Kannada Beatz
News

ಟ್ರೇಲರ್ ನಲ್ಲೇ ಮೋಡಿ ಮಾಡಿದ “ಗೂಢಾರ್ಥ ” ಕಿರುಚಿತ್ರ ಏಪ್ರಿಲ್ 4 ರಂದು ಬಿಡುಗಡೆಯಾಗಿ ಎಲ್ಲರ ಮನ ಗೆದ್ದು ಯಶಸ್ಸಿನ ಹಾದಿಯಲ್ಲಿದೆ

ಮಂಗಳೂರು ಮೂಲದ ಯುವ ಮಹಿಳಾ ನಿರ್ದೇಶಕಿ ಮಹಿಮಾ ಶೆಟ್ಟಿಯವರ ನಿರ್ಮಾಣ ಹಾಗೂ ನಿರ್ದೇಶನದ ಕಿರುಚಿತ್ರ.

ಮಹಿಮಾ ಶೆಟ್ಟಿ ಫಿಲಂಸ್ ಲಾಂಛನದಲ್ಲಿ, ಮಹಿಮಾ ಶೆಟ್ಟಿ ನಿರ್ಮಿಸಿ ಹಾಗೂ ನಿರ್ದೇಶಿಸಿರುವ ಮಂಜುಳಾ ಜನಾರ್ಧನ್,ಧೀಮಂತ್ ಪೊಳಲಿ,ಚಿಂತನ್, ಮಾನ್ವಿ ಶೆಟ್ಟಿ, ಅನುರಾಗ್ ಜೋಗಿ ತೊಡಾರ್, ವಿನೋದ್ ನೀರುಮಾರ್ಗ ಮುಂತಾದ ಹೊಸ ಪ್ರತಿಭೆಗಳನ್ನೊಳಗೊಂಡ ಈ ಚಿತ್ರದಲ್ಲಿ ಕರಾವಳಿ ಪ್ರದೇಶದ ವಿಶೇಷ ಆಚರಣೆಗಳನ್ನು ಕಥಾಹಂದರವಾಗಿ ಬಳಸಿಕೊಳ್ಳಲಾಗಿದೆ. ಈ ಚಿತ್ರದ ಚಿತ್ರೀಕರಣವನ್ನು ಮಂಗಳೂರಿನ ಆಸುಪಾಸಿನ ಪರಿಸರದಲ್ಲಿ ನಡೆಸಲಾಗಿದೆ .

ಸಂಪ್ರದಾಯ, ನಿಗೂಢತೆ, ಹಾಸ್ಯ ಈ ಸಿನಿಮಾದ ಪ್ರಮುಖ ಕಥಾಹಂದರವಾಗಿದೆ. ಕಳೆದ ಐದು ವರ್ಷಗಳಿಂದ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಮಹಿಮಾ ಶೆಟ್ಟಿ ಇವರು ಈ ಕಿರು ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುರೇಶ್ ಗೌಡ ರಾಮಕುಂಜ ಅವರ ಛಾಯಾಗ್ರಹಣವಿದೆ. ಗಣೇಶ್ ನೀರ್ಚಾಲ್ ಸಂಕಲನ, ಗುರುಪ್ರಸಾದ್ ಬೆಳ್ತಂಗಡಿ ಕಲರಿಂಗ್ , ಲಿಯೋನೆಲ್ ಡಿ ಮೆಲ್ಲೋ ( ಮೆಲೋಡಿಯಂ ಸ್ಟುಡಿಯೋ ) ಸಂಗೀತ ನಿರ್ದೇಶಕರಾಗಿ, ಭರತ್ ತುಳುವ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಈ ಚಿತ್ರವು ಮಹಿಮಾ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ. ಈ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ.

Related posts

*ಅನಾವರಣವಾಯಿತು “ಅಪಾಯವಿದೆ ಎಚ್ಚರಿಕೆ” ಚಿತ್ರದ ಪ್ರಯೋಗಾತ್ಮಕ ಟೀಸರ್.

Kannada Beatz

ನೈಜ ಘಟನೆಯ “ಸೀತಮ್ಮನ ಮಗ”

administrator

ದಳಪತಿ ವಿಜಯ್ 69ನೇ ಚಿತ್ರದ ಫಸ್ಟ್ ಲುಕ್ ರಿಲೀಸ್: ಕೊನೆಯ ಸಿನಿಮಾದ ಟೈಟಲ್ ಏನು?

administrator

Leave a Comment

Share via
Copy link
Powered by Social Snap