ನಟಿ ಸಮಂತಾ ರುತ್ ಪ್ರಭು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡು ಸ್ಟಾರ್ ನಟಿ ಆದವರು. ಚಿಕ್ಕ ಪುಟ್ಟ ಚಿತ್ರಗಳಲ್ಲಿ ನಾಯಕಿಯಾಗಿ ಕೆರಿಯರ್ ಆರಂಭಿಸಿದ ಸಮಂತಾ ರುತ್ ಪ್ರಭು ಚಿತ್ರದಿಂದ ಚಿತ್ರಕ್ಕೆ ಹೆಸರನ್ನು ಮಾಡುತ್ತಾ ಸ್ಟಾರ್ ನಟರುಗಳ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾದರು. ತೆಲುಗಿನ ಬಹುತೇಕ ಎಲ್ಲ ಸ್ಟಾರ್ ನಟರುಗಳ ಜತೆ ತೆರೆ ಹಂಚಿಕೊಂಡಿರುವ ಸಮಂತಾ ತಮಿಳು ಚಿತ್ರಗಳಲ್ಲಿಯೂ ಸಹ ಸ್ಟಾರ್ ನಟರ ಜೊತೆ ಅಭಿನಯ ಮಾಡಿದ್ದಾರೆ.
ಇನ್ನು ಸಮಂತಾ ಅವರು ಚಿತ್ರ ನಟ ನಾಗಚೈತನ್ಯ ಅವರ ಜೊತೆ ಲವ್ ಮ್ಯಾರೇಜ್ ಆದದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಹೌದು ಸಮಂತಾ ಅವರು ನಾಗ ಚೈತನ್ಯ ಅವರ ಜೊತೆ ಮದುವೆ ಮಾಡಿಕೊಂಡು ಅಕ್ಕಿನೇನಿ ಮನೆಯ ಸೊಸೆ ಆದರು. ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಕ್ಸಸ್ ಮತ್ತು ಸ್ಟಾರ್ ನಟನ ಜೊತೆ ವಿವಾಹ ಈ ಎಲ್ಲವೂ ಸಹ ಸಮಂತಾ ಅವರ ಬಾಳಲ್ಲಿ ಸಂತಸವನ್ನು ತಂದಿತ್ತು.
ಆದರೆ ಇದೀಗ ಮದುವೆ ಮತ್ತು ಸಿನಿ ಜರ್ನಿಯ ವಿಚಾರವಾಗಿ ಸಮಂತಾ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದ್ದು , ಮದುವೆ ಆದ ನಂತರ ಸಮಂತಾ ಅವರಿಗೆ ಸಿನಿಮಾ ಆಫರ್ಗಳು ಕಡಿಮೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು ಮದುವೆಗೂ ಮುನ್ನ ಸಮಂತಾ ಅವರಿಗೆ ಬರುತ್ತಿದ್ದ ಸಿನಿಮಾ ಆಫರ್ ಗಳಿಗೆ ಮದುವೆಯಾದ ನಂತರ ಬರುತ್ತಿರುವ ಸಿನಿಮಾ ಆಫರ್ ಗಳಿಗೆ ತುಂಬಾ ವ್ಯತ್ಯಾಸವಿದೆ. ಮದುವೆಗೂ ಮುನ್ನ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಸಮಂತಾ ಮದುವೆ ಆದ ನಂತರ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಮದುವೆಯಾದ ನಂತರ ಯಾವ ಸ್ಟಾರ್ ನಟರ ಚಿತ್ರಗಳಲ್ಲಿ ಸಹ ಸಮಂತ ಅವರಿಗೆ ಅಭಿನಯಿಸುವ ಆಫರ್ ಬಂದೇ ಇಲ್ಲ. ಹೀಗಾಗಿ ಸಮಂತಾ ಅವರು ಮದುವೆಯಾದ ನಂತರ ಸಿನಿ ಜೀವನ ಕುಂಟುತ್ತಾ ಸಾಗಿದ್ದು ಮದುವೆಯಾಗಿ ಸಮಂತ ಅವರು ತಪ್ಪು ಮಾಡಿಬಿಟ್ಟರಾ ಎಂಬ ಮಾತುಗಳು ಕೇಳಿ ಬರುತ್ತಿವೆ.