Kannada Beatz
News

ಟ್ರೇಲರ್ ಮೂಲಕ ಮೋಡಿ ಮಾಡುತ್ತಿರುವ “ಭರ್ಜರಿ ಗಂಡು” ಏಪ್ರಿಲ್ 5 ಕ್ಕೆ ತೆರೆಗೆ ಬರುತ್ತಿದ್ದಾನೆ .

ಇದು ಕಿರಣ್ ರಾಜ್ ಅಭಿನಯದ ಚಿತ್ರ *

ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಹಾಗೂ ಪ್ರಸಿದ್ದ್ ನಿರ್ದೇಶನದ “ಭರ್ಜರಿ ಗಂಡು” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.

“ರತ್ನ ಮಂಜರಿ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ನನ್ನ ಸ್ನೇಹಿತ ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಅವರು ನಾಯಕ ಕಿರಣ್ ರಾಜ್ ಸೇರಿದಂತೆ ಸಾಕಷ್ಟು ಜನ ಕಲಾವಿದರನ್ನು ಈ ಚಿತ್ರಕ್ಕಾಗಿ ನನಗೆ ಪರಿಚಯಿಸಿದರು. ಚಾಕೊಲೇಟ್ ಬಾಯ್ ಎಂದೇ ಖ್ಯಾತರಾಗಿರುವ ಕಿರಣ್ ರಾಜ್, ಈ ಚಿತ್ರದ ಮೂಲಕ ಆಕ್ಷನ್ ಹೀರೋ ಆಗುವುದಂತು ಖಚಿತ. ಅಷ್ಟು ಅದ್ಭುತವಾಗಿ ಸಾಹಸವನ್ನು ಮಾಡಿದ್ದಾರೆ. “ಭರ್ಜರಿ ಗಂಡು” ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೆ ಕಥಾಹಂದರ. ಏಪ್ರಿಲ್ 5 ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಪ್ರಸಿದ್ದ್.

ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು ಎಂದು ಮಾತನಾಡಿದ ನಾಯಕ ಕಿರಣ್ ರಾಜ್, ಪ್ರಸಿದ್ದ್ ಅವರು ಬರೆದಿರುವ ಕಥೆ ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ ಎಂದರು.

ನಾಯಕಿ ಯಶ ಶಿವಕುಮಾರ್ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಕಲಾವಿದರಾದ ರಾಕೇಶ್ ರಾಜ್, ರೋಹಿತ್ ನಾಗೇಶ್ , ಸೌರಭ್ ಕುಲಕರ್ಣಿ, ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ಸಂಗೀತ ನಿರ್ದೇಶಕ ಗುಮ್ಮೆನೇನಿ ವಿಜಯ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು.

ಪ್ರಸಿದ್ದ್ ಫಿಲಂಸ್, ಅನಿಲ್ ಕುಮಾರ್ ಹಾಗೂ ಮದನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರದ ಸಹ ನಿರ್ಮಾಪಕರು ರಮೇಶ್ ಗೌಡ ಮತ್ತು ಸುದರ್ಶನ್ ಸುಂದರರಾಜ್.

Related posts

ಮಲಯಾಳಂನ “ಎಆರ್‌ಎಂ” ಸಿನಿಮಾದ ವಿತರಣೆ ಹಕ್ಕು ಪಡೆದ ಹೊಂಬಾಳೆ; ಸೆಪ್ಟೆಂಬರ್‌ 12ರಂದು ಪ್ಯಾನ್‌ ಇಂಡಿಯಾ ಚಿತ್ರ ಬಿಡುಗಡೆ

Kannada Beatz

”ಕಡಲೂರ ಕಣ್ಮಣಿ” ತೆರೆಗೆ ಬರಲು ಸಿದ್ದ .

Kannada Beatz

ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್…‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ

Kannada Beatz

Leave a Comment

Share via
Copy link
Powered by Social Snap