Kannada Beatz
News

ಬಿಡುಗಡೆಗೆ ರೆಡಿ ಭುವನಂ ಗಗನಂ…ಪ್ರೇಮಿಗಳ ದಿನಕ್ಕೆ ಪ್ರಮೋದ್-ಪೃಥ್ವಿ ಸಿನಿಮಾ ತೆರೆಗೆ ಎಂಟ್ರಿ

ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ದರ್ಶನ

ಎಸ್‌ವಿಸಿ ಫಿಲಂಸ್‌ ಬ್ಯಾನರ್‌ನಡಿ ಎಂ.ಮುನೇಗೌಡ ನಿರ್ಮಿಸಿರುವ ಭುವನಂ ಗಗನಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನದ ಸ್ಪೆಷಲ್ ಆಗಿ ಚೆಂದದ ಪ್ರೇಮಕಥಾಹಂದರ ಹೊಂದಿರುವ ಚಿತ್ರ ತೆರೆಗೆ ಬರ್ತಿದೆ. ಲವರ್ ಬಾಯ್ ಆಗಿ ಗಮನಸೆಳೆದಿರುವ ಪೃಥ್ವಿ ಅಂಬರ್ ಹಾಗೂ ರಗಡ್ ಪಾತ್ರಗಳ ಮೂಲಕ ಖ್ಯಾತಿ ಪಡೆದಿರುವ ಪ್ರಮೋದ್ ನಾಯಕರಾಗಿ ಭುವನಂ ಗಗನಂನಲ್ಲಿ ನಟಿಸಿದ್ದಾರೆ.

ಗಿರೀಶ್‌ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಭುವನಂ ಗಗನಂ ಪ್ರೇಮ, ಪ್ರಣಯ ಮತ್ತು ಕೌಟುಂಬಿಕ ಭಾವನೆಗಳನ್ನು ಹೊಂದಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ನಡೆಯುತ್ತದೆ. ಲವ್ ಮಾಕ್‌ಟೇಲ್‌ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ರಾಚೇಲ್ ಡೇವಿಡ್ ಪ್ರಮೋದ್ ಅವರಿಗೆ ಜೋಡಿಯಾಗಿದ್ದು, ಅಶ್ವತಿ ಪೃಥ್ವಿಗೆ ಜೋಡಿಯಾಗಿದ್ದಾರೆ.

ಚಿತ್ರದ ಇತರ ತಾರಾಗಣದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ ಮತ್ತು ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ.
ಉದಯ್ ಲೀಲಾ ಅವರ ಛಾಯಾಗ್ರಹಣ, ಗುಮ್ಮನೇನಿ ವಿಜಯ್ ಅವರ ಸಂಗೀತ ಮತ್ತು ಸುನೀಲ್ ಕಶ್ಯಪ್ ಅವರ ಸಂಕಲನ ಚಿತ್ರಕ್ಕಿದೆ. ಟೀಸರ್ ಹಾಗೂ ಹಾಡಿನ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಶೀಘ್ರದಲ್ಲೇ ಪ್ರಚಾರ ಕಾರ್ಯ ಆರಂಭಿಸಲಿದೆ.

Related posts

ದೀಪಾವಳಿಗೆ 1000 ವಾಲಾ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್

administrator

ಕುಮಾರಸ್ವಾಮಿ ದೇವಸ್ಥಾನದಲ್ಲಿ “ವೆಡ್ಡಿಂಗ್ ಗಿಫ್ಟ್”ಗೆ ಅದ್ದೂರಿ ಚಾಲನೆ.

administrator

ಎಲ್ಲರ ಲೈಫ್ ನ ರಾಮಾಯಣ ಹೇಳೋಕ್ಕೆ ಬಂದ ರಾಮ…ರಿಷಿ ರಾಮನ ಅವತಾರ ಟ್ರೇಲರ್ ರಿಲೀಸ್

Kannada Beatz

Leave a Comment

Share via
Copy link
Powered by Social Snap