HomeNews’ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಕಂಬ್ಯಾಕ್..ಶೂಟಿಂಗ್ ಮುಗಿಸಿ ರಿಲೀಸ್ ಗೆ ಸಜ್ಜಾಗ್ತಿದೆ...

’ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಕಂಬ್ಯಾಕ್..ಶೂಟಿಂಗ್ ಮುಗಿಸಿ ರಿಲೀಸ್ ಗೆ ಸಜ್ಜಾಗ್ತಿದೆ ಸಿನಿಮಾ

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ.. ಕನಸಿನ ರಾಣಿ ಮಾಲಾಶ್ರೀ ಮತ್ತೆ ಸಿನಿಮಾ ಲೋಕಕ್ಕೆ ಕಂಬ್ಯಾಕ್ ಆಗ್ತಿದ್ದಾರೆ. ಪತಿ ಅಗಲಿಕೆ ನೋವಿನ ನಂತ್ರ ಒಂದಷ್ಟು ಗ್ಯಾಂಪ್ ತೆಗೆದುಕೊಂಡಿದ್ದ ಮಾಲಾಶ್ರೀ ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡಲಿದ್ದಾರೆ.

ಈ ಹಿಂದೆ ‘ಪುಟಾಣಿ ಸಫಾರಿ’ ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ‌ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಡೀ ತಂಡ ಭಾಗಿಯಾಗಿ ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.

ಮಾಲಾಶ್ರೀ ಮಾತನಾಡಿ, ನನಗೆ ತುಂಬಾ ಗ್ಯಾಂಪ್ ಅನಿಸುತ್ತಿಲ್ಲ, ತುಂಬಾ ಖುಷಿಯಾಗ್ತಿದೆ. ಕಥೆಯಲ್ಲಿ ಹೊಸತನವಿದೆ. ಹೊಸ ತಂಡ ನನಗೆ ಹೊಸ ಅನುಭವ, ಚಾಲೆಂಜ್ ಇರುತ್ತದೆ. ನಾನು ಡಾಕ್ಟರ್ ಆಗಿ ಎರಡನೇ ಸಿನಿಮಾವಿದು ಎಂದು ಹೇಳಿದರು.
ತುಂಬಾ ಕಾರಣಕ್ಕೆ ಈ ಸಿನಿಮಾ ನನಗೆ ವಿಶೇಷವಾಗಿದೆ. ಮಾಲಾಶ್ರೀ ಅವರ ಜೊತೆ ಕೆಲಸ ಮಾಡ್ತಿರೋದು ಖುಷಿ ಕೊಟ್ಟಿದೆ. ಇದೊಂದು ಕ್ರೈಮ್ ಥ್ರಿಲ್ಲರ್. ಕೊರೋನಾ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾನು ಡಾಕ್ಟರ್ ಪಾತ್ರ ಮಾಡಿದ್ದೇನೆ ಎಂದು ರಂಜನಿ ರಾಘವನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ದೇಶಕ ರವೀಂದ್ರ ವಂಶಿ, ನೈಟ್ ಕರ್ಫ್ಯೂ ವಿಶೇಷ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಅಂಶ ಮುಖ್ಯ. ಕಥೆ ಚಿತ್ರ-ಕಥೆ, ಸಂಭಾಷಣೆ. ಈ ಸಿನಿಮಾದಲ್ಲಿ, ವಿಶೇಷ ಕಥೆ, ನಿರೂಪಣಾ ಶೈಲಿ ಇದ್ದು, ಸಿನಿಮಾದ ತಾರಾಬಳಗ ತುಂಬಾ ಚೆನ್ನಾಗಿದೆ, ಟೆಕ್ನಿಕಲ್ ಡಿಪಾರ್ಟ್ ಚೆನ್ನಾಗಿದೆ. ನಿರ್ಮಾಣ ಎಲ್ಲದಕ್ಕೂ ಸಾಥ್ ಕೊಟ್ಟಿದ್ದಾರೆ ಎಂದರು.

ಇದೊಂದು ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ಮೆಡಿಕಲ್ ಮಾಫಿಯಾ ಕುರಿತಾದ ಕಥೆ ಒಳಗೊಂಡಿದ್ದು, ಪ್ರಮೋದ್ ಶೆಟ್ಟಿ, ಬಲರಾಜ್ವಾಡಿ, ವರ್ಧನ್ ,ಅಶ್ವಿನ್, ರಂಗಾಯಣ ರಘು ಸಾಧು ಕೋಕಿಲ, ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ.ಎಸ್ ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಕ್ಯಾಮೆರಾ ವರ್ಕ್, ಜಾಗ್ವಾರ್ ಸಣ್ಣಪ್ಪ ಸಾಹಸ ಸಿನಿಮಾಕ್ಕಿದೆ.

Must Read

spot_img
Share via
Copy link
Powered by Social Snap