Kannada Beatz
News

ಆರ್. ಚಂದ್ರು 45ನೇ ಹುಟ್ಟುಹಬ್ಬಕ್ಕೆ ಡಾಕ್ಟರೇಟ್ ಗೌರವ

ಮಣಿಪುರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಘೋಷಣೆ

ನಿರ್ದೇಶಕ, ನಿರ್ಮಾಪಕನಾಗಿ ಹೆಸರು ಮಾಡಿರುವ ಆರ್. ಚಂದ್ರು ಸದ್ಯ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವಾರ ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು 20 ವರ್ಷಗಳ ಹಿಂದೆ 100 ರೂ ಇಟ್ಟುಕೊಂಡು ಬೆಂಗಳೂರಿಗೆ ಬಂದವರು. ರೈಟರ್ ಆಗಿ ಚಿತ್ರರಂಗದಲ್ಲಿ ವೃತ್ತಿ ಪ್ರಾರಂಭ ಮಾಡಿದ ಚಂದ್ರು ನಿರ್ದೇಶನಾಗಿ, ನಿರ್ಮಾಪಕನಾಗಿ ಮೈಲುಗಲ್ಲು ಸೃಷ್ಟಿಸಿದ್ದಾರೆ. ಬರಿ ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿ ಹಳ್ಳಿಗೂ ಚಂದ್ರು ಪರಿಚಯ. ಎತ್ತಿನ ಹೊಳೆ ಯೋಜನೆ ಹೋರಾಟ ಸೇರಿದಂತೆ ಹಲವು ಅಭಿವೃದ್ಧಿಪರ ಹೋರಾಟದಲ್ಲಿ ಭಾಗಿಯಾಗಿದ್ದ ಚಂದ್ರು ಶಿಕ್ಷಣ ಹಾಗೂ ಧಾರ್ಮಿಕವಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ಜೊತೆಗೆ ಚಂದ್ರು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ಮಣಿಪುರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಡಲು ಘೋಷಣೆ ಮಾಡಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆರ್.‌ ಚಂದ್ರು ಮಾತನಾಡಿ, ‘ನಾನು ಅಂದುಕೊಂಡಿರಲಿಲ್ಲ ಡಾಕ್ಟರೇಟ್ ಪಡೆಯುತ್ತೇನೆಂದು. ತಂದೆ ನನ್ನನ್ನು ಡಾಕ್ಟರ್ ಮಾಡಲು ಓದಿಸುತ್ತಿದ್ದರು. ಆಗಲಿಲ್ಲ. ನಂಗೆ ಸಿನಿಮಾ ರಂಗದಲ್ಲಿ ಇಷ್ಟ ಆದ್ದರಿಂದ ಇಲ್ಲಿಗೆ ಬಂದೆ. ನಾನು ಮಾಡಿರುವ ಸಿನಿಮಾ ಸೇರಿದಂತೆ ಗೀಡ ನೆಡುವುದು, ನೀರಾವರಿ ಹೋರಾಟ ಹೀಗೆ ಸಮಾಜಪರ ಕೆಲಸಕ್ಕೆ ಈ ಗೌರವ ಡಾಕ್ಟರೇಟ್ ಬಂದಿದೆ. ಈ ಡಾಕ್ಟರೇಟ್ ಬಂದಿದ್ದು ತಂದೆಗೆ ಅರ್ಪಣೆ ಮಾಡುತ್ತೇನೆ. ನನ್ನನ್ನು ಸಿನಿಮಾ ಜೊತೆಗೆ ಕೃಷಿ, ಮೀನುಗಾರಿಕೆ, ತೋಟಗಾರಿಕೆ ಸೇರಿದಂತೆ ಹಲವಾರು ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಡಾಕ್ಟರ್ ಚಂದ್ರು ಆಗಿ ಇರುವ ಬದಲು ಆರ್. ಚಂದ್ರು ಆಗಿಯೇ

ಮುಂದುವರೆಯುತ್ತೇನೆ. ಇಂದು ಚಿತ್ರರಂಗದ ಬಗ್ಗೆ ಬ್ಯಾಡ್ ಇಂಪ್ರೆಸ್ ಆಗುತ್ತಿದೆ. ನಾವೆಲ್ಲಾ ಪ್ರೀತಿಯಿಂದ ಸಿನಿಮಾ ಮಾಡಬೇಕು. ಹಾಗೆಯೇ ಪ್ರೇಕ್ಷಕ ಮೊದಲು ನಮ್ಮ ಮನೆ ಊಟ (ಸಿನಿಮಾ) ಇಷ್ಟ ಪಡುವಂತೆ ಆಗಬೇಕು. ಸದ್ಯ ನಮ್ಮ ‘ಫಾದರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಾನೇ ಒಂದು ದೊಡ್ಡ ಸಿನಿಮಾ ಪ್ಲ್ಯಾನ್ ಮಾಡತಾ ಇದ್ದು ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಆರ್ ಚಂದ್ರು ಹಿತೈಷಿ ಕೆ.ಎ.ಎಸ್ ಆಫೀಸರ್ ಮಂಜಪ್ಪ, ನಿರ್ಮಾಪಕ ಉದಯ ಮೆಹ್ತಾ, ಜೀಮ್ ರವಿ, ನವರಸನ್ ಸೇರಿದಂತೆ ಹಲವು ಗಣ್ಯರು ಚಂದ್ರುಗೆ ಶುಭ ಹಾರೈಸಿದರು.

Related posts

ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರಿಂದ ಅನಾವರಣವಾಯಿತು ನಿರಂಜನ್ ಶೆಟ್ಟಿ ಅಭಿನಯದ “31 DAYS” ಚಿತ್ರದ ಟೀಸರ್ ಹಾಗೂ ಬಿಡುಗಡೆ ದಿನಾಂಕ

Kannada Beatz

“ಸೂತ್ರಧಾರಿ”ಯಾದ ಚಂದನ್ ಶೆಟ್ಟಿ.

Kannada Beatz

ಸೆಟ್ಟೇರಿತು ‘ಅಜಯಂತೆ ರಂದಂ ಮೋಷನಂ’- 3ಡಿಯಲ್ಲಿ ಮೋಡಿ ಮಾಡಲಿದ್ದಾರೆ ಟೊವಿನೋ ಥಾಮಸ್, ಕೃತಿ ಶೆಟ್ಟಿ..!

Kannada Beatz

Leave a Comment

Share via
Copy link
Powered by Social Snap