Kannada Beatz
News

ತೆರೆಗೆ ಬರಲು ಸಿದ್ಧ ಹೊಸಬರ ‘ತೂತು ಕಾಸು’

  • ‘ತೂತ್ ಕಾಸು’ ಸಿನಿಮಾದ ಹಾಡಿಗೆ ಧ್ವನಿಯಾದ ವಾಸಕಿ ವೈಭವ್
  • ಹಂಸಲೇಖ ಶಿಷ್ಯಂದಿರ ಹೊಸ ಪ್ರಯತ್ನ: ತೆರೆಗೆ ಬರಲು ಸಿದ್ಧವಾಗಿದೆ ‘ತೂತು ಕಾಸು’

‘ತೂತ್ ಕಾಸು’ ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಸಿನಿಮಾ. ಹೊಸಬರು ಸೇರಿಕೊಂಡು ಮಾಡಿರುವ ಈ ಸಿನಿಮಾ ಇದಾಗಿದ್ದು ಇತ್ತೀಚಿಗಷ್ಟೇ ಚಿತ್ರತಂಡ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿತ್ತು. ವಿಶೇಷ ಎಂದರೆ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ. ಕಾಮಿಡಿ ಜಾನರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ರವಿ ತೇಜಸ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ರವಿತೇಜಸ್ ಅವರಿಗೆ ಇದು ಮೊದಲ ಸಿನಿಮಾ.

‘ತೂತ್ ಕಾಸು’ ಚಿತ್ರದಲ್ಲಿ ನಾಯಕನಾಗಿ ವರುಣ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯರಾಗಿ ಪ್ರಿಷಾ ಹಾಗೂ ಪ್ರೇರಣ ಭಟ್ ಮಿಂಚಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರವಿ ತೇಜಸ್ ‘ತೂತ್ ಕಾಸು’ 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸಿನ ಚುನಾವಣೆಯನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಬಗ್ಗೆ ಇದೆ’ ಎಂದು ಹೇಳಿದರು.


ಇನ್ನು ನಾಯಕ ವರುಣ್ ದೇವಯ್ಯ ಮಾತನಾಡಿ, ’10 ವರ್ಷದ ಗ್ಯಾಪ್ ನ ನಂತರ ಮಾಡಿರುವ ಸಿನಿಮಾ ಇದು. ನಾವೆಲ್ಲ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದೇವೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ’ ಎಂದರು. ಚಿತ್ರದಲ್ಲಿ ವಿನೋದ್ ಆನಂದ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

Related posts

ಪ್ರಜ್ವಲ್‌ದೇವರಾಜ್‌ಗೆ ಪನ್ನಗಭರಣ ನಿರ್ದೇಶನ

Kannada Beatz

ಸೆಟ್ಟೇರಿತು ‘ಅಪರೇಷನ್ ಯು’ ಸಿನಿಮಾ…’ಕಲಿವೀರ’ ನಿರ್ದೇಶಕರ ಹೊಸ ಕನಸು..ರಾಘಣ್ಣನ ಸಿನಿಮಾಗೆ ಪತ್ನಿ ಕ್ಲ್ಯಾಪ್

Kannada Beatz

ಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಗೆ ತೆರೆ..ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡಕ್ಕೆ ಒಲಿದ ವಿಜಯಮಾಲೆ.. ಅಪ್ಪು ಪ್ಯಾಂಥರ್ಸ್ ತಂಡ ರನ್ನರ್

Kannada Beatz

Leave a Comment

Share via
Copy link
Powered by Social Snap