ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸಬರ ಹೊಸ ಸಿನಿಮಾಗಳು ಬರ್ತಾನೆ ಇವೆ. ಇದೀಗ ವಿಭಿನ್ನ ಟೈಟಲ್ ಮೂಲಕ ಹೊಸ ಸಿನಿಮಾವೊಂದು ಬರಲು ಸಜ್ಜಾಗಿದೆ. ಅದೇ 1000 ವಾಲಾ. ಕಮರ್ಷಿಯಲ್ ಆಕ್ಷನ್ ಕಥಾಹಂದರ ಹೊಂದಿರುವ 1000 ವಾಲಾ ಸಿನಿಮಾಕ್ಕೆ ಶಿವಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕ್ಲಾಪ್ ಬಾಯ್ ಆಗಿ ಸಿನಿ ಬದುಕು ಆರಂಭಿಸಿ ಹಲವಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ, ಸಹ ನಿರ್ದೇಶಕನಾಗಿ ಆಗಿ ಕೆಲಸ ಮಾಡಿರುವ ಶಿವಕುಮಾರ್ 1000 ವಾಲಾ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಭೈರವ ಕಂಬೈನ್ಸ್ ನಡಿ ಈ ಸಿನಿಮಾವನ್ನು ಸಿ ಎನ್ ಅಶೋಕ್ ನಿರ್ಮಾಣ ಮಾಡಲಿದ್ದಾರೆ. ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿರುವ ಅಶೋಕ್ ಸಿನಿಮಾ ಮಾಡಬೇಕೆಂಬ ಕನಸನ್ನು 1000 ವಾಲಾ ಸಿನಿಮಾ ಮೂಲಕ ನನಸು ಮಾಡಿಕೊಳ್ತಿದ್ದಾರೆ. ಸದ್ಯಕ್ಕೆ 1000 ವಾಲಾ ಸಿನಿಮಾ ಬಳಗ ಸಂಕ್ರಾಂತಿ ಹಬ್ಬಕ್ಕೆ ತಾರಾಬಳಗ ಪರಿಚಯ ಮಾಡುವ ಪ್ಲ್ಯಾನ್ ಹಾಕಿಕೊಂಡಿದೆ.