Kannada Beatz
News

‘ರೋಲೆಕ್ಸ್’ ಆದ ನಟ ಕೋಮಲ್ -ಶ್ರೀನಿವಾಸ್ ಮಂಡ್ಯ ನಿರ್ದೇಶನದ ನೂತನ ಚಿತ್ರ

ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ‘ಕಾಲಾಯ ನಮಃ’ ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆ ಸಿನಿಮಾ ನಂತರ ಮತ್ತೊಂದು ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

‘ಬಿಲ್ ಗೇಟ್ಸ್’ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಹೊಸದೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ‘ರೋಲೆಕ್ಸ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಕೋಮಲ್ ನಟಿಸುತ್ತಿದ್ದಾರೆ. ಈ ಚಿತ್ರ ಕಟೆಂಟ್ ಬೆಸ್ಡ್ ಸಿನಿಮಾವಾಗಿದ್ದು ಕೋಮಲ್ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ಫೀನಿಕ್ಸ್ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹು ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ರಾಕೇಶ್. ಸಿ. ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಜನವರಿಯಲ್ಲಿ ‘ರೋಲೆಕ್ಸ್ ‘ ಸಿನಿಮಾ ಸೆಟ್ಟೇರಲಿದ್ದು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಳ್ಳಲಿದೆ.

Related posts

‘ಗಜರಾಮ’ ಟೈಟಲ್ ಟ್ರ್ಯಾಕ್ ರಿಲೀಸ್…ಡಿಸೆಂಬರ್‌ 27ಕ್ಕೆ ಶುರು ರಾಜವರ್ಧನ್ ಅಬ್ಬರ

Kannada Beatz

ಗೋಲ್ಡನ್‌ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು “ವರದ”‌ ಚಿತ್ರದ ಹಾಡು.

Kannada Beatz

“ತುರ್ತು ನಿರ್ಗಮನ” ಚಿತ್ರದಿಂದ ಮತ್ತೆ ಎಂಟ್ರಿ “ಸುನಿಲ್ ರಾವ್”

Kannada Beatz

Leave a Comment

Share via
Copy link
Powered by Social Snap