್ಯಾತಿಯ ಭರತ್ ಜಿಬಿ, ಶ್ರೀಹರ್ಷ ಗೋಭಟ್ ತಾರಾಬಳಗದಲ್ಲಿದ್ದಾರೆ.

Related posts

ಸಾಮಾಜಿಕ ಕಳಕಳಿಯ “ವಿಕಾಸ ಪರ್ವ” ಕ್ಕೆ ಸಾಥ್ ನೀಡಿದ ಪ್ರಣಯರಾಜ .

Kannada Beatz

“ಗಿರ್ಕಿ” ಚಿತ್ರತಂಡದಿಂದ ಕನ್ನಡ ಜನತೆಗೆ ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಶುಭಾಶಯಗಳು.

Kannada Beatz

ನಟ ದೇವರಾಜ್ ಅವರಿಂದ ಬಿಡುಗಡೆಯಾಯಿತು “ಪ್ರಜಾರಾಜ್ಯ”ಚಿತ್ರದ ಟೀಸರ್.

Kannada Beatz

Leave a Comment

Share via
Copy link
Powered by Social Snap