Kannada Beatz
News

ಶಿವರಾಜ್ ಕೆ.ಆರ್.ಪೇಟೆ ಹಾಗೂ ಯೋಗರಾಜ್ ಭಟ್ ರ ಕಾಮಿಡಿ ‘ಧಮಾಕ’..! ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸ್ತಿದೆ ‘ಧಮಾಕ’ ಟೀಸರ್ ಝಲಕ್…!


ಸ್ಯಾಂಡಲ್ ವುಡ್ ನ ಬಹುಬೇಡಿಕೆ ಹಾಸ್ಯ ಕಲಾವಿದರ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ ಧಮಾಕ.. ಮೋಷನ್ ಪೋಸ್ಟರ್ ನಿಂದಲೇ ಸಖತ್ ಸದ್ದು ಮಾಡಿದ್ದ ಧಮಾಕ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ವಿಕಟಕವಿ ಯೋಗರಾಜ್ ಭಟ್ಟರ್ ಹಿನ್ನೆಲೆ ಧ್ವನಿಯಲ್ಲಿ ಶುರುವಾಗುವ ಧಮಾಕ ಟೀಸರ್ ಸಖತ್ ಮಜವಾಗಿ ಮೂಡಿ ಬಂದಿದೆ. ಶಿವರಾಜ್ ಕೆ.ಆರ್ ಪೇಟೆ ಹಾಗೂ ಯೋಗರಾಜ್ ಭಟ್ಟರ್ ಕಾಮಿಡಿ ಜುಗಲ್ ಬಂದಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸ್ತಿದೆ.

ಸಖತ್ ಮಜಾ ಕೊಡುವ ಪಂಚಿಂಗ್ ಡೈಲಾಗ್..ಶಿವರಾಜ್ ಕೆ ಆರ್ ಪೇಟೆ ಸೆನ್ಸ್ ಆಫ್ ಹ್ಯೂಮರ್..ಟೋಟಲ್ ಆಗಿ ಹೇಳಬೇಕಂದ್ರೆ ಧಮಾಕ ಟೀಸರ್ ವಿಭಿನ್ನವಾಗಿ ಮೂಡಿ ಬಂದಿದೆ. ಹೊಸ ಪ್ರಯತ್ನಕ್ಕೆ ಯುವ ಪ್ರತಿಭೆಗಳು ಮುನ್ನುಡಿ ಬರೆದಿದ್ದಾರೆ. ಈ ಹಿಂದೆ ಸಿಂಪಲ್ ಸುನಿ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮೀ ರಮೇಶ್ ಧಮಾಕಗೆ ಆಕ್ಷನ್ ಕಟ್ ಹೇಳುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಕಾಮಿಡಿ ಕಿಲಾಡಿ ಶೋ ಮೂಲಕವೇ ಗುರುತಿಸಿಕೊಂಡಿರುವ ನಯನಾ ಶರತ್ ಶಿವರಾಜ್ ಕೆಆರ್ ಪೇಟೆಗೆ ಜೊತೆಯಾಗಿ ನಟಿಸ್ತಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸುನೀಲ್ ಎಸ್‌. ರಾಜ್ ಮತ್ತು ಅನ್ನಪೂರ್ಣ ಬಿ. ಪಾಟೀಲ್ ಬಂಡವಾಳ ಹಾಕಿದ್ದಾರೆ. ಹಾಲೇಶ್ ಕ್ಯಾಮೆರಾ, ವಿಕಾಸ್ ವಸಿಷ್ಠ ಮ್ಯೂಸಿಕ್, ವಿನಯ್ ಕೂರ್ಗ್ ಸಂಕಲನ ಧಮಾಕ ಸಿನಿಮಾದಲ್ಲಿರಲಿದೆ.

Related posts

🎵 ‘ಜೊತೆಯಾಗಿ ಹಿತವಾಗಿ’ ಚಿತ್ರದ “ಅರೆರೆರೆ” ಹಾಡಿಗೆ ಭಾರೀ ಸದ್ದು – ಬೆಳಗಾವಿ ನಿತಿನ್ ಹಾಗೂ ಸುವರ್ತಾ ಎಮೋಶನಲ್ ಜೋಡಿ ಪ್ರೇಕ್ಷಕರ ಮನಸ್ಸಲ್ಲಿ ಲಗ್ಗೆ

Kannada Beatz

ಒಂದು ಸರಳ ಪ್ರೇಮಕಥೆ ಮೊದಲ ಹಾಡು ರಿಲೀಸ್..ನೀನ್ಯಾರೆಲೆ ಎಂದು ಗುನುಗಿದ ವಿನಯ್ ರಾಜ್ ಕುಮಾರ್

Kannada Beatz

ಪ್ರೀತಿಯಲ್ಲಿ ನಂಬಿಕೆ ಮತ್ತು ತಾಳ್ಮೆ ಮುಖ್ಯ, ಇವೆರಡು ಇಲ್ಲದ ಪ್ರೀತಿ ಎಂದಿಗೂ ಗೆಲ್ಲುವುದಿಲ್ಲ: ಈ ಸಂದೇಶ ಸಾರಿದೆ “ಪರ್ಯಟನೆ” ಎಂಬ ಕನ್ನಡ ಆಲ್ಬಂ ಗೀತೆ

Kannada Beatz

Leave a Comment

Share via
Copy link
Powered by Social Snap