Kannada Beatz
News

ಬಾಕ್ಸ್ ಆಫೀಸ್ ಸುಲ್ತಾನ್ (ಯಶ್) ಕೆಜಿಎಫ್-2..

Rating 5/5

ಪ್ಯಾಷನ್ ಗಾಗಿ ಕೆಲಸ ಮಾಡಿದ್ರೆ ದುಡ್ಡು-ಹೆಸ್ರು ಹೇಗೆ ಹರಿದು ಬರುತ್ತೆ ರಿಯಲ್ ಲೈಫ್ ನಲ್ಲಿ ತೋರಿಸಿಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್.. ಕಾಸಿಗಾಗಿ ಕೆಲಸ ಮಾಡಿದ್ರೆ ಹೆಸ್ರು, ಅಧಿಕಾರ ಹೇಗೆ ಹರಿಯುತ್ತೆ ಅಂತ ರೀಲ್ ಲೈಫ್ ನಲ್ಲಿ ತೋರಿಸಿದ್ದಾನೆ ರಾಕಿ ಭಾಯ್. ಕೆಜಿಎಫ್ 400ಗ್ರಾಂ ಚಿನ್ನವಾದ್ರೆ.. ಕೆಜಿಎಫ್-2 40ಕೆಜಿ ಚಿನ್ನ..

ಈ ಗ್ರಾಂ..ಕೆಜಿ ಲೆಕ್ಕಾಚಾರ ಗೊತ್ತಾಗ್ಬೇಕು ಅಂದ್ರೆ ಸಿನಿಮಾ ನೋಡ್ಬೇಕು.. ರಣ ರಣ ರಣಧೀರ.. ಧೀರ ಧೀರ ಸುರ ಸುಲ್ತಾನಾ.. ಯಾರು ಅಂತ ಕೇಳಿದ್ರೆ.. ಸಿನಿಮಾದ ಪ್ರತಿಯೊಬ್ಬ ಟೆಕ್ನಿಷಿಯನ್,ಕಲಾವಿದ ಅನ್ನಬಹುದು. 8 ವರ್ಷದಿಂದ ಕೆಜಿಎಫ್ ನ ಅಗೆದು ಬಗೆದು ಕಥೆ ಕಟ್ಟಿರೋ ಚಿತ್ರತಂಡಕ್ಕೆ 9 ಗಣಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಚಿನ್ನ ಸಿಗ್ತಾನೆ ಇದೆ. ಕೆಜಿಎಫ್ ಗಣಿ ತೋಡುವಾಗ್ಲೂ ದುಡ್ಡು.. ಅದ್ರ ಹೆಸರಲ್ಲಿ ಸಿನಿಮಾ ಮಾಡಿದಾಗ್ಲೂ ದುಡ್ಡು.. ಆ ಮಣ್ಣಿಗೇನೋ ಶಕ್ತಿ ಇದೇ ಬಿಡಿ. ಪ್ರಶಾಂತ್ ನೀಲ್ ಹಠಕ್ಕೆ ಬಿದ್ದು ಕಥೆ ಕಟ್ಟಿದ್ದಾರೆ. ಅವ್ರಿಗೆ ಶಾಕ್ ಹೊಡ್ಸೋ ಹಂಗೆ ಭುವನ್ ಕ್ಯಾಮರಾದಲ್ಲಿ ಕ್ಯಾಪ್ಚರ್ ಮಾಡಿದ್ದಾರೆ. ಇವ್ರಿಬ್ಬರು ಕಿತ್ತು ಗುಡ್ಡೆಹಾಕಿರೋದನ್ನ, ಮ್ಯೂಸಿಕ್ ರಿ-ರೆಕಾರ್ಡಿಂಗ್ ಅನ್ನೋ ಟ್ರಕ್ ಗೆ ತುಂಬಿ ದೇಶ ವಿದೇಶಗಳಿಗೆ ಬಂಗಾರದಷ್ಟೆ ಬೆಲೆಬಾಳೋ ಸಿನಿಮಾವನ್ನಾಗಿ ರವಿಬಸ್ರೂರು ಹಂಚಿದ್ದಾರೆ. ಇವರು ಈ ಸುವರ್ಣ ಸವಾರಿಯ ಸುಲ್ತಾನ ನಿರ್ಮಾಪಕ ವಿಜಯ್ ಕಿರಗಂದೂರ್. 100+ ರಾಕಿಯ ಲೆನಿನ್ ಸ್ಯೂಟ್, ಮಂಡ್ಯ ಸ್ಲಾಂಗ್ ಡೈಲಾಗ್ ಡೆಲಿವರಿ, ಅನಂತ್ ನಾಗ್ ಗೆ ಪ್ರಕಾಶ್ ರೈ ರೀಪ್ಲೇಸ್ ಮೆಂಟ್ ನಾಜೂಕಾಗಿಸಿ ಕೊಟ್ಟಿದೆ ಸ್ಕ್ರಿಪ್ಟ್. ‘ದೊಡ್ಡಮ್ಮ ಮಿಷಿನ್ ಗನ್’ ನಿಂದ ಹಾರೋ ಕಿಲೋಗಟ್ಲೆ ಬುಲೆಟ್ ನಷ್ಟೆ ಡೈಲಾಗ್ ಪಂಚ್ ಗಳನ್ನ ತೂಫಾನ್ ತರಾ ಹಾರಿಸಿ ಬಿಟ್ಟಿದ್ದಾರೆ ರಾಕಿ ಭಾಯ್.

