Kannada Beatz
News

‘ಕರಾವಳಿ’ ಟ್ರೈಲರ್ ನೋಡಿ ರೋಮಾಂಚನಗೊಂಡ ಕನ್ನಡ ಸಿನಿ ಅಭಿಮಾನಿಗಳು

‘ಕರಾವಳಿ’ ಅದ್ದೂರಿ ಟ್ರೈಲರ್‌ ಲಾಂಚ್‌ಗೆ ಸಾಕ್ಷಿಯಾದ ಸಾವಿರಾರು ಅಭಿಮಾನಿಗಳು

‘ಕರಾವಳಿ ಟ್ರೈಲರ್‌ಗೆ ಅದ್ಭುತ ರೆಸ್ಪಾನ್ಸ್; ನಿರೀಕ್ಷೆ ದುಪ್ಪಟ್ಟು

ಕರಾವಳಿ… ಕನ್ನಡದ ಬಹುನಿರೀಕ್ಷೆಯ ಸಿನಿಮಾ. ಈಗಾಗಲೇ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದ ಕರಾವಳಿ ಟ್ರೈಲರ್‌ಗಾಗಿ ಕನ್ನಡ ಅಭಿಮಾನಿಗಳು ಕಾರತರಿಂದ ಕಾಯುತ್ತಿದ್ದರು. ಆದರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಟ್ರೈಲರ್‌ ಪ್ರಿಮಿಯರ್ ಮಾಡುವ ಮೂಲಕ ಅಭಿಮಾನಿಗಳ ಸಮ್ಮುಖದಲ್ಲೇ ಕರಾವಳಿ ಟ್ರೈಲರ್ ರಿಲೀಸ್ ಮಾಡಲಾಯಿತು.

ಗುರುದತ್ ಗಾಣಿಗ ನಿರ್ದೇಶನದ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಸಿನಿಮಾ ಜುಲೈ 24ಕ್ಕೆ ತೆರೆಗೆ ಬರುತಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಕರಾವಳಿ ಟ್ರೈಲರ್ ನಲ್ಲಿ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಿಲ್ಲ ಎನ್ನುವ ಗೊಂದಲ, ಗಲಾಟೆಗಳ ನಡುವೆಯೂ ಕರಾವಳಿ ಟ್ರೈಲರ್ ಯಶಸ್ವಿಯಾಗಿ ಬಿಡುಗಡೆಯಾಯಿತು.

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ನಟ ರಾಜ್ ಬಿ ಶೆಟ್ಟಿ, ನಾಯಕಿಯರಾದ ಸಂಪದಾ, ಸುಷ್ಮಿತಾ, ನಟರಾದ ಮಿತ್ರ, ಶ್ರೀಧರ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು.

ಟ್ರೈಲರ್‍‌ನಲ್ಲಿ ಕರಾವಳಿ ಸಂಸ್ಕೃತಿ ಜೊತೆಗೆ ಕಂಬಳವೇ ಹೈಲೆಟ್. ಕರಾವಳಿ ಹೆಮ್ಮೆಯ ಕ್ರೀಡೆ ಕಂಬಳವನ್ನ ಅತ್ಯಂತ ಸುಂದರವಾಗಿ ಈ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ. ಟ್ರೈಲರ್ ನೋಡಿದ ಬಳಿಕ ಈ ಸಿನಿಮಾದಲ್ಲಿ ಪ್ರಜ್ವಲ್ ಮತ್ತು ರಾಜ್ ಬಿ ಶೆಟ್ಟಿ ನಡುವಿನ ಸಂಬಂಧವೇನು? ಎನ್ನುವ ಕುತೂಹಲ ಹೆಚ್ಚಾಗಿದೆ. ಸಿನಿಮಾತಂಡ ಕೂಡ ಈ ಕುತೂಹಲವನ್ನು ಹಾಗೆ ಕಾಯ್ದಿರಿಸಿದೆ. ಇನ್ನೂ ರಮೇಶ್ ಇಂದಿರ, ಮಿತ್ರ ಅವರ ಪಾತ್ರ ಕೂಡ ಟ್ರೈಲರ್‌ನಲ್ಲಿ ಗಮನ ಸೆಳೆಯುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, ಪ್ರಜ್ವಲ್ ದೇವರಾಜ್ ಡಬ್ಬಿಂಗ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ಇನ್ನೂ ಪ್ರಜ್ವಲ್ ಸಂಭಾವನೆ ವಿಚಾರದ ಬಗ್ಗೆಯೂ ಕ್ಲಾರಿಟಿ ನೀಡಿದರು. ಜೊತೆಗೆ ಸುಮಾರು 380 ಕೋಣಗಳನ್ನು ಬಳಸಿ ಸಿನಿಮಾ ಶೂಟಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡರು.

ಇನ್ನೂ ರಾಜ್ ಬಿ ಶೆಟ್ಟಿ ಅವರು ಮಾತನಾಡಿ, ಇದು ಅಪ್ಪಟ ಕನ್ನಡದ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಸಿನಿಮಾ ಎಲ್ಲಾ ಕಡೆ ಟ್ರಾವೆಲ್ ಮಾಡಬೇಕು’ ಎಂದರು…

ಇನ್ನೂ ಉಳಿದಂತೆ ನಟ ಮಿತ್ರ, ನಾಯಕಿಯರಾದ ಸಂಪದಾ ಮತ್ತು ಸುಷ್ಮಿತಾ ಕೂಡ ತಮ್ಮ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಹಿರಿಯ ನಟ ಶ್ರೀಧರ್, ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಛಾಯಾಗ್ರಾಹಕ ಅಭಿಮನ್ಯೂ ಸದಾನಂದನ್, ವಿತರಕ ಸುಪ್ರಿತ್ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು.

ಕರಾವಳಿ, ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಕರಾವಳಿ ಸಿನಿಮಾವನ್ನು ಪ್ರೆಸೆನ್ಸ್ ಮಾಡುವ ಜೊತೆಗೆ ವಿತರಣೆಯನ್ನು ಮಾಡುತ್ತಿರುವುದು ವಿಶೇಷ.

Related posts

ಮತ್ತೆ ನಿರ್ಮಾಣ ಸಾಹಸಕ್ಕಿಳಿದ ಅಜಯ್ ರಾವ್ – ‘ಕಟಿಂಗ್ ಶಾಪ್’ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್

Kannada Beatz

ಕೆವಿಎನ್ ತೆಕ್ಕೆಗೆ ಬಾಹುಬಲಿ ಸೂತ್ರಧಾರ ರಾಜಮೌಳಿಯ ‘RRR’ ಸಿನಿಮಾ ವಿತರಣೆ ಹಕ್ಕು…

administrator

ಯುಗಾದಿ ಹಬ್ಬಕ್ಕೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್

Kannada Beatz

Leave a Comment

Share via
Copy link