ರಾಣಾ ಅಭಿನಯದ, ಮಂಜುನಾಥ್ ನಿರ್ದೇಶನದ ಹೊಸ ಚಿತ್ರ ಸದ್ಯದಲ್ಲೇ ಪ್ರಾರಂಭ
ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ರಾಮನವಮಿ ಹಬ್ಬದ ಪ್ರಯುಕ್ತ ಪ್ರೇಮ್ ಹಾಗೂ ರಕ್ಷಿತಾ ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ (Phoenix Prems Studios) ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ನಿರ್ಮಾಣ ಸಂಸ್ಥೆಯಿಂದ ಮೊದಲ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವನ್ನು ಪ್ರೇಮ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮಂಜುನಾಥ್ ಬಿ.ಎಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ತಾಂತ್ರಿಕ ವರ್ಗದ ವಿವರಗಳನ್ನು ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ಷ ಮಂಗಳವಾರ (ಮಾರ್ಚ್ 31) ಅಧಿಕೃತವಾಗಿ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಚಿತ್ರಕ್ಕೆ ‘ಇಡಿಯಾಟ್’ ಎಂಬ ಹೆಸರನ್ನು ಇಡಲಾಗಿದೆ.

ವಿಶೇಷವೆಂದರೆ, ರಕ್ಷಿತಾ ಅಭಿನಯದ ಮೊದಲ ತೆಲುಗು ಚಿತ್ರಕ್ಕೂ ‘ಇಡಿಯಟ್’ ಎಂಬ ಹೆಸರಿಡಲಾಗಿತ್ತು. ರಕ್ಷಿತಾ ಮತ್ಮ ಕುಟುಂಬದವರು ಮತ್ತು ಆಪ್ತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರೇಮ್ ಅವರ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ವಿಲಿಯಂ ಡೆವಿಡ್ ಅವರ ಛಾಯಾಗ್ರಹಣ, ರೋಮಿಯೋ ಅವರ ಸಂಗೀತ ಈ ಚಿತ್ರಕ್ಕಿರಲಿದೆ.

KannadaScreens #Sandalwood #Prem #Rakshitha #JogiPrem #PhoenixPremsStudios #Raana #WilliamDavid
