Kannada Beatz
News

ಜುಲೈ 8ಕ್ಕೆ ಚಂದ್ರಕೀರ್ತಿ ಚೊಚ್ಚಲ ಕನಸು ಅನಾವರಣ..80 ಥಿಯೇಟರ್ ನಲ್ಲಿ ತೂತುಮಡಿಕೆ ರಿಲೀಸ್

ಒಂದಷ್ಟು ಹೊಸಬರು ಸೇರಿಕೊಂಡು ತಯಾರಿಸಿರುವ ತುತೂಮಡಿಕೆ ಸಿನಿಮಾ ಬಿಡುಗಡೆ ಹೊಸ್ತಿನಲ್ಲಿ ನಿಂತಿದೆ. ಇದೇ ಜುಲೈ8ಕ್ಕೆ ಚಿತ್ರ ತೆರೆಗೆ ಬರ್ತಿದೆ. ಈಗಾಗ್ಲೇ ಚಿತ್ರತಂಡ ಜಿಲ್ಲೆ ಜಿಲ್ಲೆ ಸುತ್ತಿ ಪ್ರಮೋಷನ್ ಕಹಳೆ ಮೊಳಗಿಸಿದೆ. ಪೋಸ್ಟರ್, ಟ್ರೇಲರ್ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತುತೂಮಡಿಕೆ ಸಿನಿಮಾ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ಸ್ವತಂತ್ರ ನಿರ್ದೇಶಕರಾಗುವುದರ ಜೊತೆಗೆ ನಾಯಕನಾಗಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನೂ ದಿನಗಣನೆ ಶುರುವಾಗಿದ್ದು, ಹೀಗಾಗಿ ಇಡೀ ಚಿತ್ರತಂಡ ಮಾಧ್ಯಮದರ ಮುಂದೆ ಹಾಜರಾಗಿ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಕಂ ನಾಯಕ ಚಂದ್ರಕೀರ್ತಿ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಎರಡೂವರೆ ವರ್ಷದಿಂದ ಕಾದು ಚಿತ್ರ ರಿಲೀಸ್ ಮಾಡ್ತಿದೆ. ಜನ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡ್ಬೇಕು ಅನ್ನೋದು ನಮ್ಮ ಇಡೀ ಚಿತ್ರತಂಡದ ಕನಸು. ಜುಲೈ 8ಕ್ಕೆ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ. ಪ್ರತಿ ಜಿಲ್ಲೆಯಲ್ಲಿಗೂ ಹೋಗಿ ಪ್ರಮೋಷನ್ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿಯೂ ಇಷ್ಟವಾಗುವ ಸಬೆಕ್ಟ್ ನಮ್ಮದು. ಇದು ಯಾವುದೇ ಸಿನಿಮಾದ ಸ್ಫೂರ್ತಿಯಲ್ಲ ಎಂದರು.

ನಿರ್ಮಾಪಕರಾದ ಶಿವಕುಮಾರ್‌ ಮಾತನಾಡಿ, ತುಂಬಾ ಎಕ್ಸೈಟ್ ಆಗಿದ್ದೇವೆ. ಇದೇ 8ರಂದು ಸಿನಿಮಾ ತೆರೆಗೆ ಬರ್ತಿದೆ. 80 ಥಿಯೇಟರ್ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈಗಾಗ್ಲೇ ಒಟಿಟಿ ಸಿನಿಮಾ ಮಾರಾಟವಾಗಿದೆ. ಇದು ಸಿನಿಮಾದ ಕ್ವಾಲಿಟಿ ಮತ್ತು ಕಂಟೆಂಟ್ ಎರಡನ್ನು ತೋರಿಸುತ್ತದೆ ಎಂದು ತಿಳಿಸಿದರು.

ತೂತುಮಡಿಕೆ ಕಾಮಿಡಿ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾವಾಗಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಚಂದ್ರ ಕೀರ್ತಿ, ಎ ಎಸ್ ಜಿ ಮತ್ತು ಡಾಲರ್ ಬರೆದಿದ್ದು, ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇನ್ನು ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ಧಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

Related posts

*’ರಾವಣ ರಾಜ್ಯದಲ್ಲಿ ನವದಂಪತಿ’ಗಳಾದ ಯುವ ಪ್ರತಿಭೆ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ


*ನಿರ್ಮಾಪಕರಾದ ಬಡವ ರಾಸ್ಕಲ್ ಡೈರೆಕ್ಟರ್… ರಾವಣ ರಾಜ್ಯದಲ್ಲಿ ನವದಂಪತಿಗಳಿಗೆ ಸಾಥ್ ಕೊಟ್ಟ ಶಂಕರ್ ಗುರು*


‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ‌ ರಾವಣ ರಾಜ್ಯದಲ್ಲಿ ನವದಂಪತಿಗಳು ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೇ ಈ ಚಿತ್ರದ ಪ್ರಮುಖ‌ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.


ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾಗೆ ಯುವ ಪ್ರತಿಭೆ ರಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ನಿರ್ದೇಶನದ ಪಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ಡೊಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ  ಜೋಡಿಯಾಗಿ ನಟಿಸಿದ್ದಾರೆ.



ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು,  ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾವನ್ನು ಕನ್ನಡ‌ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.

Kannada Beatz

ಡಾಲಿ ಧನಂಜಯ ಅಭಿನಯದ Once Upon A Time “ಜಮಾಲಿಗುಡ್ಡ” ಚಿತ್ರದ ಚಿತ್ರೀಕರಣ ಪೂರ್ಣ.

Kannada Beatz

ಆಂಜನೇಯನ ಸನ್ನಿಧಿಯಲ್ಲಿ ಶುರುವಾಯಿತು “ವರ್ಣಂ” .

Kannada Beatz

Leave a Comment

Share via
Copy link
Powered by Social Snap