ಸ್ಯಾಂಡಲ್ ವುಡ್ ನಲ್ಲಿ ಶಶಾಂಕ್ ಸಿನಿಮಾ ನಿರ್ದೇಶನ ಮಾಡ್ತಾ ಇದ್ದಾರೆ ಎಂದಾಗ ಒಂದಷ್ಟು ನಿರೀಕ್ಷೆಗಳು ಸಾಮಾನ್ಯವಾಗಿಯೇ ಹೆಚ್ಚಾಗುತ್ತದೆ. ಯಾಕಂದ್ರೆ ಕೌಟುಂಬಿಕ ಸಿನಿಮಾಗಳಿಗೆ ಹೇಳಿ ಮಾಡಿಸಿದ ಕಥೆಗಳನ್ನೇ ಶಶಾಂಕ್ ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯಕ್ಕೆ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ಈಗಾಗಲೇ ರಿಲೀಸ್ ಆಗಿರುವ ಸಿನಿಮಾ, ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ.
ಮೊದಲಿಗೆ ನಾಯಕ ನಟ ರಾಮ್ ತಲೆಗೆ ಜೋರಾಗಿ ಬೀಳುವ ಬಿಯರ್ ಬಾಟೆಲ್ ನಿಂದಾನೇ ಕಥೆ ಶುರುವಾಗುತ್ತೆ. ಸ್ನೇಹಿತನಂತೆ ಇರುವ ಅತ್ತೆಯ ಮಗ ಸದಾ ರಾಮ್ ಗೆ ಕಾವಲಾಗಿ ಇರುತ್ತಾನೆ. ನಾಗಭೂಷಣ್ ಮದುವೆಯಾಗುವ ಹುಡುಗಿಯ ತಂದೆ ಇವನು ಒಬ್ಬ ಗಂಡಸಾ ಎಂದು ಕೇಳಿದಾಗ, ತನ್ನ ಭಾವ ಹೇಗೆಲ್ಲ ಮೆರೆದ ಎಂಬ ಕಥೆ ಶುರುವಾಗುತ್ತೆ. ಹೆಣ್ಣು ಮಕ್ಕಳು ಯಾವಾಗಲೂ ತನ್ನ ಕಾಲ ಕೆಳಗೆ ಇರಬೇಕು ಎಂಬ ನೀತಿಯನ್ನೇ ರಾಮ್ ಫಾಲೋ ಮಾಡಿಕೊಂಡು ಬಂದಿರುತ್ತಾನೆ.
ಎಷ್ಟೇ ಖಡಕ್ ಆಗಿ ಇದ್ದರು. ಕಾಲೇಜು ದಿನಗಳಲ್ಲಿ ರಾಮ್ ಗೆ ಪ್ರೀತಿ ಆಗುತ್ತೆ. ಆ ಪ್ರೀತಿಯಿಂದ ಬದಲಾಗ್ತಾನೇನೋ ಅಂದ್ಕೊಂಡ್ರೆ ಆ ಪ್ರೀತಿಯೇ ಬದಲಾಗುತ್ತೆ. ದಿನಕಳೆದಂತೆ ಆಗುವ ನೋವುಗಳು ಸಂಬಂಧಗಳ ಅರ್ಥವನ್ನು ನಟನಿಗೆ ತಿಳಿಸುತ್ತೆ. ಗಂಡು, ಹೆಣ್ಣು ಇಬ್ಬರಿಗೂ ಒಂದೊಳ್ಳೆ ಮೆಸೇಜ್ ಇದೆ. ಹೀಗಾಗಿ ಈ ಸಿನಿಮಾ ಮಿಸ್ ಮಾಡಿಕೊಳ್ಳುವ ಹಾಗೆಯೇ ಇಲ್ಲ.
ಡಾರ್ಲಿಂಗ್ ಕೃಷ್ಣ ಮತ್ತು ಬೃಂದಾ ಆಚಾರ್ಯ ಜೋಡಿ ಫಸ್ಟ್ ಆಫ್ ನಲ್ಲಿ ಸೆಳೆಯುತ್ತದೆ. ಸೆಕೆಂಡ್ ಆಫ್ ನಲ್ಲಿ ಕಥೆ ಬೇರೆಯದ್ದಾಗಿಯೇ ಸಾಗುತ್ತೆ. 90 ಹಾಕು ಕಿಟ್ಟಪ್ಪ ಅಂತ ಬರುವ ಮಿಲನಾ ನಟನ ಬಾಳಿಗೆ ಹೇಗೆ ಬೆಳಕಾಗುತ್ತಾರೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕಿದೆ. ಸುಧಾ ಬೆಳವಾಡಿ ಅವರ ಇನೋಸೆಂಟ್ ಅಭಿನಯ ಅಂತು ಎಲ್ಲರ ಮನಸ್ಸಿಗೆ ನಾಟುತ್ತೆ. ಇನ್ನು ರಂಗಾಯಣ ರಘು ಅವರ ಖಡಕ್, ರಗಡ್ ಡೈಲಾಗ್ ಗಳು ಮನರಂಜನೆ ನೀಡುತ್ತವೆ. ನಾಗಭೂಷಣ್ ಇಡೀ ಸಿನಿಮಾದಲ್ಲಿ ಎಲ್ಲರನ್ನು ಮನರಂಜಿಸಿದೆ.