‘ನಮ್ ಟಾಕೀಸ್’ನ ನೇತೃತ್ವದಲ್ಲಿ ನಡೆಯುವಂತಹ, ಸಿನಿಮಾ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಸೇರಿ ಆಡುವಂತಹ ಏಕೈಕ ಕ್ರಿಕೆಟ್ ಪಂದ್ಯಾಟ ‘ಫ್ಯಾನ್ಸ್ ಕ್ರಿಕೆಟ್ ಲೀಗ್’. 2015ನೇ ಇಸವಿಯಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಕ್ರಿಕೆಟ್ ಪಂದ್ಯಾಟ, ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದದೊಂದಿಗೆ ಈ ಬಾರೀ ತನ್ನ ಹತ್ತನೇ ಆವೃತ್ತಿಯ ಆರಂಭ ಕಾಣುತ್ತಿದೆ. ಸದ್ಯ ಈ ಬಾರಿಯ ದಿನಾಂಕಗಳು ಹೊರಬಿದ್ದಿದ್ದು, ‘ಲೂಸಿಯ’,’ಅಯೋಗ್ಯ’ ಸಿನಿಮಾಗಳ ಮೂಲಕ ಕನ್ನಡಿಗರ ಚಿರಪರಿಚಿತ ನಟ ಸತೀಶ್ ನೀನಾಸಂ ಅವರು ದಿನಾಂಕಗಳನ್ನ ಘೋಷಣೆ ಮಾಡಿದ್ದಾರೆ.
ದೇವರಾಜ್ ಅವರ ಆಶೀರ್ವಾದದೊಂದಿಗೆ ನಡೆಯಲಿರುವ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ನ 10ನೇ ಆವೃತ್ತಿ ಇದೇ ಮೇ 27 ಹಾಗು 28ರಂದು ನಡೆಯಲಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಸತೀಶ್ ನೀನಾಸಂ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಪಂದ್ಯಾಟಕ್ಕೆ ಪ್ರಜ್ವಲ್ ದೇವರಾಜ್ ಅವರ ಸಹಕಾರ ಕೂಡ ಇರಲಿದ್ದು, ಪ್ರತೀ ಸಾರಿಯಂತೆ ಈ ಬಾರೀ ಕೂಡ ಯಶಸ್ವಿ ಪಂದ್ಯಾಟದ ನಿರೀಕ್ಷೆಯಿದೆ. ಸದ್ಯದಲ್ಲೇ ಹೆಸರಾಂತ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ ಅವರ ಜೊತೆಗಿನ ಇನ್ನೊಂದು ಮಹತ್ತರ ಅಪ್ಡೇಟ್ ಮೂಲಕ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ತಂಡ ಮರಳಿ ಬರಲಿದೆ ಎಂದು ಆಯೋಜಕರದ ಭರತ್ ಎಸ್.ಎನ್ ತಿಳಿಸಿದ್ದಾರೆ