Kannada Beatz
News

ದುನಿಯಾ ವಿಜಯ್ ನಟನೆಯ ಲ್ಯಾಂಡ್‌ಲಾರ್ಡ್ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ

ನಟ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯಲ್ಲಿ ಮೂಡಿಬರುತ್ತಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ನಿನ್ನೆ (ಜ.8ರಂದು) ಸಂಜೆ ಧಾರವಾಡದಲ್ಲಿ ‘ರೋಮಾಂಚಕ‘ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಹಿರಿಯ ಪುತ್ರಿ ರಿತನ್ಯಾ ವಿಜಯ್‌ಕುಮಾರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ದುನಿಯಾ ವಿಜಯ್‌ ಮಗಳ ಪಾತ್ರದಲ್ಲಿ ನಟಿಸಿದ್ದು, ‘ಭಾಗ್ಯ’ ಎಂಬ ಪಾತ್ರಕ್ಕೆ ಜೀವತುಂಬಿದ್ದಾರೆ. ರಿತನ್ಯಾ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಿತನ್ಯಾ ವಿಜಯ್‌ಕುಮಾರ್ ಹಾಗೂ ಶಿಶಿರ್ ಬೈಕಾಡಿ ಕಾಣಿಸಿಕೊಂಡಿರುವ ‘ರೋಮಾಂಚಕ’ ಹಾಡು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಲ್ಯಾಂಡ್‌ಲಾರ್ಡ್ ಸಿನಿಮಾದ ಮೂಲಕ ರಿತನ್ಯಾ ವಿಜಯ್‌ಕುಮಾರ್ ಚಂದನವನಕ್ಕೆ ಕಾಲಿಟ್ಟಿದ್ದಾರೆ.

ಶಿಶಿರ್ ಬೈಕಾಡಿ ಅವರು ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾನಲ್ಲಿ ಮುಸ್ತಫಾನ ಪಾತ್ರದಲ್ಲಿ ನಟಿಸಿದ್ದರು. ಈಗ ಲ್ಯಾಂಡ್‌ಲಾರ್ಡ್‌ ಸಿನಿಮಾದಲ್ಲಿ ದುನಿಯಾ ವಿಜಯ್‌ ಮಗಳ ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಇದೇ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ ರೋಮಂಚಕ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಜನವರಿ 23ರಂದು ಲ್ಯಾಂಡ್‌ಲಾರ್ಡ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನಿರ್ದೇಶಕ ಜಡೇಜ ಕೆ.ಹಂಪಿ ನಿರ್ದೇಶನ ಮಾಡುತ್ತಿದ್ದು, ಕೆ.ವಿ ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಅವರು ನಿರ್ಮಾಣ ಮಾಡುತ್ತಿದ್ದಾರೆ.

Related posts

ದಿಲೀಪ್ ರಾಜ್ ಈಗ “ಮಹಾನ್ ಕಲಾವಿದ”.

Kannada Beatz

ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್”. .

Kannada Beatz

ಇದೇ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ “ಕರ್ಮಣ್ಯೇ ವಾಧಿಕರಸ್ತೆ”

Kannada Beatz

Leave a Comment

Share via
Copy link
Powered by Social Snap