Kannada Beatz
News

ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಬಹು ನಿರೀಕ್ಷಿತ “ಫಾದರ್” ಚಿತ್ರಕ್ಕೆ ಮಾತಿನ ಜೋಡಣೆ ಮುಕ್ತಾಯ .

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಅಪರೂಪದ ಕಥಾಹಂದರ ಹೊಂದಿರುವ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ ಹಾಗೂ ಪ್ರಕಾಶ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಪ್ರಮುಖಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ “ಫಾದರ್” ಚಿತ್ರದ ಮಾತಿನ ಜೋಡಣೆ ಮುಕ್ತಾಯವಾಗಿದೆ. ಇತ್ತೀಚೆಗೆ ಬಹುಭಾಷ ನಟ ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿರುವ ತಮ್ಮ ಸ್ಟುಡಿಯೋದಲ್ಲೇ “ಫಾದರ್” ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್ ಮಾಕ್ಟೇಲ್ ೩” ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ “ಫಾದರ್” ಚಿತ್ರದ ಪ್ರಚಾರ ಕಾರ್ಯಕ್ಕೂ ಈಗ ಚಾಲನೆ ದೊರಕಿದೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಹಾಗೂ ಸುದೀಪ್ ಅವರು ಅನಾವರಣಗೊಳಿಸಿದ ಟೀಸರ್ ಎಲ್ಲರ ಮನ ಗೆದ್ದಿದೆ.

ಆರ್.ಸಿ. ಸ್ಟುಡಿಯೋಸ್ ಮೂಲಕ ಹೊರಬರುತ್ತಿರುವ ಈ “ಫಾದರ್” ಚಿತ್ರವು ನೋಡುಗರನ್ನು ಭಾವುಕ ಪಯಣಕ್ಕೆ ಕರೆದೊಯ್ಯುವ ಹೃದಯ ಸ್ಪರ್ಶಿ ಚಿತ್ರವಾಗಲಿದೆ.

“ಫಾದರ್” ಅಂದರೆ ಒಂದು ಶಕ್ತಿ. ತಮ್ಮ ನಟನೆ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಕಾಶ್ ರಾಜ್ ಅವರೇ ಇಲ್ಲಿ “ಫಾದರ್”. ಇನ್ನು, ಡಾರ್ಲಿಂಗ್ ಕೃಷ್ಣ ಕೂಡ ಪ್ರಮುಖ ಆಕರ್ಷಣೆ. ಇವರಿಬ್ಬರ ಕಾಂಬೋದಲ್ಲಿ ಬರುತ್ತಿರುವ “ಫಾದರ್” ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, “ಲವ್ ಮಾಕ್ಟೇಲ್” ಜೋಡಿ ಇಲ್ಲೂ ಒಂದಾಗಿದೆ. ಡಾರ್ಲಿಂಗ್ ಕೃಷ್ಣ ಅವರ ಜೊತೆ ಅಮೃತಾ ಅಯ್ಯಂಗಾರ್ ಇದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಇವರೊಂದಿಗೆ ಅನೇಕ ನುರಿತ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಲ್ಲಿಗೆ “ಫಾದರ್” ಸಿನಿಮಾದ ಕುತೂಹಲ ಮತ್ತಷ್ಟು ಹೆಚ್ಚಿದೆ.

ಚಂದ್ರು ಅವರ ನಿರ್ಮಾಣದ ಚಿತ್ರಗಳಿಗೆ ಅವರದೆ ಆದ ಅಭಿಮಾನಿ ಬಳಗ ಇದೆ. “ಫಾದರ್” ಕೂಡ ಅವರ ನಿರೀಕ್ಷೆಯನ್ನು ಹೆಚ್ಚಿಸಿದೆ. ತಂದೆ – ಮಗನ ಬಾಂಧವ್ಯದ “ಫಾದರ್” ಚಿತ್ರ ಈ ವರ್ಷದ ಹಿಟ್ ಲಿಸ್ಟ್ ಸಿನಿಮಾಗಳ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳೂ ಇವೆ. ಅಭಿಮಾನಿಗಳು ಸಹ ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಮುಂಬೈನ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಅರ್ಪಿಸುವ, ಅಲಂಕಾರ್ ಪಾಂಡ್ಯನ್ ಅವರ ಸಹಯೋಗದಲ್ಲಿ ಆರ್.ಸಿ.ಸ್ಟುಡಿಯೋಸ್ ಈ ಸಿನಿಮಾ ನಿರ್ಮಿಸಿದರೆ, ರಾಜ್‍ ಮೋಹನ್‍ ನಿರ್ದೇಶನ ಮಾಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣವಿದೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ “ಫಾದರ್” ಚಿತ್ರಕ್ಕಿದೆ.

Related posts

ಎಂ.ಎಸ್ ಅಕ್ಷರ್ – ರೀಷ್ಮಾ ನಾಣಯ್ಯ ಅಭಿನಯದಲ್ಲಿ ಬಂತು “ಛೀ ಕಳ್ಳ” ಆಲ್ಬಂ ಸಾಂಗ್.

Kannada Beatz

“ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಮೊದಲ ಹಾಡು ಬಿಡುಗಡೆ.

Kannada Beatz

ನಿಖಿಲ್ ಕುಮಾರ್ ಅಭಿನಯದ “ರೈಡರ್” ಡಿಸೆಂಬರ್ 24ರಂದು ಅದ್ದೂರಿ ಬಿಡುಗಡೆ.

administrator

Leave a Comment

Share via
Copy link
Powered by Social Snap