ಕೆಲ ವರ್ಷಗಳ ಗ್ಯಾಪ್ನ ನಂತರ ಇಂಡಸ್ಟ್ರಿಗೆ ರೀ ಎಂಟ್ರಿ ಕೊಟ್ಟಿರುವ ಲೂಸ್ ಮಾದ ಯೋಗಿ ಅವರ ಚಿತ್ರ ಎಂದರೆ ಅದು ಲಂಬೋದರ. ಹೌದು ಲೂಸ್ ಮಾದ ಯೋಗಿ ಅವರು ತಮ್ಮ ಫ್ಲೇವರ್ ನ ಚಿತ್ರ ಮಾಡಿ ಅದೆಷ್ಟೋ ದಿನಗಳೇ ಕಳೆದಿದ್ದವು. ಇದೀಗ ಲಂಬೋದರ ಚಿತ್ರದ ಮೂಲಕ ಲೂಸ್ ಮಾದ ಯೋಗಿ ಅವರು ತಮ್ಮ ಫ್ಲೇವರ್ ನ ಚಿತ್ರವನ್ನು ಮತ್ತೆ ಜನರಿಗೆ ತಲುಪಿಸಿದ್ದಾರೆ.
ಬಸವನಗುಡಿಯ ಲಂಬೋದರ ಯೋಗಿ ಊರು ಸುತ್ತುಕೊಂಡು, ನೈಟ್ ಆದ್ರೆ ಎಣ್ಣೆ ಹೊಡ್ಕೊಂಡು, ಫ್ರೆಂಡ್ಸ್ ಜೊತೆ ಕಾಲ ಕಳ್ಕೊಂಡು ಟೈಮ್ ಪಾಸ್ ಮಾಡೋದೇ ಕಾಯಕ. ಇಂಥ ಯೋಗಿಗೆ ಹುಡುಗಿಯೊಬ್ಬಳು ಸಿಗ್ತಾಳೆ ಆಕೆ ಸಿಕ್ಕ ಮೇಲೆ ಯೋಗಿ ಲೈಫ್ ನಲ್ಲಿ ಏನೇನಾಗುತ್ತೆ ಏನೆಲ್ಲಾ ಚೇಂಜರ್ಸ್ ಆಗುತ್ತೆ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ.
ಇನ್ನು ಲಂಬೋದರ ಚಿತ್ರ ನೋಡಿದವರಿಗೆ ಯೋಗಿ ಅವರು ಈ ಹಿಂದೆ ಅಭಿನಯಿಸಿದ್ದ ಬ್ಲಾಕ್ ಬಸ್ಟರ್ ಚಿತ್ರ ಸಿದ್ಲಿಂಗು ನೆನಪಾಗದೆ ಇರಲಾರದು. ಸಿದ್ಲಿಂಗು ಚಿತ್ರದ ರೀತಿಯೇ ಈ ಚಿತ್ರವೂ ಸಹ ಸೂಪರ್ ಕಥೆಯನ್ನು ಹೊಂದಿದ್ದು ಮನೆಮಂದಿಯೆಲ್ಲಾ ಚಿತ್ರಮಂದಿರಕ್ಕೆ ತೆರಳಿ ಕುಳಿತು ನೋಡಬಹುದಾದ ಒಂದು ಉತ್ತಮ ಚಿತ್ರ.
ಇನ್ನು ಲಂಬೋದರ ಚಿತ್ರ ಕ್ವಾಲಿಟಿ ಯಲ್ಲೂ ಸಹ ಉತ್ತಮವಾಗಿದ್ದು ಕ್ರಿಯೇಟಿವ್ ಟೆಕ್ನಿಕಲ್ ಟೀಮ್ ಸಿದ್ಧಪಡಿಸಿರುವ ಸೂಪರ್ ಚಿತ್ರ. ಇಷ್ಟು ಪ್ಲಸ್ ಪಾಯಿಂಟ್ಗಳನ್ನು ಹೊಂದಿರುವ ಲಂಬೋದರ ಚಿತ್ರಕ್ಕೆ ಕರ್ನಾಟಕದಲ್ಲಿಯೇ ಥಿಯೇಟರ್ ಸಿಗದೇ ಸಮಸ್ಯೆ ಉಂಟಾಗಿರುವುದು ವಿಷಾದನೀಯ. ಹೌದು ತೆಲುಗು ತಮಿಳು ಭಾಷೆಯ ಅನೇಕ ಚಿತ್ರಗಳು ಈ ವಾರ ಬಿಡುಗಡೆಯಾಗಿದ್ದು ನಮ್ಮ ನೆಲದಲ್ಲೇ ಕನ್ನಡ ಚಿತ್ರಕ್ಕೆ ಕಡಿಮೆ ಚಿತ್ರಮಂದಿರಗಳು ಸಿಕ್ಕಿವೆ. ಸಿಕ್ಕಿರುವ ಎಲ್ಲ ಚಿತ್ರಮಂದಿರಗಳಲ್ಲೂ ಲಂಬೋದರ ಕಮಾಲ್ ಮಾಡುತ್ತಿದ್ದು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದಾನೆ. ಇಂಥ ಒಂದೊಳ್ಳೆ ಸಿನಿಮಾ ಮಿಸ್ ಮಾಡಿಕೊಳ್ಳದೇ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ತೆರಳಿ ತಪ್ಪದೇ ವೀಕ್ಷಿಸಿ.
ರೇಟಿಂಗ್ : 3.5/5