Kannada Beatz
News

“ಅಬ್ಬಬ್ಬ” ಹಾಸ್ಯಪ್ರಿಯರಿಗೆ ಭರ್ಜರಿ ರಸದೌತಣ.

ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರ ಜುಲೈ ಒಂದರಂದು ತೆರೆಗೆ.

“ಆ ದಿನಗಳು” ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಎಂ.ಚೈತನ್ಯ ನಿರ್ದೇಶನದ ಸಂಪೂರ್ಣ ಹಾಸ್ಯಮಯ “ಅಬ್ಬಬ್ಬ” ಚಿತ್ರ ಇದೇ ಜುಲೈ 1 ರಂದು ಬಿಡುಗಡೆಯಾಗಲಿದೆ.

ಬೆಂಗಳೂರಿನಲ್ಲಿ ಮೀರಾಮಾರ್ ಎಂಬ ಜಾಹೀರಾತು ನಿರ್ಮಾಣ ಸಂಸ್ಥೆ ನಡೆಸುತ್ತಿರುವ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.‌ ಆನ್ ಆಗಸ್ಟೇನ್ ಸುಪ್ರಸಿದ್ದ ಮಲಯಾಳಂ ನಟಿ ಕೂಡ. ಸಾಕಷ್ಟು ಮಲೆಯಾಳಂ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇವರಿಬ್ಬರ ನಿರ್ಮಾಣದಲ್ಲಿ ಮೂಡಿಬಂದಿರುವ ಮೊದಲ ಚಿತ್ರ “ಅಬ್ಬಬ್ಬ”.

“ಫ್ಯಾಮಿಲಿ ಪ್ಯಾಕ್” ಜೋಡಿ ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಜಯ್ ರಾಜ್, ತಾಂಡವ್ ರಾಮ್, ಧನರಾಜ್ ಆಚಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಇದೇ ಆರರಂದು ಟ್ರೇಲರ್ ಬಿಡುಗಡೆಯಾಗಲಿದೆ. ಜುಲೈ ಒಂದರಂದು ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

ಮನೋಹರ್ ಜೋಶಿ ಅವರ ಮನಮೋಹಕ ಛಾಯಾಗ್ರಹಣ
ವಿರುವ ಈ ಚಿತ್ರಕ್ಕೆ ದೀಪಕ್ ಅಲೆಕ್ಸಾಂಡರ್ ಅವರ ಸುಮಧುರ ಸಂಗೀತವಿದೆ. ಹರಿದಾಸ್ ಕೆ.ಜಿ.ಎಫ್ ಈ ಚಿತ್ರದ ಸಂಕಲನಕಾರರು. ಕಲಾ ನಿರ್ದೇಶಕರು ವಿಶ್ವಾಸ್ ಕಷ್ಯಪ್.

ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಈಗಾಗಲೇ ಅನೇಕ ಜಾಹೀರಾತುಗಳಿಗೆ ಸಂಗೀತ ಸಂಯೋಜಿಸಿರುವ ದೀಪಕ್ ಅಲೆಕ್ಸಾಂಡರ್ ಅವರಿಗೆ ಇದು ಸಂಗೀತ ನಿರ್ದೇಶಕರಾಗಿ ಚೊಚ್ಚಲ ಚಿತ್ರ.

