Kannada Beatz
News

‘ಧಮ್ಕಿ’ ಸಿನಿಮಾ ಮೂಲಕ ಕನ್ನಡಕ್ಕೆ ಬರ್ತಿದ್ದಾರೆ ತೆಲುಗಿನ ಪ್ರತಿಭಾನ್ವಿತ ನಟ ವಿಶ್ವಕ್ ಸೇನ್..ದೀಪಾವಳಿಗೆ ಚಿತ್ರದ ಫಸ್ಟ್ ಲುಕ್ ರಿಲೀಸ್

ತೆಲುಗು ಚಿತ್ರರಂಗದ ಯಂಗ್ ಅಂಡ್ ಪ್ರಾಮಿಸಿಂಗ್ ಹೀರೋ ವಿಶ್ವಕ್ ಸೇನ್ ಫಲಕ್ನುಮಾ ದಾಸ್ ಸಿನಿಮಾ ಮೂಲಕ ತಾವೊಬ್ಬ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದು ಗೆದ್ದಿರುವ ವಿಶ್ವಕ್ ಸೇನ್ ಇದೀಗ ಧಮ್ಕಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರವಣಿಗೆ ಹೊರಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿರುವ ಅವರು ನಿರ್ದೇಶಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನ್ಮಯೆ ಕ್ರಿಯೇಷನ್ಸ್ ಮತ್ತು ವಿಶ್ವಕ್ ಸೇನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕರಾಟೆ ರಾಜು ನಿರ್ಮಾಣ ಮಾಡ್ತಿರುವ ಧಮ್ಕಿ ಚಿತ್ರಕ್ಕೆ ಪ್ರಸನ್ನ ಕುಮಾರ್ ಬೆಜವಾಡ ಕಥೆ ಮತ್ತು ಸಂಭಾಷಣೆ ಬರೆದಿದ್ದು, ವಿಶ್ವಕ್ ಸೇನ್ ಗೆ ಜೋಡಿಯಾಗಿ ನಿವೇತಾ ಪೇತುರಾಜ್ ನಟಿಸುತ್ತಿದ್ದಾರೆ.

ಧಮ್ಕಿ ರೋಮ್ಯಾಂಟಿಕ್ ಕಾಮಿಡಿ, ಆಕ್ಷನ್ ಥ್ರಿಲ್ಲರ್ ಕಂಟೆಂಟ್ ಒಳಗೊಂಡಿದ್ದು, ಸಂಪೂರ್ಣ ಮನರಂಜನೆ ಜೊತೆಗೆ ಪಕ್ಕ ಆಕ್ಷನ್ ಪ್ರೇಮಿಗಳಿಗೆ ಸಿನಿಮಾ ಥ್ರಿಲ್ ನೀಡಲಿದೆ. ಈಗಾಗಲೇ 95ರಷ್ಟು ಶೂಟಿಂಗ್ ಮುಗಿಸಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನೂ ಈ ವಾರದಲ್ಲಿ ಮುಗಿಸಲು ಯೋಜನೆ ಹಾಕಿಕೊಂಡಿದೆ. ಹೈದ್ರಾಬಾದ್ ಸಾರಥಿ ಸ್ಟುಡಿಯೋದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲು ಅದ್ಧೂರಿ ಸೆಟ್ ಹಾಕಿದೆ. ಆದಷ್ಟು ಬೇಗ ಉಳಿದ ಶೂಟಿಂಗ್ ಮುಗಿಸಿ ಬೆಳಗಿನ ಹಬ್ಬ ದೀಪಾವಳಿಗೆ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಮುನ್ನುಡಿ ಬರೆಯಲಿದೆ.ರಾವ್ ರಮೇಶ್, ಹೈಪರ್ ಆದಿ, ರೋಹಿಣಿ ಮತ್ತು ಪೃಥ್ವಿರಾಜ್ ಸೇರಿದಂತೆ ಇತರ ತಾರಾಗಣ ಚಿತ್ರದಲ್ಲಿ. ದಿನೇಶ್ ಕೆ ಬಾಬು ಛಾಯಾಗ್ರಹಣ, ಲಿಯಾನ್ ಜೇಮ್ಸ್ ಸಂಗೀತ ಮತ್ತು ಅನ್ವರ್ ಅಲಿ ಸಂಕಲನ ಚಿತ್ರಕ್ಕಿದೆ..

ತಾಂತ್ರಿಕ ಸಿಬ್ಬಂದಿ:
ನಿರ್ದೇಶಕ: ವಿಶ್ವಕ್ ಸೇನ್
ನಿರ್ಮಾಪಕ: ಕರಾಟೆ ರಾಜು
ಬ್ಯಾನರ್: ವನ್ಮಯೆ ಕ್ರಿಯೇಷನ್ಸ್, ವಿಶ್ವಕ್ ಸೇನ್ ಸಿನಿಮಾಸ್
ಕಥೆ, ಸಂಭಾಷಣೆ: ಪ್ರಸನ್ನ ಕುಮಾರ್ ಬೆಜವಾಡ
ಛಾಯಾಗ್ರಾಹಣ: ದಿನೇಶ್ ಕೆ ಬಾಬು
ಸಂಗೀತ: ಲಿಯಾನ್ ಜೇಮ್ಸ್
ಸಂಕಲನ: ಅನ್ವರ್ ಅಲಿ
ಕಲಾ ನಿರ್ದೇಶಕ: ಎ.ರಾಮಾಂಜನೇಯುಲು
ಪತ್ರಿಕಾ ಸಂಪರ್ಕ: ಹರೀಶ್ ಅರಸು

Related posts

ಜೀಬ್ರಾಗೆ ‘ಭೀಮ’ ಬೆಂಬಲ..ಡಾಲಿ ಧನಂಜಯ್-ಸತ್ಯದೇವ್ ಸಿನಿಮಾಗೆ ದುನಿಯಾ ವಿಜಯ್ ಕುಮಾರ್ ಸಾಥ್

Kannada Beatz

ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು

Kannada Beatz

ತೋವಿನೋ ಥಾಮಸ್ ನಟನೆಯ ‘ಐಡೆಂಟಿಟಿ’ ಚಿತ್ರದ ಟೀಸರ್ ಬಿಡುಗಡೆ!

administrator

Leave a Comment

Share via
Copy link
Powered by Social Snap