Kannada Beatz
News

” ಟ್ರೇಲರ್ ಮೂಲಕ ಗಮನ ಸೆಳೆದಿರುವ “ಚೌಕಾಬಾರ” ಚಿತ್ರ ಮಾರ್ಚ್ ಹತ್ತರಂದು ತೆರೆಗೆ “

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಲವು ಗಣ್ಯರು ಭಾಗಿ

.ನವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ “ಚೌಕಾಬಾರ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಖ್ಯಾತ ಸಾಹಿತಿಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ.ಆರ್ ಲಕ್ಷ್ಮಣರಾವ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಭಾ.ಮ.ಹರೀಶ್, ನಟ ಸುಂದರರಾಜ್, ಲಹರಿ ವೇಲು, ರಘು ಭಟ್, ನಿರ್ಮಾಪಕ ಸಂಜಯ್ ಗೌಡ , ಸಚಿವ ಆರ್ ಅಶೋಕ್ ಪುತ್ರ ಶರತ್, ಉದ್ಯಮಿ ಉಮೇಶ್ ಕುಮಾರ್‌, ಸಂಜಯ್ ಸೂರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಕ್ರಮ್ ಸೂರಿ ನನಗೆ “ಚಿನ್ನಾರಿ‌ಮುತ್ತ” ಚಿತ್ರದ ಸಮಯದಿಂ ದಲೂ ಪರಿಚಯ. ಸಾಹಿತ್ಯದ ಬಗ್ಗೆ ವಿಶೇಷ ಕಾಳಜಿಯಿರುವ ವಿಕ್ರಮ್ ಸೂರಿ – ನಮಿತಾರಾವ್ ದಂಪತಿ ನನ್ನ ಹತ್ತಿರ ಈ ಚಿತ್ರಕ್ಕೆ ಹಾಡೊಂದು ಬರೆಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂದರು ಹಿರಿಯ ಸಾಹಿತಿ ಹೆಚ್ ಎಸ್ ವೆಂಕಟೇಶ್ ಮೂರ್ತಿ.

ನಾನು ಹಾಗೂ ಹೆಚ್ ಎಸ್ ವಿ ಇಬ್ಬರು ಈ ಚಿತ್ರಕ್ಕೆ ಹಾಡು ಬರೆದಿರುವುದು ಖುಷಿಯಾಗಿದೆ. ನಮ್ಮ ಹಾಡಿಗೆ ಅಶ್ವಿನ್ ಕುಮಾರ್ ಉತ್ತಮವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಹಾರೈಸಿದರು.

ಭಾ.ಮ.ಹರೀಶ್, ಸುಂದರರಾಜ್, ಲಹರಿ ವೇಲು, ರಘು ಭಟ್, ಸಂಜಯ್ ಗೌಡ ಮುಂತಾದ ಗಣ್ಯರು “ಚೌಕಾಬಾರ” ಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು.

ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ “ಚೌಕಾಬಾರ” ಚಿತ್ರ, ಇದೇ ಮಾರ್ಚ್ ಹತ್ತರಂದು ಬಿಡುಗಡೆಯಾಗಲಿದೆ. ಚಿತ್ರದ ಆರಂಭದಿಂದಲೂ ನಿಮ್ಮೆಲ್ಲರ ಪ್ರೋತ್ಸಾಹ ಅಪಾರ. ಮುಂದು ಕೂಡ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ ಎಂದರು ನಿರ್ಮಾಪಕಿ – ನಟಿ ನಮಿತಾರಾವ್ ಹಾಗೂ ನಿರ್ದೇಶಕ ವಿಕ್ರಮ್ ಸೂರಿ.

ಚಿತ್ರದ ನಾಯಕ ವಿಹಾನ್ ಪ್ರಭಂಜನ್, ನಟಿ ಕಾವ್ಯ ರಮೇಶ್ ಮುಂತಾದ ಕಲಾವಿದರು ಸಮಾರಂಭದಲ್ಲಿದ್ದರು. .

Related posts

ಸೆಟ್ಟೇರಿತು ಚಿನ್ನಾರಿ ಮುತ್ತನ ಮತ್ತೊಂದು ಹೊಸ ಸಿನಿಮಾ…FIR 6 to 6 ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಕ್ಲ್ಯಾಪ್

Kannada Beatz

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ .

Kannada Beatz

ಟಿವಿ9 ಸುದ್ದಿವಾಹಿನಿಯ ವತಿಯಿಂದ ಹೆಮ್ಮೆಯ ಕನ್ನಡತಿ ಪ್ರಶಸ್ತಿ

Kannada Beatz

Leave a Comment

Share via
Copy link
Powered by Social Snap