ಶ್ರೀಮತಿ ಪ್ರಿಯಾಂಕ ಉಪೇಂದ್ರ ಅವರು ಇನ್ನು ಮುಂದೆ ಯಾಕ್ಷನ್ ಕ್ವೀನ್ ಹಾಗಂತ ಉಗ್ರಾವತಾರ ಚಿತ್ರತಂಡ ಹೇಳುತ್ತಿದೆ.. ಅವರ ಹುಟ್ಟು ಹಬ್ಬಕೆ ಉಡುಗೊರೆಯಾಗಿ ಗುಮ್ಮಾನೀ ಗಮ್ಮಾನೀ ಹಾಡು ಬಿಡುಗಡೆ ಮಾಡಿದ್ದು. ತುಂಬಾ ಸದ್ದು ಮಾಡುತ್ತಿದೆ. ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರ್ ಅವರ ಸಹೋದರ ಕೃಷ್ಣಾ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಭರ್ಜರಿ ವೀಕ್ಷಣೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಹಾಡಿನ ವಿಶೇಷ ಎಂದರೆ
ಸಲಗ ಚಿತ್ರದ ಟಿಣಿಂಗ ಮಿಣಿ0ಗ ಹಾಡು ಹಾಡಿದ್ದ ಸಿದ್ದಿ ಸಿಸ್ಟರ್ಸ್ ಗೀತಾ ಸಿದ್ದಿ. ಗಿರಿಜಾ ಸಿದ್ದಿ ಅವರೆ. ಈ ಹಾಡಿಗೆ ಸಾಹಿತ್ಯ ಬರೆದು. ಹಾಡಿದ್ದಾರೆ. ಮತ್ತು ಚಿತ್ರದಲ್ಲಿಯು ಕಾಣಿಸಿಕೊಂಡಿದ್ದಾರೆ. ಎಸ್ ಜಿ ಎಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಯುತ ಸತೀಶ್ ಅರಿಶಿಣ ಕುಂಟೆ ಅವರು ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದು, ಸುಮನ್. ಅಜಯ್. ಪವಿತ್ರಾ ಲೋಕೇಶ್. ದಿನಾ ಅವರಂತ ಪರಭಾಷಾ ಕಲಾವಿದರ ಜೊತೆಗೆ ಕಾಕ್ರೊಚ್ ಸುಧಿ. ಬಲ ರಾಜವಾಡಿ. ವರ್ಧನ್ ತೀರ್ಥಹಳ್ಳಿ. ಹೊನ್ನವಳ್ಳಿ ಕೃಷ್ಣ. ಕೃಷ್ಣಾಜೀ ರಾವ್ (ಕೆಜಿಎಫ್ ತಾತ) ರೂಪಾ ರಾಯಪ್ಪ ಅವರಂಥ ಕನ್ನಡದ ಪ್ರತಿಭೆಗಳು ಅಭಿನಯಿಸಿದ್ದಾರೆ. ಈ ಚಿತ್ರವನ್ನು ಗುರುಮೂರ್ತಿ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ನಂದ ಕುಮಾರ್ ಛಾಯಾಗ್ರಹಣ. ಕಿನ್ನಾಳ ರಾಜ್ ಸಂಭಾಷಣೆ ಹಾಗೂ ಇನ್ನುಳಿದ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಸಂಕಲನ ವೆಂಕಿ ಯುಡಿವಿ. ಸಾಹಸ ಮಾಸ್ ಮಾದ. ವಿನೋದ್. ಅಶೋಕ್. ಶೀವು.
ನೃತ್ಯ ಮೋಹನ್. ಅರುಣ್ ರೈ. ಸಹಾಯಕ ನಿರ್ದೇಶಕರು ತ್ರಿವಿಕ್ರಮ್ ರಘು.
ಭಾರಿ ಮೊತ್ತ ನೀಡುವ ಮೂಲಕ A2 ಮ್ಯೂಸಿಕ್ ಈ ಹಾಡುಗಳನ್ನು ಬಿಡುಗಡೆ ಮಾಡುತ್ತಿದೆ.