Kannada Beatz
News

ರೀರೆಕಾರ್ಡಿಂಗ್ ನಲ್ಲಿ “ದಿಲ್ ಖುಷ್”

ವಿಭಿನ್ನ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ,‌ ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌ ಡಬ್ಬಿಂಗ್ ಕೂಡ ಪೂರ್ಣವಾಗಿದ್ದು, ರೀರೆಕಾರ್ಡಿಂಗ್ ನಡೆಯುತ್ತಿದೆ.

ಇದು ಬರಿ ಯುವಜನತೆಯ “ದಿಲ್ ಖುಷ್” ಅಲ್ಲ. ಎಲ್ಲರಿಗೂ ಹಿಡಿಸುವ “ದಿಲ್ ಖುಷ್”. ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಈ ಚಿತ್ರದಲ್ಲಿ ಯುವಪ್ರತಿಭೆ ರಂಜಿತ್ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ, ನಾಯಕಿ ಪಾತ್ರ ಅಷ್ಟೆ ಅಲ್ಲದೆ ಎಲ್ಲ ಪಾತ್ರಕ್ಕೂ ಪ್ರಾಮುಖ್ಯತೆ ಇದೆ, ನಮ್ಮ ಸುತ್ತ ಮುತ್ತ ನಡೆಯುವ ಕಥೆ ಎಂದೆನಿಸುತ್ತದೆ.. ಕಾಮಿಡಿ ಹಾಗು ಎಮೋಷನಲ್ ಸನ್ನಿವೇಶಗಳಲ್ಲಿ ರಂಗಾಯಣ ರಘು, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು ಅವರ ಪಾತ್ರಗಳು ಕಾಡುತ್ತವೆ ಎಂದು ನಿರ್ದೇಶಕ ಪ್ರಮೋದ್ ಜಯ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಈ ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ‌. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಫೆಬ್ರವರಿ ನಂತರ ಒಂದಾದ ಮೇಲೆ ಒಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಕೂಡ ಬರಲಿದೆ‌. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

ರಂಜಿತ್ ಎಂಬ ನೂತನ ಪ್ರತಿಭೆ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ. ಸ್ಪಂದನ ಸೋಮಣ್ಣ ಈ ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.

Related posts

*’ರಾವಣ ರಾಜ್ಯದಲ್ಲಿ ನವದಂಪತಿ’ಗಳಾದ ಯುವ ಪ್ರತಿಭೆ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ


*ನಿರ್ಮಾಪಕರಾದ ಬಡವ ರಾಸ್ಕಲ್ ಡೈರೆಕ್ಟರ್… ರಾವಣ ರಾಜ್ಯದಲ್ಲಿ ನವದಂಪತಿಗಳಿಗೆ ಸಾಥ್ ಕೊಟ್ಟ ಶಂಕರ್ ಗುರು*


‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ‌ ರಾವಣ ರಾಜ್ಯದಲ್ಲಿ ನವದಂಪತಿಗಳು ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೇ ಈ ಚಿತ್ರದ ಪ್ರಮುಖ‌ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.


ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾಗೆ ಯುವ ಪ್ರತಿಭೆ ರಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ನಿರ್ದೇಶನದ ಪಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ಡೊಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ  ಜೋಡಿಯಾಗಿ ನಟಿಸಿದ್ದಾರೆ.



ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು,  ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾವನ್ನು ಕನ್ನಡ‌ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.

Kannada Beatz

ಪ್ರೇಮ್ ಕಂಠಸಿರಿಯಲ್ಲಿ “ಪರಿಮಳ ಡಿಸೋಜಾ” ಚಿತ್ರದ ಹಾಡು. ಕೆ ಕಲ್ಯಾಣ್ ಲಿರಿಕ್ಸ್ 👌

Kannada Beatz

ಸೆಪ್ಟೆಂಬರ್ ನಲ್ಲಿ “ರಾಜ ರಾಣಿ ರೋರರ್ ರಾಕೆಟ್ “

Kannada Beatz

Leave a Comment

Share via
Copy link
Powered by Social Snap