Kannada Beatz
News

ಕಿವಿಎನ್ ಪ್ರೊಡಕ್ಷನ್ ನಲ್ಲಿ ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಗೀತು ಮಾಧವನ್ ಜೋಡಿ ಕೈಗೆತ್ತಿಕೊಂಡಿದ್ದಾರೆ

ಕೆ.ವಿ.ಎನ್ ಪ್ರೊಡಕ್ಷನ್ಸ್ ಮತ್ತು ತೆಸ್ಪಿಯನ್ ಫಿಲ್ಮ್ಸ್  ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನ ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ ಗೆದ್ದಿರೋ, ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೋಡಿಯ ಕೈಗಿತ್ತಿದ್ದಾರೆ.

ತೆಸ್ಪಿಯನ್ ಫಿಲ್ಮ್ಸ್ ನ ಶ್ರೀಮತಿ ಶೈಲಜಾ ದೇಸಾಯಿ ಜೊತೆಗೆ  ಕೆವಿಎನ್ ಪ್ರೊಡಕ್ಷನ್ಸ್ ನ ಈ ಕಾಂಬಿನೇಶನ್ ಬಗ್ಗೆ ಶ್ರೀ ವೆಂಕಟ್ ಕೆ ನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಯಾಕೆಂದರೆ ಮಂಜುಮ್ಮಲ್ ಬಾಯ್ಸ್ ನಿರ್ದೇಶಿಸಿದ್ದ ಚಿದಂಬರಂ ಜೊತೆಗೆ, ಇತ್ತೀಚೆಗೆ ಎಲ್ಲರ‌ ಮನಗೆದ್ದಿದ್ದ ‘ಆವೇಶಮ್’ ಖ್ಯಾತಿಯ ನಿರ್ದೇಶಕ ಜಿತು‌ ಮಾಧವನ್ ಈ ಹೊಸ ಯೋಜನೆಗೆ ಜೊತೆಯಾಗಲಿದ್ದಾರೆ.

ಅಷ್ಟೇ ಅಲ್ಲ ಈ‌ ಚಿತ್ರದಲ್ಲಿ ನುರಿತ ತಂತ್ರಜ್ಞರ ದೊಡ್ಡ‌ ಪಡೆಯೇ ಇರಲಿದೆ.
ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.

ಕೆವಿಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ವೆಂಕಟ ಕೆ ನಾರಾಯಣ ಅವರು ಮಾತನಾಡ್ತಾ, ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ಕೊಡೋ ದೃಷ್ಟಿಯಿಂದ ಕೆಲಸ ಮಾಡ್ತೇವೆ. ಅದ್ರ‌ಂತೆ ಇಂಥ ಹೊಸ ಬಗೆಯ ಚಿಂತನೆಯುಳ್ಳ, ನಿರ್ದೇಶಕರಿಂದ ಜನರನ್ನ ಮನರಂಜಿಸೊ ಕೆಲಸಕ್ಕೆ ಕೈ ಹಾಕಿರೋದೆ ಒಂದು ಮೈನವಿರೇಳಿಸೊ ಪ್ರಯತ್ನ. ಇಂತಹ ತಂಡದ ಜೊತೆಗೆ ಸಿನಿಮಾ ಮಾಡೋ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡ್ತಿರೋದು ನಮಗೆ ಹೆಮ್ಮೆ ತಂದಿದೆ.

‘ ಒಂದು ಕಥೆಯನ್ನ ತೆರೆಮೇಲೆ ತರೊ ಪ್ರಕ್ರಿಯೆನೇ ರೋಮಾಂಚಕ… ನನ್ನಂತೆಯೇ ಒಳ್ಳೆ ಕಥೆಗೆ, ಸ್ಕ್ರಿಪ್ಟ್ ಗೆ ಒತ್ತು ಕೊಡೊ ತಂಡದ ಜೊತೆ ಕೆಲಸ ಮಾಡ್ತಿರೋದು‌ ನಿಜಕ್ಕೂ‌ ಹೆಮ್ಮೆಯ ವಿಷಯ.. ಹೀಗಂತ ನಿರ್ದೇಶಕ ಚಿದಂಬರಂ ಹೇಳಿದ್ರೆ, ಈ ಚಿತ್ರಕ್ಕೆ‌ ಕಥೆ ಬರೀತಿರೊ ಆವೇಶಮ್ ನಿರ್ದೇಶಕ  ಜೀತು‌ ಮಾಧವನ್ ‘ ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ.. ಸಿನಿಮಾ ಕೃಷಿಯ ಬಗ್ಗೆ ಇಷ್ಟೊಂದು ಗಾಢ ಪ್ರೀತಿಯುಳ್ಳ ತಂಡದ ಜೊತೆ‌ ಕೆಲಸ ಮಾಡೋದೆ ಒಂದು ದೊಡ್ಡ ಖುಷಿ ‘ ಅಂತ ಅಭಿಪ್ರಾಯಪಟ್ಟರು.

ಕೆವಿಎನ್ ಪ್ರೊಡಕ್ಷನ್ಸ್ ಪಾಲಿಗೆ 2025 ಸುವರ್ಣ ಸಮಯವಾಗಲಿದೆ. ಈಗಾಗ್ಲೆ ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ತಮಿಳಿನ ದಳಪತಿ ಜೊತೆ ‘ತಳಪತಿ 69’, ಹಿಂದಿಯಲ್ಲಿ
ಪ್ರಿಯದರ್ಶನ್ ಜೊತೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಹಾಗೆ  ಧೃವ ಸರ್ಜಾ‌ ಪ್ರೇಮ್ಸ್ ಕಾಂಬೋದ ‘ಕೆಡಿ’ ರಿಲೀಸ್ ಗೆ ರೆಡಿಯಾಗಿ ನಿಂತಿದೆ.

ಇದೀಗ ಮಲಯಾಳಂ‌ ಚಿತ್ರರಂಗಕ್ಕೆ ಹೀಗೆ ನುರಿತರೊಂದಿಗೆ ಕಾಲಿಡ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನ ಹಾಕಿಕೊಂಡಿರೋ ಸೂಚನೆ ಕೆವಿಎನ್ ಸಂಸ್ಥೆ ಕೊಡ್ತಿದೆ.

Related posts

ಬಿಡದಿ ಸಮೀಪ ಪ್ರಾರಂಭವಾಯಿತು “ಜಾಲಿವುಡ್”

Kannada Beatz

ಜೋರಾಗಿದೆ “ಬಡ್ಡೀಸ್” ಗೆಲುವಿನ ಓಟ.

Kannada Beatz

ಈ ವಾರ ತೆರೆಗೆ “ಲವ್ 360”.

Kannada Beatz

Leave a Comment

Share via
Copy link
Powered by Social Snap