Kannada Beatz
News

“ಅಮೄತ ಅಪಾರ್ಟ್ಮಮೆಂಟ್ಸ್” ತಂಡದಿಂದ, “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆಯನ್ನು ಯುಟ್ಯೂಬ್ ಛಾನಲ್ ಮುಖಾಂತರ ಬಿಡುಗಡೆ ಮಾಡಿದೆ.


ಗಂಡ-ಹೆಂಡತಿಯ ಮಧ್ಯದ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವಂತಹ, ಪ್ರೇಕ್ಷನ ಮನ ತಟ್ಟುವಂತಹ ಒಂದು ವಿಶೇಷ ಹಾಡಿನ ಅವಶ್ಯಕತೆ ಇತ್ತು. ಈ ಥರದ ಒಂದು ವಿನೂತನ ಪ್ರೇಮಗೀತೆಗೆ, ಹೂ-ಹೃದಯದ ಪ್ರೇಮಕವಿ ಕೆ.ಕಲ್ಯಾಣರವರೇ ಸೂಕ್ತ ಎಂದು ನಾನು ಅವರ ಬಳಿ ಹೋದೆ ಎಂದು ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ) ಚಿತ್ರಗೀತೆಯ ಹಿಂದಿನ ಕಥೆಯನ್ನು ಬಿಚ್ಚಿಟ್ಟರು.


ಯುವಪ್ರೇಮಿಗಳ ಪ್ರೀತಿ-ಪ್ರೇಮ-ಮುನಿಸು-ತಲ್ಲಣಗಳ ಭಾವಕ್ಕೆ ತಕ್ಕಂತೆ ಗೀತೆಯ ಸಾಲುಗಳನ್ನು ಕೆ.ಕಲ್ಯಾಣ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ ಕೇಳುಗರನ್ನು ಮೋಡಿ ಮಾಡುವಂತಹ ಸಂಗೀತ ನೀಡಿದ್ದಾರೆ.
ಈ ಯುಗಳ ಹಾಡಿಗೆ ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ಧ್ವನಿ ನೀಡಿದ್ದಾರೆ. ಬಹಳ ದಿನಗಳ ನಂತರ ಈ ಥರದ ಶುಧ್ಧ ಸಾಹಿತ್ಯಕ್ಕೆ ಧ್ವನಿಯಾಗಿರುವದಕ್ಕೆ ಇಬ್ಬರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ನವೆಂಬರ ತಿಂಗಳ ಕೊನೆಯ ವಾರದಲ್ಲಿ “ಆಮೃತ ಅಪಾರ್ಟಮೇಂಟ್ಸ” ಸಿನೆಮಾ ಬಿಡುಗಡೆಯಾಗಲಿದ್ದು, ಚಿತ್ರ ತಂಡ ಪ್ರೇಕ್ಷಕರ ಮನಸ್ಸು ಗೆಲ್ಲುವ ಉತ್ಸಾಹದಲಿದ್ದಾರೆ.
ಧನ್ಯವಾದಗಳು
-ಗುರುರಾಜ ಕುಲಕರ್ಣಿ (ನಾಡಗೌಡ)
ನಿರ್ಮಾಪಕ-ನಿರ್ದೇಶಕ

Related posts

ನಮ್‌ ಟಾಕೀಸ್‌ ಎಫ್‌ ಸಿಎಲ್‌ -9 : ಟೂರ್ನಮೆಂಟ್‌ ದಿನಾಂಕ ಅನಾವರಣ ಮಾಡಿದ ಜೂ. ರೆಬೆಲ್‌ ಸ್ಟಾರ್‌

Kannada Beatz

ಗೋಲ್ಡನ್‌ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು ‘ಆಪಲ್ ಕಟ್’ ಚಿತ್ರದ ಟ್ರೇಲರ್

Kannada Beatz

ಮಂಗ್ಲಿ ಕಂಠಕ್ಕೆ ಹಾಡಿ ಕುಣಿದಕಿಟ್ಟಿ-ರಚ್ಚು-ರಾಗಿಣಿ ದ್ವಿವೇದಿ

Kannada Beatz

Leave a Comment

Share via
Copy link
Powered by Social Snap