Kannada Beatz
News

ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಶಾಖಾಹಾರಿ’ ಚಿತ್ರದ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದ ನಿರ್ದೇಶಕ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿಯ ರಮಣೀಯ ತಾಣಗಳು ಹಾಗೂ ಹಿಮಾಚಲ ಪ್ರದೇಶದ ಮನಮೋಹಕ ವಾತಾವರಣದಲ್ಲಿ ಈ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.
​ಈ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್ ಅವರು ಹಿಂದೆಂದೂ ಕಾಣಿಸಿಕೊಂಡಿರದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯದ ಹೊಸ ಮಗ್ಗುಲನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ನಾಯಕಿಯಾಗಿ ‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸಿದ್ದು, ಧೀರನ್ ಹಾಗೂ ಅಮೃತಾ ಜೋಡಿ ತೆರೆಯ ಮೇಲೆ ಹೊಸ ಅಲೆ ಮೂಡಿಸುವ ನಿರೀಕ್ಷೆಯಿದೆ.

ಇದರೊಂದಿಗೆ ಕೆ.ಜಿ.ಎಫ್ ಖ್ಯಾತಿಯ ಅಯ್ಯಪ್ಪ ಶರ್ಮ, ಅಚ್ಯುತ್ ಕುಮಾರ್ & ಗೋಪಾಲಕೃಷ್ಣ ದೇಶಪಾಂಡೆ ಅವರಂತಹ ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿಮಾಚಲದ ಪಬ್ಬಾರ್ ಕಣಿವೆಯ ಹಿನ್ನೆಲೆಯಲ್ಲಿ ಸಾಗುವ ರೋಚಕ ಅಡ್ವೆಂಚರಸ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಅವರ ಸಂಗೀತ ಹಾಗೂ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಬಲ ತುಂಬಿದೆ.

​ಸದ್ಯ ಚಿತ್ರೀಕರಣದ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ‘ಪಬ್ಬಾರ್’ ಸಿನಿಮಾ ತಂಡವು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದೆ. ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಕೆರಳಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಟೀಸರ್, ನಿರೀಕ್ಷೆಯನ್ನು ಡಬಲ್ ಮಾಡಿದೆ.

ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅದ್ದೂರಿಯಾಗಿ ಘೋಷಿಸಲಿದೆ.

Related posts

ಬಾಲ್ಯ ಸ್ನೇಹಿತನಿಗೆ ಸಿಂಪಲ್ ಸುನಿ ಹಾರೈಕೆ

Kannada Beatz

N-1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ಸ್ WWCL ವುಮೇನ್ಸ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಲೋಗೊ ಲಾಂಚ್…

Kannada Beatz

ಚಮಕ್ ಜೋಡಿ ‘ಸಖತ್’ ಟೀಸರ್ ರಿಲೀಸ್…ಇದು ಸಿಂಪಲ್ ಸುನಿ ಡೈಲಾಗ್ ಸ್ಪೆಷಲ್!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಮೋಸ್ಟ್ ಅವೇಟೇಡ್ ಸಿನಿಮಾ ಸಖತ್. ಪೋಸ್ಟರ್ ಹಾಗೂ ಸಾಂಗ್ ಮೂಲಕವೇ ಹೊಸತನ ತೆರೆದಿಟ್ಟಿರೋ ಸಖತ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಗಣೇಶ್ ಸ್ಟೈಲೀಶ್ ಲುಕ್.. ಸುನಿ ಡೈಲಾಗ್ ಕಿಕ್.. ಜೂಡಾ ಸ್ಯಾಂಡಿ ಮ್ಯೂಸಿಕ್.. ಸಂತೋಷ್ ಕ್ಯಾಮೆರಾ ವರ್ಕ್.. ನಿಶ್ವಿಕಾ ನಾಯ್ಡು ಇನೋಸೆಂಟ್ ಆಕ್ಟಿಂಗ್.. ಟೋಟಲಿ ಟೀಸರ್ ಕಂಪ್ಲೀಟ್ ಎಂಟರ್ ಟ್ರೈನ್ ಮೆಂಟ್ ಪ್ಯಾಕ್ಡ್.
ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಗಣೇಶ್ ಅದ್ಭುತವಾಗಿ ನಟಿಸಿದ್ದು, ಸದಾ ಡಿಫರೆಂಟ್ ಡೈಲಾಗ್ ಕೊಡೋ ಸುನಿ ಡೈಲಾಗ್ಸ್ ಬಗ್ಗೆ ಹೇಳೋ ಆಗಿಲ್ಲ. ಸಖತ್ ಪಂಚಿಂಗ್ ಡೈಲಾಗ್ ನೋಡುಗರನ್ನು ಬಿದ್ದು ಬಿದ್ದು ನಗಿಸುವಂತಿದೆ. ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ ಸಖತ್ ವೈರಲ್ ಆಗ್ತಿರೋ ಸಖತ್ ಟೀಸರ್, 2021ರ ಬೆಸ್ಟ್ ಕಾಮಿಡಿ ಟೀಸರ್ ಆಗಿ ಅನ್ನೋ ಬ್ರ್ಯಾಂಡ್ ತನ್ನದಾಗಿಸಿಕೊಂಡಿದೆ.
ಸಿಂಪಲ್ ಸುನಿ ಓಂಕಾರ ಹಾಕಿರುವ ಸಖತ್ ಸಿನಿಮಾದಲ್ಲಿ ಮುಗುಳುನಗೆ ಹುಡ್ಗ ಗಣಿ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಗೆ ಜೋಡಿಯಾಗಿ ಬೊಗಸೆ ಕಣ್ಗಳ ಚೆಲುವೆ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ. ಇದೊಂದು ಕಾಮಿಡಿ ಕಂ ಕ್ರೈಮ್ ಥಿಲ್ಲರ್ ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾವನ್ನು ಎಣೆಯಲಾಗಿದೆ.
ಕೆ ವಿ ಎನ್ ಪ್ರೊಡಕ್ಷನ್ ಬ್ಯಾನರ್ ನಡಿ ತಯಾರಾಗಿರುವ ಸಖತ್ ಸಿನಿಮಾಕ್ಕೆ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್, ಶಾಂತ ಕುಮಾರ್ ಸಂಕಲನ, ಜ್ಯೂಡ ಸ್ಯಾಂಡಿ ಸಂಗೀತ ಸಿನಿಮಾಕ್ಕಿದೆ. ಈಗಾಗಲೇ ಸೆನ್ಸಾರ್ ಮುಗಿಸಿರುವ ಸಖತ್ ಸಿನಿಮಾ ನವೆಂಬರ್ 12ರಂದು ಥಿಯೇಟರ್ ಅಂಗಳ ಪ್ರವೇಶಿಸಲಿದೆ.

administrator

Leave a Comment

Share via
Copy link
Powered by Social Snap