Kannada Beatz
News

ಸದ್ಯದಲ್ಲೇ ಆರಂಭವಾಗಲಿದೆ ಶಿವಣ್ಣನ ಹೊಸಚಿತ್ರ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೊಟ್ರೇಶ್ ನಿರ್ದೇಶನ.

ಅರವತ್ತನೇ ವಯಸ್ಸಿನಲ್ಲೂ ಹದಿಹರೆಯದವರನ್ನು ನಾಚಿಸುವಂತಹ ಉತ್ಸಾಹವಿರುವ ನಟ ಶಿವರಾಜಕುಮಾರ್.

ಇತ್ತೀಚೆಗೆ ಬಿಡುಗಡೆಯಾದ ಶಿವಣ್ಣ ಅಭಿನಯದ “ಬೈರಾಗಿ” ಸಿನಿಮಾ ಕೂಡ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಜುಲೈ 12 ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಕೊಟ್ರೇಶ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಶಿವಣ್ಣ ಅಭಿನಯದ “ವಜ್ರಕಾಯ”, ” ಬಂಗಾರ s\o ಬಂಗಾರದ ಮನುಷ್ಯ” ಮುಂತಾದ ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಕೊಟ್ರೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಮೊದಲು ನಾನು ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳುಸುತ್ತೇನೆ. ಅವರು ನೂರುವರ್ಷ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಅವರ ಅಭಿನಯದ ಕೆಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಈಗ ಅಂತಹ ಅದ್ಭುತ ನಟನ ಚಿತ್ರ ನಿರ್ದೇಶಿಸುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ. ನನಗೆ ನಿರ್ದೇಶನ ಮಾಡಲು ಅವಕಾಶ ನೀಡಿರುವ ಶಿವಣ್ಣ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಾಕಷ್ಟು ಶ್ರಮವಹಿಸುತ್ತೇನೆ. ಈಗ ಚಿತ್ರೀಕರಣ ನಡೆಸುವ ಸ್ಥಳಗಳ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಆರಂಭವಾಗುತ್ತದೆ ಎಂದು ನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.

ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಉತ್ಸುಕನಾಗಿದ್ದೇನೆ. ನಾನು ನಟಿಸಿರುವ ಮೂರು ಚಿತ್ರಗಳಲ್ಲಿ ಕೊಟ್ರೇಶ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಕೊಟ್ರೇಶ್ ಅವರಿಗೆ ಶುಭವಾಗಲಿ ಎಂದು ಶಿವಣ್ಣ ಹಾರೈಸಿದ್ದಾರೆ.

ಎ ಆರ್ ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಜನಪ್ರಿಯ ಸಂಭಾಷಣೆಕಾರ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಮಾಸ್ತಿ, ಕೊಟ್ರೇಶ್ ಹಾಗೂ ಅಭಿ ಚಿತ್ರಕಥೆ ಬರೆದಿರುವ ಈ ನೂತನ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಸೋಹಿತ್ ನೀಲಮ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಸಹ ಈ ಚಿತ್ರಕ್ಕಿರಲಿದೆ.

Related posts

‘ಗಜರಾಮ’ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯ – ಸುನೀಲ್ ಕುಮಾರ್ ವಿ ಎ ನಿರ್ದೇಶನದ ಚೊಚ್ಚಲ ಸಿನಿಮಾ

Kannada Beatz

ರಿವೀಲ್ ಆಯ್ತು ‘ದಸರಾ’ದಲ್ಲಿ ಕೀರ್ತಿ ಸುರೇಶ್ ಲುಕ್ – ಹಳ್ಳಿ ಹುಡುಗಿಯಾಗಿ ಮಿಂಚಲಿದ್ದಾರೆ ಮಹಾನಟಿ

Kannada Beatz

ಬೆಂಗಳೂರಿನಲ್ಲಿ ‘The Conversion’ ಸಿನಿಮಾದ ಪ್ರೀಮಿಯರ್ ಶೋ..ಮೇ 6ಕ್ಕೆ ಬೆಳ್ಳಿತೆರೆಗೆ ಮತಾಂತರ ವಿಷಯಾಧಾರಿತ ಚಿತ್ರ ಎಂಟ್ರಿ

Kannada Beatz

Leave a Comment

Share via
Copy link
Powered by Social Snap