ಆದ್ರೂ ‘ಕಲಾಶ್ನಿಕೋವ್’ನಂಥಾ ರೀನಾ ಅಂದ್ರೆ ರಾಕಿಗೆ ಅಮ್ಮನ್ನಷ್ಟೆ ಪ್ರೀತಿ. ಅಧೀರ ಅನ್ನೋ ರಾಕ್ಷಸನಿಗೆ ತಾನೆಂಥಾ ಕ್ರಿಮಿನಲ್,ಪ್ರಧಾನಿ ರಮಿಕಾ ಸೇನ್ ಗೆ ತಾನೆಂಥಾ ಬ್ಯುಸಿನೆಸ್ ಮನ್ ಅಂತ ತೋರಿಸಿಕೊಡೋ ರಾಕಿಗೆ ತನ್ನ ತಾಯಿಗೆ ಕೊಟ್ಟ ಮಾತಷ್ಟೆ ಮುಖ್ಯವಾ..? ಅದನ್ನ ನೋಡೋಕೆ ಇನ್ನೂ ‘3ನೇ ಅಧ್ಯಾಯಕ್ಕೆ’ (3 ವರ್ಷ?) ಕಾಯಬೇಕಾಗಬಹುದು. ತಪ್ಪು ಹುಡುಕಿದ್ರೆ ಸಾವಿರ ಸಿಗಬಹುದು. ಆದ್ರೆ ಕೆಜಿಎಫ್ ಥರದ್ದೇ ಇನ್ನೊಂದು ಮಾಸ್ಟರ್ ಪೀಸ್ ಮಾಡೋಕೆ ಬಹುಶ: ಕೆಜಿಎಫ್ ಟೀಮ್ ಕೈಯಲ್ಲೇ ಸಾಧ್ಯವಿಲ್ಲವೇನೋ..!

ಆದ್ರೂ 80ರ ದಶಕದ ನರಾಚಿ ಅನ್ನೋ ನರಕದ ದೇವ್ರು ರಾಕಿಯ ಗುಂಗಿಂದ ಹೊರಬರೋಕೆ ತುಂಬಾ ಟೈಮ್ ಬೇಕಾಗೋದಂತೂ ನಿಜ.. 88 ವರ್ಷಬೇಕಾಯ್ತು ಕನ್ನಡ ಸಿನಿಮಾಕ್ಕೆ ಈ ಮಟ್ಟದ ವಿಶ್ವಮನ್ನಣೆ ಸಿಗೋಕೆ ಅನ್ನೋದು ನಿಜ.. 10,000+ ಸ್ಕ್ರೀನ್, 75,000+ ಶೋ ಒಂದೇ ದಿನದಲ್ಲಿ.. ಅಬ್ಬ..ಸ್ವಲ್ಪ ರಿಚ್ ಆಗಿ ಮಾಡ್ತಾರೆ ಅಂದುಕೊಂಡಿದ್ವಿ.. ಇವರು ಅದಕ್ಕಿಂತ ಹೆಚ್ಚಾಗಿ ಮಾಡಿದ್ದಾರೆ.. ರಾಕಿ ಭಾಯ್.. ಕಂಗ್ರಾಜುಲೇಷನ್..ವಿ ಲವ್ ಯೂ..!!

KGFChapter2 #KGF2review #yash #PrashanthNeel #rockingstaryash #HombaleFilms #RaviBasrur #BhuvanGowda

Related posts

ಯುಗಾದಿ ಹಬ್ಬಕ್ಕೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್

Kannada Beatz

ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್– ‘ಕುಬುಸ’ ಟ್ರೈಲರ್ ರಿಲೀಸ್

Kannada Beatz

ಡಾಲಿ ಧನಂಜಯ ಅಭಿನಯದ Once Upon A Time “ಜಮಾಲಿಗುಡ್ಡ” ಚಿತ್ರದ ಚಿತ್ರೀಕರಣ ಪೂರ್ಣ.

Kannada Beatz

Leave a Comment

Share via
Copy link
Powered by Social Snap