Kannada Beatz
Sandalwood

ಅರ್ಧಕ್ಕೆ ನಿಂತಿದ್ದ ಹೊಸಬರ ಚಿತ್ರಕ್ಕೆ ಮರುಜೀವ ಕೊಟ್ಟ ಪವರ್ ಸ್ಟಾರ್..!

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಹಲವಾರು ಅನಾಥಾಶ್ರಮಗಳು ಮತ್ತು ವಿದ್ಯಾರ್ಥಿಗಳಿಗೆ ಈಗಾಗಲೇ ಸಹಾಯ ಮಾಡಿರುವ ಪುನೀತ್ ರಾಜ್ಕುಮಾರ್ ಅವರು ಯಾರೂ ದಿಕ್ಕಿಲ್ಲದ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸದಾ ಮುಂದೆ ಬರುತ್ತಾರೆ.

ಸಿನಿಮಾ ಮಾಡಬೇಕೆಂದು ಹಾತೊರೆಯುತ್ತಿರುವ ನವ ಯುವಕ ಯುವತಿಯರ ತಂಡ ಶುರು ಮಾಡಿದ್ದ ಚಿತ್ರವೊಂದು ನಿರ್ಮಾಪಕರ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತು ಹೋಗಿತ್ತು. ಹೌದು ನವ ನಿರ್ದೇಶಕ ರಘು ಸಮರ್ಥ್ ಅವರು ನಿರ್ದೇಶಿಸಲು ರೆಡಿ ಆಗಿದ್ದ ವಿಜಯದಶಮಿ ಚಿತ್ರ ಎಲ್ಲ ಅಂದುಕೊಂಡಂತೆ ಚಿತ್ರೀಕರಣ ಪ್ರಾರಂಭಿಸಿತ್ತು. ಆದರೆ ಏಕೋ ಏನೋ ಆ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕರು ಚಿತ್ರ ನಿರ್ಮಾಣ ಮುಂದುವರಿಸಲು ಮುಂದೆ ಬರಲಿಲ್ಲ.

ಹೀಗಾಗಿ ಆ ಚಿತ್ರತಂಡ ಚಿತ್ರೀಕರಣ ಮುಂದುವರಿಸಲು ಆಗದೆ ಸೈಲೆಂಟ್ ಆಗಿ ಬಿಟ್ಟಿತ್ತು. ಒಳ್ಳೆ ಸ್ಟೋರಿ ಇದ್ದರೂ ನಿರ್ಮಿಸಲು ಯಾವ ನಿರ್ಮಾಪಕರು ಇಲ್ಲ ಇದ್ದವರು ಕೈಕೊಟ್ಟು ಹೋದರು ಎಂದು ನಿರಾಸೆಯಲ್ಲಿದ್ದ ಚಿತ್ರ ತಂಡಕ್ಕೆ ಆಸರೆಯಾಗಿದ್ದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹೌದು ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲು ಅಪ್ಪು ರೆಡಿಯಾಗಿದ್ದಾರೆ. ಈ ಮೂಲಕ ನಿಂತುಹೋಗಿದ್ದ ಚಿತ್ರಕ್ಕೆ ಮರುಜೀವ ವನ್ನು ಪುನೀತ್ ರಾಜ್ಕುಮಾರ್ ಅವರು ತುಂಬಿದ್ದಾರೆ.

Related posts

ರೆಕಾರ್ಡ್ ಬ್ರೇಕ್ ಆಯ್ತಾ? ಯಜಮಾನ ಮೊದಲ ದಿನ ಗಳಿಸಿದ್ದು ಎಷ್ಟು ಗೊತ್ತಾ? ಈ ಸುದ್ದಿ ನೋಡಿ

administrator

ನಟ ಸಾರ್ವಭೌಮ : ಒಂದು ಶೋನ ಎಲ್ಲಾ ಟಿಕೆಟ್ಸ್ ಗಳನ್ನು ಖರೀದಿಸಿದ ಅಭಿಮಾನಿ..!

administrator

ಪ್ರಿಯಾ ವಾರಿಯರ್ ಜೊತೆ ಕುಮಾರ್ ಬಂಗಾರಪ್ಪ ಮಗನ ರೊಮ್ಯಾನ್ಸ್..! ಸುದ್ದಿ ನೋಡಿ

administrator

Leave a Comment

Share via
Copy link
Powered by Social Snap