Kannada Beatz
News

ಟಿಪಿಎಲ್ ಸೀಸನ್ -2ಗೆ ಸಿದ್ದವಾಗ್ತಿದೆ ವೇದಿಕೆ – ಮಾರ್ಚ್ ನಲ್ಲಿ ನಡೆಯಲಿದೆ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಕಳೆದ ಬಾರಿ ಅದ್ದೂರಿಯಾಗಿ ಆರಂಭಗೊಂಡಿದ್ದ ಟಿಪಿಎಲ್ ಇದೀಗ ಸೀಸನ್ -2 ಕ್ಕೆ ರೆಡಿಯಾಗಿದೆ. ಮಾರ್ಚ್ ನಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದೆ. ಸೀಸನ್ 2ಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಮಾರ್ಚ್ 12,13,14,15ರಂದು ಒಟ್ಟು ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕರಾದ ಬಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಕಳೆದ ವರ್ಷದಿಂದ ಟಿಪಿಎಲ್ ಆರಂಭಿಸಿದ್ದೇವೆ. ಮೊದಲ ಸೀಸನ್ ಯಶಸ್ವಿಯಾಗಿತ್ತು. ಇದೀಗ ಎರಡನೇ ಸೀಸನ್ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಮಾರ್ಚ್ ಎರಡನೇ ವಾರ ಟಿಪಿಎಲ್ ಸೀಸನ್ 2 ನಡೆಯಲಿದೆ. ಈ ಬಾರಿ ಡೇ ಅಂಡ್ ನೈಟ್ ಪಂದ್ಯಾವಳಿ ನಡೆಯಲಿದೆ. ತಂಡ, ನಾಯಕರ ಆಯ್ಕೆ ಎಲ್ಲವೂ ನಡೆದಿದೆ. ಮಾರ್ಚ್ 7ರಂದು ಜೆರ್ಸಿ ಲಾಂಚ್ ಮಾಡಲಿದ್ದೇವೆ. ಟಿಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯರಿಗೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ದ್ವಿಚಕ್ರ ವಾಹನವನ್ನು ನೀಡುತ್ತಿದೆ. ಕಳೆದ ಬಾರಿ ಟೂರ್ನಮೆಂಟ್ ಮುಗಿದ ಮೇಲೆ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಅವರಿಗೆ ಧನ ಸಹಾಯ ಮಾಡಿದ್ದೇವು. ಈ ಬಾರಿಯೂ ಕೂಡ ಹಿರಿಯ ಕಲಾವಿದರಿಗೆ ಸಹಾಯ ಧನ ನೀಡಲು ಚಿಂತನೆ ಮಾಡಿದ್ದೇವೆ ಎಂದು ಬಿ. ಆರ್. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ಟಿಪಿಎಲ್ ಸೀಸನ್ -2 ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಆ್ಯನಿಲೀಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ಒಂದೊಂದು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಆನಿಹೆಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್ ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.

Related posts

ಅದ್ದೂರಿಯಾಗಿ ನೆರವೇರಿತು ಭಾರ್ಗವಿ ವಿಖ್ಯಾತಿ ನವತಾರ್

Kannada Beatz

ಅಪಾರ ಜನಸಾಗರದ ನಡುವೆ ಶಿಡ್ಲಘಟ್ಟದಲ್ಲಿ ನಡೆಯಿತು ‘ಕಬ್ಜ’ ಹಬ್ಬ

Kannada Beatz

ವಿಭಿನ್ನ ಕಥಾಹಂದರದ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.

administrator

Leave a Comment

Share via
Copy link
Powered by Social Snap