Kannada Beatz
News

ARM’ ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ

ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್‌ ನಾಯಕನಾಗಿ ನಟಿಸಿರುವ ARM ಸಿನಿಮಾ ಇಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.
ಇದೇ ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ್ದಾರೆ. ಟ್ರೇಲರ್‌ ಮೂಲಕ ನಿರೀಕ್ಷೆ ಮಟ್ಟ ಹೆಚ್ಚಿಸಿರುವ ಎಆರ್‌ಎಂ ಸಿನಿಮಾ,

ಇದೀಗ 3D ಮೂಲಕ ಚಿತ್ರಮಂದಿರದತ್ತ ಆಗಮಿಸುತ್ತಿದೆ. ನಟ ಟೊವಿನೋ ಥಾಮಸ್‌ ಎರಡ್ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ಎಆರ್‌ಎಂ ಸಿನಿಮಾದಲ್ಲಿದ್ದಾರೆ.

ಒಂದು ಬಲವಾದ ಕಥೆಯೊಂದಿಗೆ ದೃಶ್ಯ ಚಮತ್ಕಾರವಿರಲಿದೆ ಎಂಬ ಭರವಸೆ ನೀಡಿದೆ.ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು, ಟ್ರೇಲರ್​ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ‌. ಇಂದು ಬಿಡುಗಡೆಯಾದ ಎಲ್ಲ
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ.

Related posts

ಒಂದು ಸರಳ ಪ್ರೇಮಕಥೆ ಮೊದಲ ಹಾಡು ರಿಲೀಸ್..ನೀನ್ಯಾರೆಲೆ ಎಂದು ಗುನುಗಿದ ವಿನಯ್ ರಾಜ್ ಕುಮಾರ್

Kannada Beatz

ಉತ್ತರ ಕರ್ನಾಟಕ ಪ್ರತಿಭೆಗಳ ಹೆಬ್ಬುಲಿ ಕಟ್ ಟ್ರೇಲರ್ ರಿಲೀಸ್..ಸಿನಿಮಾ ಪ್ರೆಸೆಂಟ್ ಮಾಡುತ್ತಿರುವ ಸತೀಶ್ ನೀನಾಸಂ

Kannada Beatz

ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ಬರಲಿದೆ ಲೂಸ್ ಮಾದ ಯೋಗೇಶ್ ಅಭಿನಯದ ಚಿತ್ರ..

administrator

Leave a Comment

Share via
Copy link
Powered by Social Snap