Related posts

ಚಮಕ್ ಜೋಡಿ ‘ಸಖತ್’ ಟೀಸರ್ ರಿಲೀಸ್…ಇದು ಸಿಂಪಲ್ ಸುನಿ ಡೈಲಾಗ್ ಸ್ಪೆಷಲ್!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಮೋಸ್ಟ್ ಅವೇಟೇಡ್ ಸಿನಿಮಾ ಸಖತ್. ಪೋಸ್ಟರ್ ಹಾಗೂ ಸಾಂಗ್ ಮೂಲಕವೇ ಹೊಸತನ ತೆರೆದಿಟ್ಟಿರೋ ಸಖತ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಗಣೇಶ್ ಸ್ಟೈಲೀಶ್ ಲುಕ್.. ಸುನಿ ಡೈಲಾಗ್ ಕಿಕ್.. ಜೂಡಾ ಸ್ಯಾಂಡಿ ಮ್ಯೂಸಿಕ್.. ಸಂತೋಷ್ ಕ್ಯಾಮೆರಾ ವರ್ಕ್.. ನಿಶ್ವಿಕಾ ನಾಯ್ಡು ಇನೋಸೆಂಟ್ ಆಕ್ಟಿಂಗ್.. ಟೋಟಲಿ ಟೀಸರ್ ಕಂಪ್ಲೀಟ್ ಎಂಟರ್ ಟ್ರೈನ್ ಮೆಂಟ್ ಪ್ಯಾಕ್ಡ್.
ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಗಣೇಶ್ ಅದ್ಭುತವಾಗಿ ನಟಿಸಿದ್ದು, ಸದಾ ಡಿಫರೆಂಟ್ ಡೈಲಾಗ್ ಕೊಡೋ ಸುನಿ ಡೈಲಾಗ್ಸ್ ಬಗ್ಗೆ ಹೇಳೋ ಆಗಿಲ್ಲ. ಸಖತ್ ಪಂಚಿಂಗ್ ಡೈಲಾಗ್ ನೋಡುಗರನ್ನು ಬಿದ್ದು ಬಿದ್ದು ನಗಿಸುವಂತಿದೆ. ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ ಸಖತ್ ವೈರಲ್ ಆಗ್ತಿರೋ ಸಖತ್ ಟೀಸರ್, 2021ರ ಬೆಸ್ಟ್ ಕಾಮಿಡಿ ಟೀಸರ್ ಆಗಿ ಅನ್ನೋ ಬ್ರ್ಯಾಂಡ್ ತನ್ನದಾಗಿಸಿಕೊಂಡಿದೆ.
ಸಿಂಪಲ್ ಸುನಿ ಓಂಕಾರ ಹಾಕಿರುವ ಸಖತ್ ಸಿನಿಮಾದಲ್ಲಿ ಮುಗುಳುನಗೆ ಹುಡ್ಗ ಗಣಿ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಗೆ ಜೋಡಿಯಾಗಿ ಬೊಗಸೆ ಕಣ್ಗಳ ಚೆಲುವೆ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ. ಇದೊಂದು ಕಾಮಿಡಿ ಕಂ ಕ್ರೈಮ್ ಥಿಲ್ಲರ್ ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾವನ್ನು ಎಣೆಯಲಾಗಿದೆ.
ಕೆ ವಿ ಎನ್ ಪ್ರೊಡಕ್ಷನ್ ಬ್ಯಾನರ್ ನಡಿ ತಯಾರಾಗಿರುವ ಸಖತ್ ಸಿನಿಮಾಕ್ಕೆ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್, ಶಾಂತ ಕುಮಾರ್ ಸಂಕಲನ, ಜ್ಯೂಡ ಸ್ಯಾಂಡಿ ಸಂಗೀತ ಸಿನಿಮಾಕ್ಕಿದೆ. ಈಗಾಗಲೇ ಸೆನ್ಸಾರ್ ಮುಗಿಸಿರುವ ಸಖತ್ ಸಿನಿಮಾ ನವೆಂಬರ್ 12ರಂದು ಥಿಯೇಟರ್ ಅಂಗಳ ಪ್ರವೇಶಿಸಲಿದೆ.

administrator

ಆಗಸ್ಟ್ 26ಕ್ಕೆ “ಶಿವ 143” ಚಿತ್ರ ಬಿಡುಗಡೆ.

Kannada Beatz

ಆಪರೇಷನ್ ಲಂಡನ್ ಕೆಫೆ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಮೇಘಾ ಶೆಟ್ಟಿ!

Kannada Beatz

Leave a Comment

Share via
Copy link
Powered by Social Snap