HomeSandalwoodಸಲಗ ಚಿತ್ರತಂಡದ ಟ್ರೋಲ್ ಪೇಜ್ ಸಭೆ..! ಸುದ್ದಿ ಓದಿ.

ಸಲಗ ಚಿತ್ರತಂಡದ ಟ್ರೋಲ್ ಪೇಜ್ ಸಭೆ..! ಸುದ್ದಿ ಓದಿ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳ ಪ್ರಮೋಷನ್ ಅನ್ನು ಟ್ರೋಲ್ ಪೇಜ್ ಮುಖಾಂತರ ಅತಿ ಹೆಚ್ಚಾಗಿ ಮಾಡಲಾಗುತ್ತಿದೆ. ಹೌದು ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ಟ್ರೋಲ್ ಪೇಜ್ಗಳು ಜನರಿಗೆ ಮನರಂಜನೆಯನ್ನು ನೀಡುವುದರ ಜೊತೆಗೆ ಚಲನಚಿತ್ರಗಳ ಪ್ರಮೋಷನ್ ಅನ್ನು ಸಹ ಮಾಡುತ್ತಿವೆ.

ಕನ್ನಡದಲ್ಲಿಯೂ ಸಹ ಹಲವಾರು ಟ್ರೋಲ್ ಪೇಜ್ಗಳು ಈಗಾಗಲೇ ಇದ್ದು ಅವರು ಸಹ ಕನ್ನಡ ಚಿತ್ರಗಳ ಪ್ರಮೋಷನ್ ಅನ್ನು ಮಾಡುವುದರ ಮೂಲಕ ಕನ್ನಡ ಚಲನ ಚಿತ್ರರಂಗದ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಚಿತ್ರರಂಗದವರು ಸಹ ಟ್ರೋಲ್ ಪೇಜ್ ಗಳೆಂದರೆ ಒಂದೊಳ್ಳೆ ಗೌರವವನ್ನು ಸಹ ನೀಡುತ್ತಾರೆ.

ಇನ್ನು ಈ ವಿಷಯದ ಕುರಿತಾಗಿ ನನ್ನ ದುನಿಯಾ ವಿಜಿ ಅವರು ಟ್ರೋಲ್ ಪೇಜ್ ಅಡ್ಮಿನ್ ಗಳನ್ನು ತಮ್ಮ ಮನೆಗೆ ಕರೆಸಿ , ಅವರ ಜೊತೆ ಕೆಲ ಕಾಲ ಒಂದಷ್ಟು ವಿಚಾರಗಳನ್ನು ಚರ್ಚಿಸಿ ತದನಂತರ ಊಟೋಪಚಾರ ಮಾಡಿ ಕಳುಹಿಸಿದ್ದಾರೆ. ಹೌದು ಟ್ರೋಲ್ ಪೇಜ್ ಅಡ್ಮಿನ್ ಗಳನ್ನು ಮನೆಗೆ ಕರೆಯಿಸಿಕೊಂಡಿದ್ದ ದುನಿಯಾ ವಿಜಯ್ ಅವರು ಎಲ್ಲಾ ಅಡ್ಮಿನ್ ಗಳ ಜೊತೆ ಚರ್ಚಿಸಿ ಸಭೆ ನಡೆಸಿದ್ದಾರೆ. ದುನಿಯಾ ವಿಜಯ್ ಮತ್ತು ಟ್ರೋಲ್ ಪೇಜ್ ಸಭೆಯನ್ನು ಕನ್ನಡದ ಟ್ರೋಲ್ ಪೇಜ್ ಆದ ಟ್ರೋಲ್ ಹೈದ ಆಯೋಜನೆ ಮಾಡಿತ್ತು.

Must Read

spot_img
Share via
Copy link
Powered by Social Snap